ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನಭವಿಷ್ಯ,ಸೆಪ್ಟೆಂಬರ್ 23, 2026: ಹೊಸ ಸಂಪರ್ಕಗಳು ವ್ಯಾಪಾರಕ್ಕೆ ಇಂದು ಲಾಭ ನೀಡಲಿವೆ!

Horoscope Today September 23rd: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಏಕಾದಶಿ ತಿಥಿ, ಶ್ರವಣ ನಕ್ಷತ್ರದ, ಸೆಪ್ಟೆಂಬರ್ 23ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.

ಹೊಸ ಆದಾಯದ ಮೂಲ ಸೃಷ್ಟಿಯಾಗಲಿದೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Sep 23, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ

ಮೇಷರಾಶಿ: ಇಂದು ಕೆಲಸ ಕಾರ್ಯದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆದರೆ ಇಂದು ಆತುರದ ನಿರ್ಧಾರಗಳನ್ನು ತಪ್ಪಿಸಿ. ಹಣಕಾಸಿನಲ್ಲಿ ಜಾಗೃತಿ ವಹಿಸಬೇಕಾಗುತ್ತದೆ.

ವೃಷಭ ರಾಶಿ: ಇಂದು ಕೆಲಸ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುವ ದಿನವಾಗಿದೆ. ಅದೇ ರೀತಿ ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ದೊರೆಯಬಹುದು

ಮಿಥುನ ರಾಶಿ: ಇಂದು ಹೊಸ ಯೋಜನೆಗಳನ್ನು ಮಾಡಲು ಸರಿಯಾದ ಸಮಯವಾಗಿದೆ. ಅದೇ ರೀತಿ ನಿಮ್ಮ ಸ್ನೇಹಿತರ ಸಹಕಾರದಿಂದ ಕೆಲಸಗಳು ಸುಗಮವಾಗಿ ನಡೆಯುತ್ತದೆ.

ಕಟಕ ರಾಶಿ: ಇಂದು ಉತ್ತಮವಾದ ದಿನವಾಗಿದ್ದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಬಹುದು‌. ಆದತೆ ಹಣದ ವ್ಯವಹಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಿ.

ಸಿಂಹ ರಾಶಿ: ಈ ರಾಶಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ನಿಮ್ಮ ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳಬಹುದು.

ಕನ್ಯಾರಾಶಿ: ಇಂದು ನಿಮಗೆ ಕಷ್ಟಕರವಾದ ದಿನವಾಗಿದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಲಿದ್ದು ಹಲವು ತೊಡಕುಗಳು ಕಾಣಬಹುದು‌. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.

Vastu Tips: ಅಡುಗೆಮನೆಯ ಈ 5 ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹೆಚ್ಚಲಿದೆ ಸುಖ-ಸಮೃದ್ಧಿ

ತುಲಾ ರಾಶಿ: ಇಂದು ಹೊಸ ಪರಿಚಯಗಳು ಭವಿಷ್ಯದಲ್ಲಿ  ಲಾಭವಾಗಬಹುದು. ಆದರೆ ಉದ್ಯೋಗದಲ್ಲಿ ಬದಲಾವಣೆಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ನಿಮ್ಮ ಬುದ್ಧಿವಂತಿಗೆಗೆ ತಕ್ಕ ಪರಿಹಾರ ಇಂದು ಸಿಗಬಹುದು. ಅದೇ ರೀತಿ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಮಯ. ವ್ಯಾಪಾರಸ್ಥರಿಗೆ ಅನುಕೂಲಕರ ಬೆಳವಣಿಗೆ ಯಾಗಬಹುದು.

ಧನು ರಾಶಿ: ಇಂದು ಉದ್ಯೊಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುತ್ತೀರಿ. ದೂರದ ಪ್ರಯಾಣದ ಯೋಜನೆ ಇಂದು ಯಶಸ್ಸುಗೊಳ್ಳುತ್ತದೆ.

ಮಕರ ರಾಶಿ: ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವ ಸಾಧ್ಯತೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕುಟುಂಬದಲ್ಲಿ ನಿಮ್ಮ ಮಾತಿಗೆ ಗೌರವ ಸಿಗಲಿದೆ.

ಕುಂಭ ರಾಶಿ: ಇಂದು ಕೈ ಹಾಕಿದ ಕೆಲಸಗಳೂ ಯಶಸ್ಸು ಗೊಳ್ಳುತ್ತವೆ‌.‌ಹೊಸ ಯೋಜನೆ ಆರಂಭಿಸಲು ಅನುಕೂಲಕರ ದಿನ. ಮಾತುಕತೆಯಲ್ಲಿ ಇಂದು ಜಾಗೃತಿ ವಹಿಸಬೇಕಾಗುತ್ತದೆ.

ಮೀನ ರಾಶಿ: ಇಂದು  ಮನಸ್ಸಿಗೆ ನೆಮ್ಮದಿ ನೀಡುವ ದಿನವಾಗಿದೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದ್ದು ಆರ್ಥಿಕವಾಗಿ ಸಬಲ ಗೊಳ್ಳುತ್ತೀರಿ.