ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅನಂತ್ ಅಂಬಾನಿಯಿಂದ ಕೇರಳದ ಎರಡು ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ 18 ಕೋಟಿ ರುಪಾಯಿ ದೇಣಿಗೆ

Anant Ambani: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿ‌ದ್ದಾರೆ.

ಅನಂತ್ ಅಂಬಾನಿಯಿಂದ ಕೇರಳದ ದೇವಾಲಯಗಳಿಗೆ 18 ಕೋಟಿ ರುಪಾಯಿ ದೇಣಿಗೆ

ಕೇರಳದ ಗುರುವಾಯೂರ್ ದೇವಾಲಯದಲ್ಲಿ ಅನಂತ್ ಅಂಬಾನಿ. -

Profile
Siddalinga Swamy Apr 7, 2026 7:03 PM

ಮುಂಬೈ, ಏ.7: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ (Anant Ambani) ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದ್ದಾರೆ.ಎರಡೂ ದೇವಾಲಯಗಳಿಗೆ ಒಟ್ಟು ₹6 ಕೋಟಿ ದೇಣಿಗೆ ನೀಡಿದರು ಮತ್ತು ರಾಜರಾಜೇಶ್ವರಂ ದೇವಾಲಯದ ಸಮಗ್ರ ಪುನಃಸ್ಥಾಪನೆಗಾಗಿ ₹12 ಕೋಟಿ ದೇಣಿಗೆ ನೀಡಿದ್ದಾರೆ.

ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಪಟ್ಟಣದಲ್ಲಿ ಇರುವ ಪ್ರಾಚೀನ ರಾಜರಾಜೇಶ್ವರಂ ದೇವಾಲಯಕ್ಕೆ ಅನಂತ್ ಅಂಬಾನಿ 3 ಕೋಟಿ ದೇಣಿಗೆ ನೀಡಿದ್ದಾರೆ. ದೇವಾಲಯದ ಸಮಗ್ರ ನವೀಕರಣಕ್ಕಾಗಿ ಅವರು ಹೆಚ್ಚುವರಿಯಾಗಿ 12 ಕೋಟಿ ರುಪಾಯಿ ದೇಣಿಗೆ ಅನ್ನು ಅವರು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ ಬಹಳ ದಿನಗಳಿಂದ ಶಿಥಿಲಾವಸ್ಥೆಯಲ್ಲಿ ಇದ್ದ ದೇವಾಲಯದ ಐತಿಹಾಸಿಕ ಪೂರ್ವ ಗೋಪುರದ ಪುನರ್ನಿರ್ಮಾಣ ಮತ್ತು ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಮತ್ತು ಪಾರ್ಕಿಂಗ್ ಸೌಲಭ್ಯಗಳ ಸುಧಾರಣೆ ಸೇರಿವೆ.

ಆ ನಂತರ, ಅನಂತ್ ಅಂಬಾನಿ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ಟ್ರಸ್ಟ್‌ಗೆ 3 ಕೋಟಿ ದೇಣಿಗೆ ನೀಡಿದರು. ದೇವಾಲಯ ಸಂಪ್ರದಾಯಗಳಿಗೆ ಸಂಬಂಧಿಸಿದ ಆನೆಗಳ ಕಲ್ಯಾಣಕ್ಕಾಗಿ ಆಸ್ಪತ್ರೆಗಳು, ಸರಪಳಿ ಇಲ್ಲದ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳಿಗೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡಿಕೊಳ್ಳುವಾಗ ಪ್ರಾಣಿಗಳಿಗೆ ಮಾನವೀಯ ಮತ್ತು ವೈಜ್ಞಾನಿಕ ಆರೈಕೆಯನ್ನು ದೊರಕಿಸಲು ಮೀಸಲಾದ ಆಸ್ಪತ್ರೆಗಳು, ಸರಪಳಿ ಇಲ್ಲದಂಥ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ. ಈ ಉಪಕ್ರಮವು ಅನಂತ್ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಯೋಜನೆಯಾದ 'ವಂತಾರ'ಕ್ಕೆ ಸಂಬಂಧಿಸಿದ ಪ್ರಯತ್ನಗಳ ಭಾಗವೆಂದು ಪರಿಗಣಿಸಲಾಗಿದೆ. ದೇವಾಲಯ ಆಡಳಿತವು ಅವರನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿತು. ದೇವಾಲಯಗಳ ದೇವಸ್ವಂ ಮಂಡಳಿಗಳ ಅಧಿಕಾರಿಗಳು ಮತ್ತು ಪುರೋಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Water4Life: ಭಾರತದ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್‌ನಿಂದ ಜನ ಚಳವಳಿ

ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು ಕೇವಲ ಪೂಜಾ ಸ್ಥಳಗಳಲ್ಲ, ಬದಲಾಗಿ ಸಮಾಜ, ಪ್ರಕೃತಿ ಮತ್ತು ಕರುಣೆಯನ್ನು ಸಂಪರ್ಕಿಸುವ ಜೀವಂತ ಸಂಸ್ಥೆಗಳು ಎಂದು ಹೇಳಿದರು. ಭವಿಷ್ಯದ ಪೀಳಿಗೆಗೆ ಈ ಪರಂಪರೆಯನ್ನು ಸಂರಕ್ಷಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.