ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಗ್ರಾಮೀಣ ಮಹಿಳಾ ಉದ್ಯಮಶೀಲತೆಗೆ ಮೆಚ್ಚುಗೆ: ಸ್ವಸಹಾಯ ಸಂಘಗಳ ಚಟುವಟಿಕೆ ವೀಕ್ಷಿಸಿದ ಕೇಂದ್ರ ಜಂಟಿ ಕಾರ್ಯದರ್ಶಿ

ಯಳುವಹಳ್ಳಿ ಗ್ರಾಮದ ಮಾರಿಕಾಂಬ ಸ್ವಸಹಾಯ ಸಂಘದ ಕಮಲಮ್ಮ ನಡೆಸುತ್ತಿರುವ ಬಟ್ಟೆ ಅಂಗಡಿಗೆ ಭೇಟಿ ನೀಡಿದ ಜಂಟಿ ಕಾರ್ಯದರ್ಶಿಗಳ ತಂಡ, NRLM ಯೋಜನೆಯಡಿ ಕೃಷಿಯೇತರ ವಲಯದಲ್ಲಿ ಕೈಗೊಂಡಿರುವ ಜೀವನೋಪಾಯ ಚಟುವಟಿಕೆ, ಅಂಗಡಿಯ ವಹಿವಾಟು ಹಾಗೂ ಉದ್ಯಮದಿಂದ ದೊರೆಯುತ್ತಿರುವ ಆದಾಯದ ಕುರಿತು ಮಾಹಿತಿ ಪಡೆದುಕೊಂಡಿತು.

ಗ್ರಾಮೀಣ ಮಹಿಳಾ ಉದ್ಯಮಶೀಲತೆಗೆ ಮೆಚ್ಚುಗೆ

-

Profile
Ashok Nayak Sep 23, 2026 10:33 PM

ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಕೈಗೊಂಡಿ ರುವ ಉದ್ಯಮ ಹಾಗೂ ಜೀವನೋಪಾಯ ಚಟುವಟಿಕೆಗಳು ಅವರ ಆರ್ಥಿಕ ಸ್ವಾವಲಂಬನೆಗೆ ಹೇಗೆ ನೆರವಾಗುತ್ತಿವೆ ಎಂಬುದನ್ನು ಅರಿಯುವ ಉದ್ದೇಶದಿಂದ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ (MoRD) ಜಂಟಿ ಕಾರ್ಯದರ್ಶಿ ಪವನೇಶ್ ಕುಮಾರ್ ಶರ್ಮಾ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಸ್ವಸಹಾಯ ಸಂಘಗಳ ಮಹಿಳಾ ಉದ್ಯಮಿಗಳ ಸ್ಥಳಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಯಳುವಹಳ್ಳಿ ಗ್ರಾಮದ ಮಾರಿಕಾಂಬ ಸ್ವಸಹಾಯ ಸಂಘದ ಕಮಲಮ್ಮ ನಡೆಸುತ್ತಿರುವ ಬಟ್ಟೆ ಅಂಗಡಿಗೆ ಭೇಟಿ ನೀಡಿದ ಜಂಟಿ ಕಾರ್ಯದರ್ಶಿಗಳ ತಂಡ, NRLM ಯೋಜನೆಯಡಿ ಕೃಷಿಯೇತರ ವಲಯದಲ್ಲಿ ಕೈಗೊಂಡಿರುವ ಜೀವನೋಪಾಯ ಚಟುವಟಿಕೆ, ಅಂಗಡಿಯ ವಹಿವಾಟು ಹಾಗೂ ಉದ್ಯಮದಿಂದ ದೊರೆಯುತ್ತಿರುವ ಆದಾಯದ ಕುರಿತು ಮಾಹಿತಿ ಪಡೆದುಕೊಂಡಿತು.

ಇದನ್ನೂ ಓದಿ: Chikkaballapur News: ಹೆದ್ದಾರಿ ಅಗಲೀಕರಣಕ್ಕೆ ಜೆಸಿಬಿ ಗರ್ಜನೆ; ಎರಡು ತಿಂಗಳಲ್ಲಿ ರಸ್ತೆ ಪೂರ್ಣ

ಬಳಿಕ ನಂದಿ ಗ್ರಾಮದ ಮಂಜುಳಾ ಜೆ. ಅವರ ಕಾವೇರಿ ಸ್ವಸಹಾಯ ಸಂಘದ ಬಾಳೆಹಣ್ಣಿನ ಟಿಶ್ಯೂ ಕಲ್ಚರ್ ಚಟುವಟಿಕೆಯನ್ನು ವೀಕ್ಷಿಸಿದರು. ಕೃಷಿ ವಲಯದಡಿ ಕೈಗೊಂಡಿರುವ ಉದ್ಯಮದಲ್ಲಿ ಉತ್ಪಾದನೆ, ಉತ್ಪನ್ನಗಳ ಮಾರಾಟ, ಆದಾಯ ಹಾಗೂ ಮಹಿಳೆಯರ ಜೀವನೋಪಾಯಕ್ಕೆ ದೊರೆಯುತ್ತಿರುವ ನೆರವಿನ ಕುರಿತು ಚರ್ಚಿಸಿದರು.

ಗ್ರಾಮೀಣ ಮಹಿಳೆಯರು ಸ್ಥಳೀಯ ಸಂಪನ್ಮೂಲ ಹಾಗೂ ಕೌಶಲ್ಯ ಬಳಸಿಕೊಂಡು ಸ್ವ ಉದ್ಯೋಗ ಕೈಗೊಂಡಿರುವ ವಿಧಾನಗಳ ಬಗ್ಗೆ ತಂಡ ಮಾಹಿತಿ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಕರ್ನಾಟಕ SRLMನ SPM ಆನಂದ್ ಬಿ.ವಿ., NACER ನಿರ್ದೇಶಕ ಪ್ರಶಾಂತ್, NAR ನಿರ್ದೇಶಕ ಕೀರ್ತಿರಾಜ್, ಚಿಕ್ಕಬಳ್ಳಾಪುರ RSETI ನಿರ್ದೇಶಕರು ಹಾಗೂ ಸಿಬ್ಬಂದಿ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು, NRLM ಸಿಬ್ಬಂದಿ, RSETIಯಲ್ಲಿ ತರಬೇತಿ ಪಡೆದ ಸ್ವಸಹಾಯ ಸಂಘಗಳ ಉದ್ಯಮಿಗಳು, ಡೊಮೈನ್ ಸ್ಕಿಲ್ ಟ್ರೈನರ್ಸ್ (DSTs) ಹಾಗೂ RSETI ವಿದ್ಯಾರ್ಥಿಗಳು ಮತ್ತು ತರಬೇತಿ ನಿರತರು ಉಪಸ್ಥಿತರಿದ್ದರು.