Astro Tips: ಜಾತಕ ದೋಷ ನಿವಾರಣೆಗೆ ಹವಳ ರತ್ನ: ಆದರೆ ಯಾವ ರಾಶಿಯವರು ಧರಿಸಿದರೆ ಒಳಿತು?
ಜಾತಕದಲ್ಲಿನ ಗ್ರಹದೋಷಗಳಿಂದ ಉಂಟಾಗುವ ಸಮಸ್ಯೆಗಳಿಗೆ ರತ್ನ ಶಾಸ್ತ್ರದಲ್ಲಿ ವಿವಿಧ ಪರಿಹಾರಗಳನ್ನು ಸೂಚಿಸಲಾಗಿದೆ. ಮಂಗಳ ದೋಷ ನಿವಾರಣೆಗೆ ಹವಳ (Coral) ರತ್ನವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ ಜ್ಯೋತಿಷಿಗಳ ಸಲಹೆಯೊಂದಿಗೆ ಹವಳ ಧರಿಸುವುದು ಲಾಭಕರವಾಗಬಹುದು.
ಹವಳ -
ಬೆಂಗಳೂರು: ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳ ಹಿಂದೆ ಜಾತಕದಲ್ಲಿರುವ ಗ್ರಹದೋಷಗಳು ಕಾರಣವೆಂದು ಜ್ಯೋತಿಷ್ಯ ಶಾಸ್ತ್ರವು(Astrology) ಹೇಳುತ್ತದೆ. ಇಂತಹ ದೋಷಗಳಿಂದ ಬಳಲುತ್ತಿರುವವರಿಗಾಗಿ ರತ್ನ ಶಾಸ್ತ್ರದಲ್ಲಿ ವಿವಿಧ ರತ್ನಗಳನ್ನು ಪರಿಹಾರವಾಗಿ ಸೂಚಿಸಲಾಗಿದೆ. ಆದರೆ ಪ್ರತಿಯೊಬ್ಬರೂ ಎಲ್ಲಾ ರತ್ನಗಳನ್ನು ಧರಿಸುವುದು ಸೂಕ್ತವಲ್ಲ ಎಂಬುದು ಜ್ಯೋತಿಷಿಗಳ ಎಚ್ಚರಿಕೆ.
ಜನ್ಮಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿ, ಅವುಗಳ ಬಲ-ದುರ್ಬಲತೆಗಳನ್ನು ಅವಲಂಬಿಸಿ ರತ್ನಗಳನ್ನು ಆಯ್ಕೆ ಮಾಡಬೇಕು. ಒಂದು ರಾಶಿಗೆ ಶುಭ ಫಲ ನೀಡುವ ರತ್ನ ಮತ್ತೊಂದು ರಾಶಿಗೆ ಅಶುಭ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ರತ್ನವನ್ನು ಧರಿಸುವ ಮೊದಲು ಜ್ಯೋತಿಷಿಗಳ ಸಲಹೆ ಪಡೆಯುವುದು ಅತ್ಯಗತ್ಯ.
ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರ ಸಲಹೆಯಂತೆ(Astro Tips) ಯಾರಿಗೆ ಹವಳ ಧರಿಸಿದ್ರೆ ಶುಭವಾಗಲಿದೆ..? ಯಾರಿಗೆ ಅಶುಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ
ಹವಳವು ಮಂಗಳ ಗ್ರಹದ ಪ್ರತಿನಿಧಿ
ರತ್ನವೆಂದು ಪರಿಗಣಿಸಲಾಗುತ್ತದೆ. ಸಮುದ್ರದ ಆಳದಲ್ಲಿ ದೊರೆಯುವ ಈ ಕೆಂಪು ಬಣ್ಣದ ರತ್ನವು ಧೈರ್ಯ, ಶಕ್ತಿ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ, ಮಂಗಳ ದೋಷದಿಂದ ಸಂಕಷ್ಟ ಎದುರಾಗುತ್ತಿದ್ದರೆ ಜ್ಯೋತಿಷಿಗಳ ಸಲಹೆಯೊಂದಿಗೆ ಹವಳ ಧರಿಸುವುದು ಲಾಭಕರವಾಗಬಹುದು.
ಹವಳ ಧರಿಸುವ ಸರಿಯಾದ ವಿಧಾನ
ಸಾಮಾನ್ಯವಾಗಿ ಮಂಗಳವಾರದಂದು ಹವಳ ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ.
ಚಿನ್ನ ಅಥವಾ ಬೆಳ್ಳಿಯಲ್ಲಿ ಅಳವಡಿಸಿದ ಹವಳವನ್ನು ಧರಿಸಬಹುದು.
ಉಂಗುರವನ್ನು ಬಲಗೈಯ ಉಂಗುರ ಬೆರಳಿಗೆ ಧರಿಸುವುದು ರೂಢಿ.
ಧರಿಸುವ ಮೊದಲು ಪೂಜೆ ಅಥವಾ ಶುದ್ಧೀಕರಣ ಕ್ರಮಗಳನ್ನು ಅನುಸರಿಸುವುದು ಉತ್ತಮ.
Astro Tips: ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಿದರೆ ದೋಷ ಪರಿಹಾರ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಹವಳ ಮತ್ತು ಮಂಗಳ ಗ್ರಹದ ಸಂಬಂಧ
ರತ್ನ ಶಾಸ್ತ್ರದಲ್ಲಿ ಹವಳ (Coral) ಪ್ರಮುಖ ಸ್ಥಾನ ಹೊಂದಿದೆ. ಸಮುದ್ರದ ಆಳದಲ್ಲಿ ದೊರೆಯುವ ಈ ರತ್ನವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳ ದುರ್ಬಲ ಸ್ಥಿತಿಯಲ್ಲಿ ಇದ್ದರೆ ಅಥವಾ ಮಂಗಳ ದೋಷದಿಂದ ಸಂಕಷ್ಟ ಎದುರಾಗುತ್ತಿದ್ದರೆ, ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಹವಳ ಧರಿಸುವುದರಿಂದ ಲಾಭವಾಗುತ್ತದೆ ಎಂದು ನಂಬಲಾಗಿದೆ.
ಮಂಗಳದ ಅನುಕೂಲ ಫಲಿತಾಂಶಗಳನ್ನು ಪಡೆಯಲು ಹವಳ ಸಹಾಯಕವಾಗಬಹುದು ಎನ್ನಲಾಗುತ್ತದೆ. ಆದರೆ ಎಲ್ಲರಿಗೂ ಇದು ಸೂಕ್ತವಲ್ಲ.
ಈ ರಾಶಿಯವರು ಹವಳ ಧರಿಸಬಾರದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ಮತ್ತು ಮಕರ ರಾಶಿಯವರು ಹವಳ ಧರಿಸುವುದನ್ನು ತಪ್ಪಿಸಬೇಕು. ಈ ರಾಶಿಯವರು ಹವಳ ಧರಿಸಿದರೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಅದೇ ರೀತಿ, ಜಾತಕದಲ್ಲಿ ಮಂಗಳ ಈಗಾಗಲೇ ಬಲಿಷ್ಠ ಸ್ಥಾನದಲ್ಲಿದ್ದು ಶುಭ ಫಲ ನೀಡುತ್ತಿದ್ದರೆ, ಇಂತಹವರು ಸಹ ಹವಳವನ್ನು ಧರಿಸಬಾರದು. ಅತಿಯಾದ ಗ್ರಹಬಲ ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂಬ ಅಭಿಪ್ರಾಯ ಜ್ಯೋತಿಷ್ಯ ವಿದ್ವಾಂಸರದು.
ಈ ವಿಷಯ ಗಮನದಲ್ಲಿ ಇರಲಿ
ಕುಂಭ ಮತ್ತು ಮಕರ ರಾಶಿಯವರನ್ನು ಹೊರತುಪಡಿಸಿ ಇತರ ರಾಶಿಯವರು, ತಮ್ಮ ಜಾತಕ ಪರಿಶೀಲನೆಯ ನಂತರ ಹಾಗೂ ಜ್ಯೋತಿಷಿಗಳ ಸಲಹೆಯ ಮೇರೆಗೆ ಹವಳ ಧರಿಸಿದರೆ ಸುಖ-ಸಂತೋಷ ಹಾಗೂ ಸಮೃದ್ಧಿ ಪಡೆಯಬಹುದು ಎಂದು ರತ್ನ ಶಾಸ್ತ್ರವು ಹೇಳುತ್ತದೆ.
ಯಾವುದೇ ರತ್ನವನ್ನು ಧರಿಸುವ ಮೊದಲು ವೈಯಕ್ತಿಕ ಜಾತಕ ವಿಶ್ಲೇಷಣೆ ಮಾಡಿಸಿಕೊಳ್ಳುವುದು ಮುಖ್ಯ ಎನ್ನುವುದು ತಜ್ಞರ ಸಲಹೆ.