ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ ನವೆಂಬರ್ 3, 2026: ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ

Horoscope Today November 3: ಕಾರ್ತಿಕ ಮಾಸ, ಕೃಷ್ಣ ಪಕ್ಷದ ನವಮಿ ತಿಥಿ, ಮಘಾ ನಕ್ಷತ್ರದ, ಕೃಷ್ಣ ಪಕ್ಷದ ಅಕ್ಟೋಬರ್‌ 3ರ ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ ಎನ್ನುವ ಕುತೂಹಲವೇ? ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ನಿಮ್ಮ ಐಡಿಯಾಗೆ ಬೆಲೆ ಸಿಗಲಿದೆ; ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯತೆ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Nov 3, 2026 6:00 AM

ಬೆಂಗಳೂರು: ಮಂಗಳವಾರ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಸೂಕ್ತ ದಿನ. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಶಿವನ ಆರಾಧನೆ, ದೀಪ ಬೆಳಗಿಸುವುದು ಮತ್ತು ದೇವಾಲಯ ದರ್ಶನ ಮಾಡುವುದು ಶುಭಕರ. ನವಮಿ ತಿಥಿಯಂದು ದೇವರ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. ಈ ದಿನದ ರಾಶಿ ಭವಿಷ್ಯದ ವಿವರ ಇಲ್ಲಿದೆ.

ಮೇಷ ರಾಶಿ: ಕೆಲಸದ ಕ್ಷೇತ್ರದಲ್ಲಿ ಹೊಸ ಅವಕಾಶ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆತುರದ ನಿರ್ಧಾರ ಬೇಡ. ಧೈರ್ಯ ಜಾಸ್ತಿ ಇರುತ್ತೆ. ಇಂದು ಯಾವುದೇ ಕೆಲಸ ಶುರು ಮಾಡಿದ್ರೂ ಜಯ.

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ಸಿಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ. ಮನೆಯವರು ನಿಮ್ಮ ಮಾತು ಕೇಳ್ತಾರೆ. ಬಹಳ ದಿನಗಳ ಆಸೆ ಈಡೇರಲಿದೆ.

ಮಿಥುನ ರಾಶಿ: ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ನಿಮ್ಮ ಐಡಿಯಾಗೆ ಇಂದು ಬೆಲೆ ಸಿಗುತ್ತೆ.

ಕಟಕ ರಾಶಿ: ಕೆಲವು ಕೆಲಸಗಳಲ್ಲಿ ವಿಳಂಬವಾಗಬಹುದು. ತಾಳ್ಮೆಯಿಂದ ಮುಂದುವರಿಯಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಸಂಗಾತಿಯ ಬೆಂಬಲ ಸಿಗಲಿದೆ. ಖರ್ಚು ಜಾಸ್ತಿ ಆಗುತ್ತೆ. ಫೋನ್, ಗ್ಯಾಜೆಟ್ ರಿಪೇರಿ ಖರ್ಚು ಬರಲಿದೆ.

ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿಯ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಸುದ್ದಿ. ಹೊಸ ಯೋಜನೆಗಳಿಂದ ಲಾಭವಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ನೇಹಿತರ ಜತೆ ಜಗಳವಾಗುವ ಸಾಧ್ಯತೆ. ಮಾತನಾಡುವಾಗ ತಾಳ್ಮೆ ಇರಲಿ.

ಮನೆಯಲ್ಲಿ ಈ 4 ವಸ್ತುಗಳು ಖಾಲಿಯಾಗಿರದಂತೆ ನೋಡಿಕೊಳ್ಳಿ!

ಕನ್ಯಾ ರಾಶಿ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಆರ್ಥಿಕವಾಗಿ ಉತ್ತಮ ದಿನ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ.

ತುಲಾ ರಾಶಿ: ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಪ್ರಪೋಸ್ ಮಾಡಲು ಇಂದು ಉತ್ತಮ ದಿನ.

ವೃಶ್ಚಿಕ ರಾಶಿ: ಹಣಕಾಸಿನ ವಿಚಾರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿ ಹಿರಿಯರ ಸಹಕಾರ ದೊರೆಯಲಿದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಆರೋಗ್ಯ ಚೆನ್ನಾಗಿರುತ್ತೆ. ಆದರೆ ಹೊರಗಿನ ಆಹಾರ ಬೇಡ.

ಧನು ರಾಶಿ: ಹೊಸ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಪ್ರಯಾಣದ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿರಲಿ.

ಮಕರ ರಾಶಿ: ಕೆಲಸದ ಒತ್ತಡ ಹೆಚ್ಚಾಗಲಿದೆ. ಆದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಕುಟುಂಬದವರೊಂದಿಗೆ ಸಮಯ ಕಳೆಯುತ್ತೀರಿ. ಹಳೆಯ ಸಾಲ ವಾಪಸ್ ಬರುವ ಸಾಧ್ಯತೆ ಇದೆ.

ಕುಂಭ ರಾಶಿ: ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಸ್ನೇಹಿತರ ನೆರವು ದೊರೆಯಲಿದೆ. ಹೊಸ ಅವಕಾಶಗಳನ್ನು ಬಳಸಿಕೊಂಡರೆ ಪ್ರಗತಿ ಕಾಣಲಿದ್ದೀರಿ.

ಮೀನ ರಾಶಿ: ದಿನವು ಸಂತೋಷದಿಂದ ಕೂಡಿರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ನಡೆಯಲಿದೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಹಳೆಯ ನೆನಪು ಕಾಡಲಿದೆ.