Daily Horoscope: ಮೂಲ ನಕ್ಷತ್ರದಿಂದ ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿ, ಮೂಲನಕ್ಷತ್ರದ ಈ ದಿನ ಯಾವ ರಾಶಿಯವರಿಗೆ ಯಾವ ಫಲವಿದೆ ಎನ್ನುವ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ: ಇಂದು ಮೂಲ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಭಾಗ್ಯೋದಯದ ದಿನವಾಗಲಿದೆ. ಎರಡು ಮೂರು ದಿನಗಳ ಹಿಂದೆ ಇದ್ದಂತಹ ಎಲ್ಲ ಕ್ಷೇಷ ಮಾಯವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಾಗೆಯೆ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ದಾರಿ ಗೋಚರವಾಗಲಿದೆ. ಆದರೆ ಈಗಲೇ ಅದರ ಯಶಸ್ಸು ಪ್ರಾಪ್ತಿಯಾಗುವುದಿಲ್ಲ. ಎರಡು ದಿನಗಳ ನಂತರ ಇದರ ಪ್ರತಿಫಲ ನಿಮಗೆ ದೊರೆಯಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮನಸ್ಸಿಗೆ ಬಹಳ ಹಿಂಸೆ ಎದುರಾಗುವ ದಿನ ಆಗಲಿದೆ. ಕೌನ್ಸೆಲಿಂಗ್ ಇತ್ಯಾದಿ ಕೆಲವರಿಗೆ ಬೇಕಾಗಬಹುದು. ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲು ಹೋಗಬೇಡಿ. ಭಗವಂತನನ್ನು ಸ್ಮರಿಸುವ ಮೂಲಕ ಧ್ಯಾನ ಇತ್ಯಾದಿ ಗಳನ್ನು ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲರಿಂದಲೂ ಸೌಹಾರ್ದ ಪ್ರಾಪ್ತಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಟುಂಬದಲ್ಲೂ ಬಹಳ ಚೆನ್ನಾಗಿ ಇರುವ ವಾತಾವರಣ ನಿಮಗೆ ಸಿಗಲಿದೆ. ಗಜಕೇಸರಿ ಯೋಗ ನಿಮಗೆ ಒಳಿದು ಬರಲಿರುವುದರಿಂದ ಎಲ್ಲದರಲ್ಲೂ ಜಯ ಪ್ರಾಪ್ತಿಯಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಸಾಮಾಜಿಕ ಕೆಲಸಗಳಲ್ಲಿ ಇಂದು ಜಯವನ್ನು ಕಾಣುತ್ತೀರಿ. ನಿಮಗೆ ಶತ್ರುಗಳಿದ್ದರೂ ನೀವು ಮಾಡುವಂತಹ ಯಾವುದೇ ಕೆಲಸಗಳಿಗೆ ಅಡಚಣೆಯಾಗುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಬಹಳ ಕಷ್ಟದ ದಿನ ಆಗಲಿದೆ. ಪ್ರೇಮ, ಪ್ರೀತಿ ಇದ್ದವರಿಗೆ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲೂ ಯಾವುದೇ ಒಳ್ಳೆಯ ಸುದ್ದಿ ಪ್ರಾಪ್ತಿಯಾಗುವುದಿಲ್ಲ. ಯಾವುದೇ ಮುಖ್ಯವಾದ ನಿರ್ಧಾರಗಳು ಇಂದು ಬೇಡ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ವ್ಯವಹಾರ ನಡೆಸುವವರಿಗೆ ಆಫರ್‌ಗಳು ಇಂದು ಬರುವ ಸಾಧ್ಯತೆ ಇರುತ್ತದೆ. ಜತೆಗೆ ಇದಕ್ಕೆ ಹೊಸ ಯೋಚನೆ, ಪ್ಲಾನ್ ಇತ್ಯಾದಿ ಮೂಡಬಹುದು. ಆದರೆ ಹಣ, ಲಾಭ ಇತ್ಯಾದಿ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಇದರ ಲಾಭ ನಿಮಗೆ ಸಿಗಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ವ್ಯವಹಾರಕ್ಕೆ ಉತ್ತಮ ದಿನ ಆಗಲಿದೆ. ಆದರೆ ಇದನ್ನು ಕಾರ್ಯಗತ ಮಾಡಿಕೊಳ್ಳಲು ನಿಮ್ಮ ಜಾತಕವನ್ನು ನೀವು ಪರಿಶೀಲಿಸಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿದ್ದರೂ ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ಹಣಕಾಸು ಹಾಗೂ ಉದ್ಯೋಗ ವ್ಯವಹಾರಗಳ ಬಗ್ಗೆ ಹೊಸ ಯೋಜನೆಗಳು ನಿಮಗೆ ತಿಳಿಯಬಹುದು. ಆದರೆ ಎಲ್ಲವೂ ಕಾರ್ಯಗತ ಆಗುವುದಿಲ್ಲ.
ಇದನ್ನು ಓದಿ:Daily Horoscope: ಜೇಷ್ಠ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ನಿಮ್ಮಲ್ಲಿ ಆತ್ಮ ವಿಶ್ವಾಸ ಇಂದು ಹೆಚ್ಚಾಗಲಿದೆ. ಎರಡು ದಿನಗಳಿಂದ ಮನಸ್ಸಿಗೆ ಸ್ವಲ್ಪ ಬೇಸರ ಇದ್ದು ಎಲ್ಲವೂ ನಿವಾರಣೆಯಾಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಅಷ್ಟು ಉತ್ತಮವಾಗಿಲ್ಲವಾದರೂ ಆಧ್ಯಾತ್ಮಿಕವಾಗಿ ಹೆಚ್ಚು ನೆಮ್ಮದಿಯನ್ನು ಕಾಣಬಹುದು. ಹೆಚ್ಚು ಧ್ಯಾನ, ಭಗವಂತನನ್ನು ಸ್ಮರಿಸುವ ಮೂಲಕ ಅಂದುಕೊಂಡ ಕೆಲಸಗಳನ್ನು ಪೂರ್ಣ ಮಾಡಬಹುದು.
ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಬಹಳ ಸಂತೋಷವನ್ನು ನೀವು ಕಾಣಲಿದ್ದೀರಿ. ಗುಂಪು ಕೆಲಸಗಳಲ್ಲಿ ಇರುವರಿಗೆ ಧನ ಆಗಮನವಾಗಲಿದೆ. ನೆಮ್ಮದಿ ಕೊಡುವಂತಹ ದಿನ ಆಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಕಾಣುವ ದಿನ ಆಗಲಿದೆ. ಮುಖ್ಯ ವ್ಯಕ್ತಿಯ ಗಮನವನ್ನು ಸೆಳೆಯುವ ಮೂಲಕ ಗೌರವ, ಹೊಗಳಿಕೆ ಪ್ರಾಪ್ತಿಯಾಗಲಿದೆ. ಕೆಲಸವನ್ನು ನಿಷ್ಠೆಯಿಂದ ಮಾಡುವುದರಿಂದ ಅತ್ಯುತ್ತಮ ಫಲ ನಿಮ್ಮದಾಗಲಿದೆ. ದಿನ ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.