Daily Horoscope: ಜೇಷ್ಠ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಏಕಾದಶಿ ತಿಥಿ, ಮಂಗಳ ಗೌರಿ ವೃತ, ಜೇಷ್ಠ ನಕ್ಷತ್ರದ ಈ ದಿನದ ಅಧಿಪತಿ ಬುಧ. ಮಂಗಳವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಏಕಾದಶಿ ತಿಥಿ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ನೀವು ಅತೀ ಹೆಚ್ಚಾಗಿ ಭಗವಂತನ ಧಾನ್ಯ ಹಾಗೂ ಶ್ಲೋಕ ಪಠಣ ಮಾಡಬೇಕಾಗುತ್ತದೆ. ಇಂದು ಭಗವಂತನ ಧಾನ್ಯ ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಬಹಳ ಅತ್ಯುತ್ತಮವಾದ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಇದ್ದು ಬುದ್ದಿವಂತಿಕೆಯಿಂದ ಇಂದು ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ. ದಾಂಪತ್ಯದಲ್ಲಿ ವಿಶೇಷವಾದ ಆನಂದವನ್ನು ನೀವು ಪಡೆಯಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಇಂದು ಅತ್ಯುತ್ತಮ ದಿನ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಸಾಮಾಜಿಕ ಜೀವನದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ನಿಮ್ಮ ಬುದ್ಧಿವಂತಿಕೆಯಿಂದ ಇಂದು ಎಲ್ಲವನ್ನೂ ಸಾಧಿಸಲಿದ್ದೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಸ್ವಲ್ಪ ಅಹಿತಕರವಾದ ದಿನ. ಯಾವುದೇ ಕೆಲಸಗಳಲ್ಲಿ ಅಡಚಣೆ ಉಂಟಾಗುವಂತೆ ಮಾಡಲಿದೆ. ಬಹಳ ತಾಳ್ಮೆಯಿಂದ ಜವಾಬ್ದಾರಿ ತೆಗೆದುಕೊಂಡು ಯಾವುದೇ ಕಾರ್ಯ ಮಾಡಿದರೆ ಒಳಿತಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅಷ್ಟು ಒಳ್ಳೆಯ ದಿನ ಅಲ್ಲ. ತಾಯಿಯ ಆರೋಗ್ಯದ ಬಗ್ಗೆ ಅನೇಕ ರೀತಿಯ ಯೋಚನೆಗಳು ನಿಮ್ಮನ್ನು ಕಾಡಬಹುದು. ಮುಂದಿನ ನಿರ್ಧಾರ ಬಗ್ಗೆ ಯಾವುದೆ ಸಲಹೆ ಮಾರ್ಗದರ್ಶನ ಸಿಗದೆ ಹೋಗಬಹುದು. ಯಾವುದೇ ನಿರ್ಧಾರವನ್ನು ನೀವು ಮುಂಗೋಪದಿಂದ ಮಾಡಬಾರದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಎಲ್ಲ ವಿಚಾರಗಳಲ್ಲೂ ಕೂಡ ಇಂದು ಜಯವನ್ನು ಸಾಧಿಸುತ್ತೀರಿ. ನಿಮ್ಮ ಮುಖ್ಯವಾದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಆತ್ಮವಿಶ್ವಾಸ ನಿಮಗೆ ಸಹಾಯ ಮಾಡಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಸಂಸಾರದಲ್ಲಿ ಸ್ವಲ್ಪ ತೊಂದರೆ ಕಾಡಲಿದೆ. ನಿಮ್ಮ ಬುದ್ಧಿವಂತಿಕೆ ಉಪಯೋಗಿಸಲು ಹೋದರೆ ಕೆಲವರು ಟೀಕೆ ಮಾಡುವವರು ನಿಮಗೆ ಸಿಗುತ್ತಾರೆ. ಹಾಗಾಗಿ ಉತ್ತಮ ನಂಬಿಕೆ ಉಳ್ಳವರ ಜತೆ ಮಾತ್ರ ಇಂದು ಸ್ನೇಹ ಮಾಡಬೇಕು. ಹಣಕಾಸಿನ ವೆಚ್ಚಗಳು ಇಂದು ಜಾಸ್ತಿಯಾಗಿರುತ್ತದೆ.
ಇದನ್ನು ಓದಿ:Daily Horoscope: ಈ ದಿನ ಅನುರಾಧಾ ನಕ್ಷತ್ರದಿಂದ ಯಾವ ರಾಶಿಗೆ ಉತ್ತಮ ಫಲವಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ನಿಮಗೆ ಪ್ರಾಪ್ತಿಯಾಗಲಿದೆ. ಹಿಂದೆ ಇದ್ದಂತಹ ಗೊಂದಲಗಳು ಮಾಯವಾಗಿ ಬೀಡುತ್ತದೆ. ಭಗವಂತನ ಧ್ಯಾನ ಮಾಡುವುದನ್ನು ಮರೆಯಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಈ ದಿನ ಅಷ್ಟು ಉತ್ತಮವಾಗಿಲ್ಲ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಬೇರೆಯವರಿಂದ ಯಾವುದೇ ಸಹಕಾರ ನಿಮಗೆ ಪ್ರಾಪ್ತಿ ಯಾಗುವುದಿಲ್ಲ. ಆರೋಗ್ಯದಲ್ಲೂ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಎರಡು ದಿನಗಳ ನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಮಾತಿನಿಂದಲೇ ಅನೇಕ ಜನರ ಮನಸ್ಸನ್ನು ನೀವು ಗೆಲ್ಲುತ್ತೀರಿ. ವ್ಯವಹಾರದಲ್ಲಿರುವವರಿಗೂ ಅತ್ಯುತ್ತಮ ದಿನವಾಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಅತೀ ಹೆಚ್ಚಿನ ನೆಮ್ಮದಿ ಕೊಡಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಮಿತ್ರರಿಂದಲೂ ಅತೀ ಹೆಚ್ಚಿನ ಸಂತೋಷ ಸಿಗಲಿದ್ದು ಉತ್ತಮ ದಿನವಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಅದೃಷ್ಟ ತರಲಿದೆ. ಇಂದು ಭಗವಂತ ಹಾಗೂ ಹಿರಿಯರ ಅನುಗ್ರಹದಿಂದ ಎಲ್ಲ ಕೆಲಸ ಕಾರ್ಯ ನೆರವೇರಲಿದೆ. ಮುಂದಿನ ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ. ದಿನ ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.