Daily Horoscope: ಪೂರ್ವಾಷಾಡ ನಕ್ಷತ್ರದಿಂದ ಇಂದು ಯಾವ ರಾಶಿಗೆ ಉತ್ತಮ ಫಲವಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿ, ಪೂರ್ವಾಷಾಡ ನಕ್ಷತ್ರದ ಈ ದಿನ (ಆಗಸ್ಟ್ 7) ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ತ್ರಯೋದಶಿ ತಿಥಿ ಪೂರ್ವಾಷಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ (Daily Horoscope) ತಿಳಿಸಿದ್ದಾರೆ.
ಇಂದು (ಆಗಸ್ಟ್ 7) ಅಂಗಾರಕ ಜಯಂತಿಯಾಗಿದ್ದು ಶುಭ ಕೆಲಸಗಳಿಗೆ ಬಹಳ ಮುಖ್ಯ ದಿನ ಎನಿಸಿಕೊಂಡಿದೆ. ಕುಜದೋಷ ಇದ್ದರೆ ಶುಭ ಕೆಲಸಗಳಿಗೆ ಕಷ್ಟವಾಗಲಿದ್ದು, ಇಂದು ಅಂಗಾರಕನ ಪೂಜೆ ಮಾಡುವ ಮೂಲಕ ಕುಜ ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು.
ಮೇಷ ರಾಶಿ: ಇಂದು ಪೂರ್ವಾಷಾಡ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಭಾಗ್ಯೋದಯದ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ಹಿಂದೆ ಇದ್ದಂತಹ ತೊಂದರೆ ಬಗೆಹರಿದು ಮನಸ್ಸಿಗೆ ನೆಮ್ಮದಿ ನೀಡಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರ ಮನಸ್ಸಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇರಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಭಗವಂತನನ್ನು ಸ್ಮರಿಸುವ ಮೂಲಕ ಧ್ಯಾನ ಇತ್ಯಾದಿಗಳನ್ನು ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದ್ದು, ಗಜ ಕೇಸರಿ ಯೋಗ ಇರಲಿದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗಲಿದ್ದು, ಇಂದು ಅತ್ಯುತ್ತಮ ದಿನವಾಗಿದೆ. ಅದೇ ರೀತಿ ನಾಯಕತ್ವ ಕೌಶಲ್ಯತೆ ಇದ್ದು ಎಲ್ಲರಿಂದಲೂ ಸೌಹಾರ್ದ ಪ್ರಾಪ್ತಿಯಾಗಲಿದೆ. ಇವತ್ತಿನ ದಿನ ಬಹಳಷ್ಟು ಉತ್ತಮವಾಗಿರಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮುಖ್ಯವಾದ ಜನರಿಂದ ವೈ ಮನಸ್ಸು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಹಳ ಹುಷಾರಾಗಿ ಸಂವಹನ ನಡೆಸಬೇಕು. ಬಹಳ ವಿನಯವಾಗಿ ಹಿರಿಯರ ಜತೆ ಮಾತಾಡಬೇಕು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಬಹಳ ಕಷ್ಟದ ದಿನ ಆಗಲಿದೆ. ವೈರಿಗಳಿಂದ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದರೆ ಆಧ್ಯಾತ್ಮಿಕವಾಗಿ ನಿಮಗೆ ಯಶಸ್ಸು ಸಿಗಲಿದೆ. ಇಂದು ಎಲ್ಲರೊಂದಿಗೆ ಬಹಳ ವಿನಯತೆಯಿಂದ ವರ್ತಿಸಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಮನೆಯಲ್ಲಿ ಸಂಭ್ರಮ ವಾತಾವರಣ ಇರಲಿದೆ. ಆದರೆ ಈ ಸಂಭ್ರಮ ಸಣ್ಣ ಪುಟ್ಟ ವಿಷಯಗಳಿಂದ ಹಾಳಾಗುವ ಸಾಧ್ಯತೆಯೂ ಇದೆ. ಇಂದಿನ ಸಂತೋಷದ ದಿನವನ್ನು ಯಾವುದರ ಬಗ್ಗೆಯೂ ಯೋಚಿಸದೆ ನೆಮ್ಮದಿಯಿಂದ ಇರಲು ಪ್ರಯತ್ನಿಸಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಾಸ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿರುವವರು, ಭಾಷಣಕಾರರು, ಬರಹಗಾರರಿಗೆ ಉತ್ತಮ ದಿನ ಆಗಲಿದೆ. ಮುಖ್ಯವಾದ ಕಾರ್ಯಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ನಿಮ್ಮ ಮನೆಯಲ್ಲಿ ಖುಷಿಯಾದ ಕಾರ್ಯಕ್ರಮಗಳು ನಡೆಯಬಹುದು. ವಿಶೇಷವಾಗಿ ಭಗವಂತನ ಕಾರ್ಯ ಮನೆಯಲ್ಲಿ ನಡೆಯಬಹುದು. ಭಗವಂತನ ಆಶೀರ್ವಾದ ನಿಮಗೆ ಸಿಗಲಿದ್ದು ಖುಷಿಯಿಂದ ಇರುತ್ತೀರಿ.
ಇದನ್ನು ಓದಿ:Daily Horoscope: ಮೂಲ ನಕ್ಷತ್ರದಿಂದ ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಈ ಹಿಂದೆ ಆದ ಅವಮಾನಗಳಿಗೆ ಇಂದು ಉತ್ತರ ಸಿಗಬಹುದು. ನಾಯಕತ್ವ ಗುಣಗಳು ನಿಮಗೆ ಪ್ರಾಪ್ತಿಯಾಗಲಿದ್ದು ಅತೀ ಹೆಚ್ಚಿನ ಯಶಸ್ಸು ಕಾಣಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಎಲ್ಲರಿಂದಲೂ ಗೌರವವನ್ನು ಪಡೆದುಕೊಳ್ಳಲಿದ್ದೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಆಧ್ಯಾತ್ಮಿಕವಾಗಿ ಬಹಳ ಉತ್ತಮ ದಿನವಾಗಲಿದೆ. ಲೌಕಿಕವಾಗಿ ಯಾವುದೋ ಸಮಸ್ಯೆ ಎದುರಾಗಲಿದ್ದು, ಆದರೆ ಆಧ್ಯಾತ್ಮಿಕವಾಗಿ ಪರಿಹಾರ ಪಡೆದುಕೊಳ್ಳುತ್ತೀರಿ. ಹೆಚ್ಚು ಧ್ಯಾನ, ಭಗವಂತನನ್ನು ಸ್ಮರಿಸುವ ಮೂಲಕ ಅಂದುಕೊಂಡ ಕೆಲಸಗಳನ್ನು ಪೂರ್ಣ ಮಾಡಬಹುದು.
ಕುಂಭರಾಶಿ: ಕುಂಭ ರಾಶಿಯವರಿಗೆ ಇದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಮುಖ್ಯವಾದ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನಾಗಮನವಾಗುವ ಸಾಧ್ಯತೆ ಇದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುವ ದಿನ ಆಗಲಿದೆ. ಇಂದು ಉತ್ತಮ ದಿನ ಆಗಲಿದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು ಮಾಡಿ. ನಿಮಗೆ ಇಂದು ಜವಾಬ್ದಾರಿಗಳು ಕೂಡ ಹೆಚ್ಚಾಗಬಹುದು. ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.