ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today January 1st: ಹೊಸ ವರ್ಷದ ಮೊದಲ ದಿನ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ನಿತ್ಯ ಭವಿಷ್ಯ ಜನವರಿ 1, 2026: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಪೌಸ ಮಾಸೆ, ಶುಕ್ಷ ಪಕ್ಷ, ತ್ರಯೋದಶಿ ತಿಥಿ, ರೋಹಿಣಿ ನಕ್ಷತ್ರದ ಜನವರಿ 1ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಹೊಸ ವರ್ಷದ ಈ ದಿನ ಈ ರಾಶಿಯವರಿಗೆ ಒಲಿಯಲಿದೆ ಭಾರಿ ಅದೃಷ್ಟ

ಸಂಗ್ರಹ ಚಿತ್ರ -

Profile
Pushpa Kumari Jan 1, 2026 6:00 AM

ಬೆಂಗಳೂರು, ಜ. 1: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ರೋಹಿಣಿ ನಕ್ಷತ್ರ ಇದ್ದು, ಇದರ ಅಧಿಪತಿ ಚಂದ್ರ. ಹೀಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಮನಸ್ಸಿಗೆ ಹಾಗೂ ಸಂಸಾರಕ್ಕೆ ನೆಮ್ಮದಿ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ಮನಸ್ಸಿನ ಬೇಸರ ಎಲ್ಲವೂ ಮಾಯವಾಗಲಿದೆ. ಹಾಗಾಗಿ ಖುಷಿಯಾದ ವಾತಾವರಣದಲ್ಲಿ ಇರುತ್ತೀರಿ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕಷ್ಟಕದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಇಂದು ಬೇಡ. ಬೇರೆಯವರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.

ಕಟಕ ರಾಶಿ: ಕಟಕ ರಾಶಿyವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹಳ ಉತ್ತಮ ದಿನ ನಿಮ್ಮದಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದದ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ತೊಂದರೆ ಇರುತ್ತದೆ. ಅದೇ ರೀತಿ ಮನಸ್ಸಿಗೆ ಕ್ಷೇಷದ ಜತೆ ಹಲವು ರೀತಿಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕಾಡಲಿದೆ ದಾರಿದ್ರ್ಯ

ಕನ್ಯಾ ರಾಶಿ: ತುಲಾ ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಹಿರಿಯರ ಮತ್ತು ಭಗವಂತನ ಆಶೀರ್ವಾದ ಇಲ್ಲದೆ ಯಾವುದೇ ಭಾಗ್ಯ ನಿಮಗೆ ಸಿಗುವುದಿಲ್ಲ. ಹಾಗಾಗಿ ಬಹಳಷ್ಟು ವಿನಮ್ರತೆಯಿಂದ ಕೆಲಸ ಮಾಡಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಬಹಳಷ್ಟು ಕ್ಷೇಷ ಇರಲಿದ್ದು, ಮಿತ್ರರಿಂದ ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಎಲ್ಲರಿಂದಲೂ ಸಹಕಾರ ನಿಮಗೆ ಸಿಗುತ್ತದೆ. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗಲಿದ್ದು ಖುಷಿಯಾಗಿ ದಿನವನ್ನು ಕಳೆಯಲಿದ್ದೀರಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಕಾಣುತ್ತೀರಿ. ಅದೇ ರೀತಿ ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಬಹುದು.

ಮಕರ ರಾಶಿ: ಈ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಯಾವುದೇ ರೀತಿಯಲ್ಲಿ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.‌ ಮಕ್ಕಳಿಗೂ ಸ್ವಲ್ಪ ತೊಂದರೆಯಾಗಲಿದ್ದು, ಹಣಕಾಸಿನ ವಿಚಾರವಾಗಿ ಕಿರಿ ಕಿರಿ ಹೆಚ್ಚಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಮನೆಯಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ. ಮನಸ್ಸಿಗೆ ನಾನಾ ರೀತಿಯ ಯೋಚನೆಗಳು ಕಾಡಲಿದ್ದು, ಆಸ್ತಿ ಪಾಸ್ತಿ,ಕೋರ್ಟ್ ವಿಚಾರವಾಗಿ ಸ್ವಲ್ಪ ಕಷ್ಟದ ದಿನವಾಗಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆತ್ಮವಿಶ್ವಾಸ ಬಹಳಷ್ಟು ಚೆನ್ನಾಗಿ ಇರಲಿದ್ದು, ಪತ್ರಿಕೋದ್ಯಮದಲ್ಲಿ ಇರೋರಿಗೆ ಉತ್ತಮ ದಿನವಾಗಲಿದೆ. ಅತೀ ಲಾಭದಾಯಕ ದಿನ ನಿಮ್ಮದಾಗಲಿದೆ.