ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 12, 2026: ಇಂದು ಕಾರ್ಯಕ್ಷೇತ್ರದಲ್ಲಿ ದೊರೆಯಲಿದೆ ಯಶಸ್ಸು

Horoscope Today May 12th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಪೂರ್ವಭಾದ್ರಪದ ನಕ್ಷತ್ರದ ಮೇ 12ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ಭವಿಷ್ಯ ಇಲ್ಲಿದೆ.

ಇಂದು ಕಾರ್ಯಕ್ಷೇತ್ರದಲ್ಲಿ ದೊರೆಯಲಿದೆ ಯಶಸ್ಸು

ಸಂಗ್ರಹ ಚಿತ್ರ -

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದಶಮಿ ತಿಥಿ ಪೂರ್ವಭಾದ್ರಪ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಮೇಷ ರಾಶಿಗೆ ಇಂದು ಇಷ್ಟಾರ್ಥ ಸಿದ್ದಿ, ನೆಮ್ಮದಿ ತರುವ ದಿನವಾಗಲಿದೆ. ಮಿತ್ರರಿಂದ ಧನಾಗಮನ, ಅತ್ಯಂತ ಸಂತಸದ ದಿನ.

ವೃಷಭ ರಾಶಿ: ಕಾರ್ಯಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಪ್ರಾಪ್ತಿಯಾಗಲಿದೆ.

ಮಿಥುನ ರಾಶಿ: ಅದೃಷ್ಟದ ದಿನವಾಗಲಿದೆ. ಹಿರಿಯರಿಂದ ಆಶೀರ್ವಾದ ಪಡೆಯಲು ಮರೆಯಬೇಡಿ. ಅದರಿಂದ ಮಾತ್ರ ಕಾರ್ಯಸಿದ್ಧಿಯಾಗಲಿದೆ.

ಕಟಕ ರಾಶಿ: ಕಷ್ಟದ ದಿನ. ಮುಖ್ಯವಾದ ನಿರ್ಧಾರಗಳನ್ನು ಈ ದಿನ ಮಾಡದೇ ಇರುವುದು ಒಳ್ಳೆಯದು. ಮನಸ್ಸಿಗೆ ಸಮಾಧಾನ ಇರುವುದಿಲ್ಲ.

ಸಿಂಹ ರಾಶಿ: ಅತ್ಯುತ್ತಮ ದಿನ. ಪಾರ್ಟರ್ ಶಿಪ್‌ನಲ್ಲಿ ಯಶಸ್ಸು. ಮನಸ್ಸಿಗೆ ನೆಮ್ಮದಿ ಇರಲಿದೆ.

ಕನ್ಯಾ ರಾಶಿ: ಶತ್ರುಗಳು, ಅಡೆತಡೆಗಳು ಹಿಮ್ಮೆಟ್ಟುತ್ತವೆ. ಹೀಗಾಗಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ತುಲಾ ರಾಶಿ: ಪ್ರೇಮ, ಪ್ರೀತಿ, ದಾಂಪತ್ಯದಲ್ಲಿ ಸ್ವಲ್ಪ ಸೋಲು ಅನುಭವಿಸಬೇಕಾಗಬಹುದು. ಸಾಧಾರಣವಾದ ದಿನವಾಗಲಿದೆ.

ವೃಶ್ಚಿಕ ರಾಶಿ: ಅಸ್ತಿ, ಪಾಸ್ತಿ ವಿಚಾರಗಳು, ಮನೆಯ ವಿಚಾರಗಳು, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

ಧನಸ್ಸು ರಾಶಿ: ಅತ್ಯುತ್ತಮ ದಿನ. ಪರಾಕ್ರಮದಿಂದ ಸಾಧನೆ ಮಾಡುವ ದಿನ. ಅಣ್ಣ, ತಮ್ಮಂದಿರು ಸ್ನೇಹಿತರು, ನೆರೆಹೊರೆಯವರೆಲ್ಲ ನಿಮ್ಮೊಂದಿಗೆ ಇರುತ್ತಾರೆ.

ಮಕರ ರಾಶಿ: ಸುಖ ಸ್ಥಾನದಲ್ಲಿ ಚಂದ್ರ ಬಂದಿರುವುದರಿಂದ ಮನೆಯಲ್ಲಿ ಸುಖ, ಹೆಚ್ಚು ಹಣವನ್ನು ಮನೆಯವರಿಗಾಗಿ ಖರ್ಚು ಮಾಡುತ್ತೀರಿ, ಧನಾಗಮನ ಕೂಡ ಸಾಧ್ಯ.

ಕುಂಭರಾಶಿ: ರಾಶಿಗೆ ಚಂದ್ರ ಬಂದಿರುವುದರಿಂದ ಇರುವುದರಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ. ಹಿಂದಿನ ಮೂರು-ನಾಲ್ಕು ದಿನಗಳಿಂದ ಇದ್ದ ಎಲ್ಲ ಕ್ಲೇಶಗಳಿಗೂ ಇಂದು ಸಮಾಧಾನ ಪ್ರಾಪ್ತಿಯಾಗುತ್ತದೆ.

ಸೋಮವಾರ ಈ ಬಿಳಿ ವಸ್ತುಗಳನ್ನು ದಾನ ಮಾಡಿದರೆ ಶಿವನ ಕೃಪೆ, ಐಶ್ವರ್ಯ ಮತ್ತು ಮನಶಾಂತಿ ದೊರೆಯುತ್ತದೆ!

ಮೀನ ರಾಶಿ: ಸ್ವಲ್ಪ ಮಾತುಕತೆಗಳಲ್ಲಿ ಜಾಗರೂಕತೆ ಅವಶ್ಯಕ. ಮಿತ್ರರಲ್ಲಿ ಒಡಕು ಉಂಟಾಗುವ ಭಯ ಕಾಡುವ ಸಾಧ್ಯತೆ ಇದೆ. ಎರಡು ದಿನಗಳ ಬಳಿಕ ಎಲ್ಲವೂ ಪರಿಹಾರವಾಗುತ್ತದೆ.