ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಮಂಗಳವಾರದ ಈ ದಿನ ಮೂಲ ನಕ್ಷತ್ರದಿಂದ ಯಾವ ರಾಶಿಗೆ ಶುಭ ಫಲವಾಗಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ ಮೂಲ ನಕ್ಷತ್ರದ ಸೆಪ್ಟೆಂಬರ್‌ 2ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ದಿನ ಭವಿಷ್ಯ- ಮಂಗಳವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

-

Profile Pushpa Kumari Sep 2, 2025 6:00 AM

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಲಿದೆ. ಕೆಲವೊಂದು ವಿಚಾರದಲ್ಲಿ ಭಾಗ್ಯೋದಯ ವಾದರೂ ಹಿರಿಯ ಆಶೀರ್ವಾದ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ದೊಡ್ಡವರ, ಹಿರಿಯರ ಬಗ್ಗೆ ಗೌರವ ದಿಂದ ನಡೆದುಕೊಂಡು ಅವರ ಆಶೀರ್ವಾದ ಪಡೆದುಕೊಳ್ಳಿ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆಮನಸ್ಸಿಗೆ ಸ್ವಲ್ಪ ಕ್ಷೇಷ ಇರುವ ದಿನ ಆಗಲಿದೆ. ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ಮಾಡಬೇಡಿ. ಯಾರು ನಿಮಗೆ ಇಂದು ಸಹಕಾರ ನೀಡುವುದಿಲ್ಲ. ಅದೇ ರೀತಿ ದಾಂಪತ್ಯ ಜೀವನದಲ್ಲೂ ಸ್ವಲ್ಪ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಒಳ್ಳೆಯ ದಿನ ವಾಗಲಿದೆ. ಎಲ್ಲ ಕಡೆಯೂ ನಿಮಗೆ ಒಳಿತು ಆಗಲಿದೆ. ಬೇರೆಯವರ ಸಹಕಾರ ಕೂಡ ನಿಮಗೆ ಪ್ರಾಪ್ತಿ ಯಾಗಲಿದೆ. ಆದರೆ ಯಾವುದೇ ಕೆಲಸ ಮಾಡುವಾಗ ಬೇರೆಯವರ ಸಲಹೆ ಮೇರೆಗೆ ಹೋಗಬೇಡಿ. ನೀವೆ ಸ್ವ ನಿರ್ಧಾರ ಮಾಡಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಸಾಮಾಜಿಕ ವ್ಯವಹಾರ ದಲ್ಲಿ ಜಯ ಪ್ರಾಪ್ತಿ ಯಾಗಲಿದೆ. ಯಾರ ದ್ವೇಷಗಳು ನಿಮಗೆ ಇರುವುದಿಲ್ಲ. ನಿಮ್ಮ ಶತ್ರುಗಳಿಂದಲೂ ಯಾವುದೇ ಭಯ ಇಲ್ಲದೆ ಅವರನ್ನು ಹಿಮ್ಮೆಟ್ಟಲಿದ್ದೀರಿ. ಉತ್ತಮವಾದ ದಿನ ನಿಮ್ಮದು ಆಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ದಾಂಪತ್ಯ ದಲ್ಲಿ, ಪ್ರೇಮ ಪ್ರೀತಿ ಇತ್ಯಾದಿ ವಿಚಾರದಲ್ಲಿ ಕಷ್ಟ ಕರವಾದ ದಿನ ಆಗಲಿದೆ.ಯಾವುದೇ ರೀತಿಯ ಸಹಕಾರ ನಿಮಗೆ ಪ್ರಾಪ್ತಿ ಯಾಗುವುದಿಲ್ಲ. ಆದರೆ ನಿಮ್ಮ ಕ್ರಿಯಾತ್ಮಕ ಕೆಲಸಗಳಿಂದ ನೀವು ಎಲ್ಲವನ್ನೂ ಚೆನ್ನಾಗಿಯೇ ನಿಭಾಯಿಸುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನಮನಸ್ಸಿಗೆ ಕ್ಷೇಷ ಕರವಾದ ದಿನ.. ಆಸ್ತಿ ಪಾಸ್ತಿ ವಿಚಾರ, ಸಂಸಾರದ ವಿಚಾರ ಇತ್ಯಾದಿಗಳಲ್ಲಿ ಸ್ವಲ್ಪ ಕ್ಷೇಷ ಉಂಟಾಗುವ ಸಾಧ್ಯತೆ ಇರಲಿದೆ. ಹಾಗಾಗಿ ಯಾವುದೇ ಇಂದು ಮುಖ್ಯ ನಿರ್ಧಾರಗಳು ಇಂದು ಬೇಡ.

ಇದನ್ನು ಓದಿ:Daily Horoscope: ಈ ದಿನದ ಜೇಷ್ಠ ನಕ್ಷತ್ರದಿಂದ ಯಾವ ರಾಶಿಗೆಲ್ಲ ಲಾಭ?

ತುಲಾ ರಾಶಿ: ತುಲಾ ರಾಶಿ ಅವರಿಗೆಇಂದು ಕಷ್ಟಕರವಾದ ದಿನ ಆಗಲಿದೆ.‌ ಆದರೂ ನಿಮ್ಮ ಬಂಧು- ಬಾಂಧವರಿಂದ ನಿಮ್ಮ ಸಹೋದರರಿಂದ ಸಹಾಯ ಪಡೆದು ಕೊಳ್ಳುತ್ತೀರಿ. ಆತ್ಮವಿಶ್ವಾಸ ಕೂಡ ಚೆನ್ನಾಗಿ ಇರಲಿದ್ದು ಯಾವುದೇ ಅಡಚಣೆ ಇದ್ದರೂ ಭಯ ಪಡುವ ಅಗತ್ಯ ಇಲ್ಲ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸಂಸಾರದ ತಾಪತ್ರಯಗಳು ನಿಮಗೆ ಕಾಡಬಹುದು‌. ಆದರೂ ಸಂಸರಾದ ಆರ್ಥಿಕ ಸುಭದ್ರ ತೆಯ ಬಗ್ಗೆ ಹೆಚ್ಚಿನ ಒತ್ತು ನೀವು ನೀಡಲಿದ್ದೀರಿ. ಹೀಗಾಗಿ ಕೆಲಸ ಕಾರ್ಯ ಹಾಗೂ ಫ್ಯಾಮಿಲಿ ವಿಚಾರ ಸರಿದೂಗಿಸುವ ಮುಲಕ ಸಮಯ ಕಳೆಯಿರಿ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ. ಹಿಂದಿನ ಮೂರು ನಾಲ್ಕು ದಿನಗಳಲ್ಲಿ ಇದ್ದ ಕ್ಷೇಷದೂರ ಆಗಲಿದೆ. ಇವತ್ತು ಖುಷಿಯಾಗಿ ನೀವು ಸಮಯ ಕಳೆಯಲಿದ್ದು ಇತರರಿಗೂ ಸಲಹೆ ಸೂಚನೆಗಳನ್ನು ನೀಡುತ್ತೀರಿ.

ಮಕರ ರಾಶಿ: ಮಕರ ರಾಶಿ ಅವರಿಗೆ ಕಷ್ಟಕರವಾದ ದಿನ ಆಗಲಿದೆ. ಯಾವುದೇ ಮುಖ್ಯ ನಿರ್ಧಾರ ಇಂದು ಬೇಡ. ಪಾರ್ಟ್ನರ್ ಶೀಪ್, ವ್ಯವಹಾರಗಳಿಗೆ ಕೈ ಹಾಕಬೇಡಿ.‌ ಬೇರೆಯವರು ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆ ಇದೆ. ಹಾಗಾಗಿ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಒಳ್ಳೆಯ ದಿನ ಆಗಲಿದೆ. ಭಾಗ್ಯೋದಯ ವಾದ ದಿನ ವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕಾರ್ಯ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ.ಇಂದು ನಿಮಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಂಸಾರ ಹಾಗೂ ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಇಂದು ಹಿರಿಯರ ಭಗವಂತನ ಆರಾಧನೆ ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲಾ ರಾಶಿಯವರು ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.