ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀಪಾವಳಿ 2026: ನಾಳೆ ಎಷ್ಟು ಗಂಟೆಯೊಳಗೆ ಗೋಪೂಜೆ ಮಾಡಬೇಕು? ಪೂಜಾ ವಿಧಾನವೇನು? ಇಲ್ಲಿದೆ ಮಾಹಿತಿ

Govardhan pooje Rituals : ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನವಾದ ನಾಳೆ (ನವೆಂಬರ್ 10, ಮಂಗಳವಾರ) ಅತ್ಯಂತ ಪವಿತ್ರವಾದ ಗೋಪೂಜೆ ಹಾಗೂ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತಿದೆ.

ನಾಳೆ ಎಷ್ಟು ಗಂಟೆಯೊಳಗೆ ಗೋಪೂಜೆ ಮಾಡಬೇಕು? ಪೂಜಾ ವಿಧಾನವೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 9, 2026 3:57 PM

ಬೆಂಗಳೂರು: ದೇಶಾದ್ಯಂತ ದೀಪಾವಳಿ (Diwali 2026) ಹಬ್ಬದ ಸಂಭ್ರಮ ಮನೆಮಾಡಿದ್ದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನವಾದ ನಾಳೆ (ನವೆಂಬರ್ 10, ಮಂಗಳವಾರ) ಅತ್ಯಂತ ಪವಿತ್ರವಾದ ಗೋಪೂಜೆ ಹಾಗೂ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತಿದೆ. ಸನಾತನ ಧರ್ಮದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದ್ದು, ಈ ದಿನ ಹಸುವನ್ನು ಪೂಜಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ಗೋಪೂಜೆ ಮುಹೂರ್ತ

ಪಂಚಾಂಗದ ಪ್ರಕಾರ, ನಾಳೆ ಬೆಳಿಗ್ಗೆ ಗೋಪೂಜೆ ಮಾಡಲು ಅತ್ಯಂತ ಶ್ರೇಷ್ಠವಾದ ಮುಹೂರ್ತ ಲಭ್ಯವಿದೆ. ಉದಯ ತಿಥಿಯ ಮಹತ್ವದ ಹಿನ್ನೆಲೆಯಲ್ಲಿ ಬೆಳಿಗ್ಗೆ 06:40 ರಿಂದ 08:50 ರವರೆಗಿನ ಸಮಯ ಪೂಜೆಗೆ ಅತ್ಯಂತ ಶುಭ ಪ್ರದವಾಗಿದೆ. ಭಕ್ತರು ಈ 2 ಗಂಟೆ 10 ನಿಮಿಷಗಳ ಅವಧಿಯಲ್ಲಿ ಗೋಪೂಜೆ ನೆರವೇರಿಸುವುದು ಸೂಕ್ತ. ಒಂದು ವೇಳೆ ಬೆಳಗಿನ ಮುಹೂರ್ತ ತಪ್ಪಿದಲ್ಲಿ, ಕಾರ್ತಿಕ ಪ್ರತಿಪದ ತಿಥಿಯು ಮಧ್ಯಾಹ್ನ 02:00 ಗಂಟೆಗೆ ಮುಕ್ತಾಯಗೊಳ್ಳುವುದರಿಂದ, ಮಧ್ಯಾಹ್ನ 2 ಗಂಟೆಯ ಒಳಗಾಗಿ ಪೂಜಾ ವಿಧಿವಿಧಾನಗಳನ್ನು ಮುಗಿಸಬಹುದು.

ದೀಪಾವಳಿಯ ಬಲಿಪಾಡ್ಯಮಿಯ ದಿನದಂದು ಗೋಮಾತೆಯನ್ನು ಪ್ರೀತಿಯಿಂದ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಅಲಂಕರಿಸಲಾಗುತ್ತದೆ. ಹಸುವಿಗೆ ಬೆಲ್ಲ ಅಥವಾ ಸಿಹಿ ನೀಡಿ ಆರತಿ ಬೆಳಗಲಾಗುತ್ತದೆ. ಈ ದಿನ ಗೋವರ್ಧನ ಗಿರಿಯನ್ನು ಎತ್ತಿ ಗೋಪಾಲಕರನ್ನು ರಕ್ಷಿಸಿದ ಶ್ರೀಕೃಷ್ಣನನ್ನೂ ಆರಾಧಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಧನಧಾನ್ಯ ಹಾಗೂ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

ದೀಪಾವಳಿ ಸಮಯದಲ್ಲೇ ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; 400 ದಾಟಿದ ಗಾಳಿ ಗುಣಮಟ್ಟ

ಗೋಪೂಜೆ ಮಾಡುವುದು ಹೇಗೆ?

  • ಹಸುವನ್ನು ಶುದ್ಧವಾದ ನೀರಿನಿಂದ ಮೈತೊಳೆಸಿ, ಸಿದ್ಧಪಡಿಸಿ.
  • ಹಸು ನಿಲ್ಲುವ ಜಾಗವನ್ನು ತೊಳೆದು, ಗೋಮಯದಿಂದ ಶುದ್ಧೀಕರಿಸಿ, ಸುಂದರವಾದ ರಂಗೋಲಿಯನ್ನು ಹಾಕಬೇಕು.
  • ಹಸುವಿನ ಹಣೆಗೆ, ಕೊಂಬುಗಳಿಗೆ ಮತ್ತು ಬೆನ್ನಿಗೆ ಅರಿಶಿನ, ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಿ ಅಲಂಕರಿಸಬೇಕು.
  • ಗೋವುಗಳ ಕೊರಳಿಗೆ ಹೂವಿನ ಹಾರವನ್ನು ಹಾಕಿ, ಅವುಗಳ ಪಾದ ಪೂಜೆ ಮಾಡಿ.
  • ಗೋವುಗಳಿಗೆ ಆರತಿಯನ್ನು ಮಾಡಿ ತಿನ್ನಲು ಸಿಹಿಯನ್ನು ಕೊಟ್ಟು ಅವುಗಳ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಳ್ಳಿ.