Vastu Tips: ಮಹಡಿ ಮೇಲಿನ ಶೌಚಾಲಯದಿಂದ ಎಷ್ಟೆಲ್ಲ ಸಮಸ್ಯೆ ಇದೆ ಗೊತ್ತೇ?
ಮನೆಯ ಶೌಚಾಲಯದಿಂದಲೇ ಹೆಚ್ಚಿನ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಹೀಗಾಗಿ ಮನೆಯ ಶೌಚಾಲಯಕ್ಕೆ ಸಂಬಂಧಿಸಿ ವಾಸ್ತು ನಿಯಮಗಳನ್ನು (vastu Tips) ಪಾಲಿಸುವುದು ಅತ್ಯಗತ್ಯ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ಕೆಟ್ಟ ಪರಿಣಾಮಗಳು ಗೋಚರವಾಗತೊಡಗುತ್ತದೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಉದ್ಭವಾಗುತ್ತದೆ ಗೊತ್ತೇ? ಈ ಬಗ್ಗೆ ವಾಸ್ತು ತಜ್ಞರು ಹೇಳುವುದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.


ಒಂದು ಕಾಲದಲ್ಲಿ ಜನ ತುಂಬಾ ಇದ್ದರೂ ಮನೆ (Vastu for home) ಸಣ್ಣದಾಗಿತ್ತು. ಆದರೆ ಈಗ ಇರುವ ಎರಡು ಮೂರು ಮುಂದಿದೆ ಮನೆ ತುಂಬಾ ದೊಡ್ಡದಾಗಿರುತ್ತದೆ. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮನೆಯನ್ನು ಕಟ್ಟಲಾಗಿರುತ್ತದೆ. ಹಿಂದಿನ ಕಾಲದಲ್ಲಿ ಮನೆಯ ಹೊರಗೆಯೇ ಶೌಚಾಲಯಗಳನ್ನು (vastu for toilet) ಕಟ್ಟಲಾಗುತ್ತಿತ್ತು. ಆದರೆ ಈಗ ಎಲ್ಲವೂ ಸುಲಭವಾಗಬೇಕು ಎಂದು ಮನೆಯೊಳಗೇ ಶೌಚಾಲಯವನ್ನು ಕಟ್ಟಲಾಗುತ್ತದೆ. ಹೀಗಾಗಿ ಪ್ರತಿಯೊಂದು ಬೆಡ್ ರೂಮ್ ನೊಳಗೆ (vastu for bedroom ) ಒಂದು ಶೌಚಾಲಯವಂತೂ ಇದ್ದೇ ಇರುತ್ತದೆ. ಮನೆಯಲ್ಲಿ ಶೌಚಾಲಯ ಬಹಳ ಮುಖ್ಯ. ಆದರೆ ಇದರ ನಿರ್ಮಾಣದ ವೇಳೆ ಕೆಲವೊಂದು ಅಂಶಗಳನ್ನು (Vastu Tips) ನಿರ್ಲಕ್ಷಿಸುವಂತಿಲ್ಲ.
ಮನೆಯ ಶೌಚಾಲಯದಿಂದಲೇ ಹೆಚ್ಚಿನ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಹೀಗಾಗಿ ಮನೆಯ ಶೌಚಾಲಯಕ್ಕೆ ಸಂಬಂಧಿಸಿ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ಒಂದು ವೇಳೆ ಇದರ ನಿರ್ಮಾಣ ಕಾರ್ಯದಲ್ಲಿ ಈ ನಿಯಮಗಳನ್ನು ಪಾಲಿಸದಿದ್ದರೆ, ಮನೆಯಲ್ಲಿ ಕೆಟ್ಟ ಪರಿಣಾಮಗಳು ಗೋಚರವಾಗತೊಡಗುತ್ತದೆ.
ಈಗ ಸಾಮಾನ್ಯವಾಗಿ ಬಹುಮಹಡಿ ಕಟ್ಟಡಗಳನ್ನೇ ಮನೆ ಮಂದಿ ನಿರ್ಮಿಸುತ್ತಾರೆ. ಹೀಗಾಗಿ ಕೆಳಗೆ ಮಾತ್ರವಲ್ಲ ಮಹಡಿ ಮೇಲೂ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇದು ಸರಿಯೇ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ಜ್ಯೋತಿಷ್ಯಾಚಾರ್ಯ ರಾಧಾಕಾಂತ್ ವತ್ಸ್ ಹೇಳುವುದು ಹೀಗೆ..
ಇದನ್ನೂ ಓದಿ: Vastu Tips: ನೆಮ್ಮದಿಯ ನಿದ್ರೆಗಾಗಿ ಈ ವಸ್ತುಗಳು ದೂರವಿರಲಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಛಾವಣಿಯ ಮೇಲೆ ಶೌಚಾಲಯ ನಿರ್ಮಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಛಾವಣಿಯು ಮನೆಯ ಮೇಲ್ಭಾಗವಾಗಿದೆ ಮತ್ತು ವಾಸ್ತು ಶಾಸ್ತ್ರದಲ್ಲಿ ಇದನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಸಕಾರಾತ್ಮಕ ಶಕ್ತಿಗಳೊಂದಿಗೆ ನೇರ ಸಂಪರ್ಕವನ್ನು ಪಡೆಯುತ್ತದೆ. ಹೀಗಾಗಿ ಛಾವಣಿಯ ಮೇಲೆ ಶೌಚಾಲಯವನ್ನು ನಿರ್ಮಿಸುವುದರಿಂದ ಧನಾತ್ಮಕ ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತದೆ. ಯಾಕೆಂದರೆ ಶೌಚಾಲಯಕ್ಕೆ ಸಂಬಂಧಿಸಿದ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಶಕ್ತಿಯ ಅಸಮತೋಲನವನ್ನು ನಿರಂತರ ಹೆಚ್ಚಿಸುತ್ತದೆ.

ಮನೆಯ ಛಾವಣಿಯ ಮೇಲೆ ಶೌಚಾಲಯ ನಿರ್ಮಿಸುವುದರಿಂದ ಇದು ಮನೆಯ ಸದಸ್ಯರಿಗೆ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಣದ ಹರಿವಿನಲ್ಲಿ ಅಡ್ಡಿಯನ್ನು ಉಂಟು ಮಾಡುತ್ತದೆ.ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ಛಾವಣಿಯ ಮೇಲೆ ಶೌಚಾಲಯ ಇರುವುದು ಮನೆಯ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ವಿವಿಧ ರೀತಿಯ ಕಾಯಿಲೆಗಳು ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಛಾವಣಿಯ ಮೇಲೆ ಶೌಚಾಲಯವಿರುವುದರಿಂದ ನಕಾರಾತ್ಮಕ ಶಕ್ತಿಯ ಹರಿವಿನಿಂದಾಗಿ ಮನೆಯ ಸದಸ್ಯರಲ್ಲಿ ಮಾನಸಿಕ ಒತ್ತಡ, ಅಶಾಂತಿ ಮತ್ತು ಕಿರಿಕಿರಿ ಹೆಚ್ಚುತ್ತದೆ ಎನ್ನುತ್ತದೆ ಎಂದು ವಾಸ್ತು ಶಾಸ್ತ್ರ.
ಇವಿಷ್ಟೇ ಅಲ್ಲದೆ ಮನೆಯ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುವ ಇತರ ವಾಸ್ತು ದೋಷಗಳಿಗೂ ಕಾರಣವಾಗುತ್ತದೆ. ಇದು ಪೂಜಾ ಕೋಣೆ ಅಥವಾ ಅಡುಗೆಕೋಣೆಯಂತಹ ಮನೆಯ ಇತರ ಸ್ಥಳಗಳಲ್ಲಿ ಶಕ್ತಿಯ ಸಂಘರ್ಷವನ್ನು ಉಂಟುಮಾಡಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಮನೆಯ ಮೇಲೆ ಕೋಣೆಗಳನ್ನು ಕಟ್ಟಿದರೂ ಶೌಚಾಲಯವನ್ನು ನಿರ್ಮಿಸದೇ ಇರುವುದು ಒಳ್ಳೆಯದು ಎನ್ನುತ್ತದೆ ವಾಸ್ತು ಶಾಸ್ತ್ರ.