ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 15th: ಚಿತ್ತ ನಕ್ಷತ್ರದಂದು ಈ‌ ರಾಶಿಯವರು ಶತ್ರುಗಳಿಂದ ಜಾಗೃತರಾಗಿರಿ!

ನಿತ್ಯ ಭವಿಷ್ಯ ಡಿಸೆಂಬರ್ 15, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ,ಏಕದಾಶಿ ತಿಥಿ, ಚಿತ್ತ ನಕ್ಷತ್ರದ ಡಿಸೆಂಬರ್ 15 ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಕುಜನಿಂದ ಈ ರಾಶಿಗೆ ಇಂದು ಒಳಿತಿನ ಜೊತೆಗೆ ಆರ್ಥಿಕ ಲಾಭ!

ಸಂಗ್ರಹ ಚಿತ್ರ -

Profile
Pushpa Kumari Dec 15, 2025 8:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಹಿಮದೃತು, ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ಏಕಾದಶಿ ತಿಥಿ , ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಹಸ್ತ ನಕ್ಷತ್ರದ ಅಧಿಪತಿ ಕುಜ ಆಗಿದ್ದಾನೆ. ಹಾಗಾಗಿ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ.ನೀವು ಹೇಳಿದ ಎಲ್ಲ ಕೆಲಸ ಕಾರ್ಯಗಳು ಇಂದು ನಡೆಯುತ್ತವೆ. ಮನಸ್ಸಿಗೆ ಹೆಚ್ಚು ನೆಮ್ಮದಿ ಇದ್ದು ಎಲ್ಲರಿಂದ ಸಹಕಾರ ಸಿಗುತ್ತದೆ. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತೀ ಉತ್ತಮ ವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು. ನೀವು ಅನಿಸಿದಂತೆ ನಿಮ್ಮ ಕೆಲಸ ಕಾರ್ಯಗಳು ಪೂರ್ಣ ಗೊಳ್ಳುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ಮಧ್ಯಾಹ್ನ ವರೆಗೂ ಮನೆಯ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡ ಬೇಕಾಗುತ್ತದೆ. ಮಧ್ಯಾಹ್ನ ನಂತರ ನಿಮ್ಮ ಮಕ್ಕಳು,ಹಣಕಾಸಿನ ವಿಚಾರದ ಬಗ್ಗೆ ಗಮನ ನೀಡಬೇಕಾಗುತ್ತದೆ.ಇಂದು ಬುದ್ದಿ ಶಕ್ತಿಯಿಂದ ನೀವು ಎಲ್ಲವನ್ನು ಗೆಲ್ಲಬಹುದು.

ಕಟಕ ರಾಶಿ: ಕಟಕ ರಾಶಿ ಅವರು ಮಧ್ಯಾಹ್ನ ವರೆಗೂ ಅತೀ ಹೆಚ್ಚಿನ ನೆಮ್ಮದಿಯನ್ನು ನೀವು ಕಾಣುತ್ತೀರಿ. ‌ಮಧ್ಯಾಹ್ನ ಬಳಿಕ ನಿಮ್ಮ ತಾಯಿಯ ಜೊತೆ ಸಮಯವನ್ನು ಕಳೆದು ಖುಷಿಯನ್ನು ನೀಡುತ್ತೀರಿ.

Vastu Tips: ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ.‌ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸ ಕಾರ್ಯದಲ್ಲಿ ಕೂಡ ಯಶಸ್ಸು ಕಾಣುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಸಂಸಾರದ ವಿಚಾರದಲ್ಲಿ ಜವಾಬ್ದಾರಿ ಹೆಚ್ಚು ಇರುತ್ತದೆ. ಮನೆಯಲ್ಲಿ ಜಗಳ,ಮನಸ್ತಾಪ ಹೆಚ್ಚು ಆಗುತ್ತದೆ. ಹಾಗಾಗಿ ಎಲ್ಲರ ಜೊತೆ ವಿನಯ ಪೂರ್ವಕವಾಗಿ ಇರಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಅತೀ ಉತ್ತಮವಾದ ದಿನ ವಾಗಿದೆ.ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಎಲ್ಲವೂ ಬಗೆಹರಿಯಲಿದೆ. ಬಹಳ ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತೀ ಕ್ಲಿಷ್ಟಕರವಾದ ದಿನವಾಗಿದೆ. ಇಂದು ನಿಮಗೆ ಶತ್ರುಗಳು ಹೆಚ್ಚಾಗಬಹುದು.‌ ಹಾಗಾಗಿ ಈ ಬಗ್ಗೆ ನೀವು ಹೆಚ್ಚು ಜಾಗೃತರಾಗಿ ಇರಬೇಕಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ‌ಸಿದ್ದಿ ಯಾಗಲಿದೆ.ಮಿತ್ರರಿಂದ ಧನ ಆಗಮನ ಹಾಗೂ ಅತೀಹೆಚ್ಚು ಸಂತೋಷ ನಿಮಗೆ ಸಿಗುತ್ತದೆ.

ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ ಹಾಗೂ ಅತೀ ಹೆಚ್ಚು ನೆಮ್ಮದಿ ಸಿಗುತ್ತದೆ. ಉತ್ತಮವಾದ ಪ್ರತಿಷ್ಠೆ ಕೂಡ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಭಾಗ್ಯೋದಯವಾದ ದಿನ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ತಾಪ ಎಲ್ಲವೂ ಬಗೆಹರಿಯುತ್ತದೆ..

ಮೀನ ರಾಶಿ: ಮೀನ ರಾಶಿ ಅವರಿಗೂ ಕ್ಲಿಷ್ಟಕರವಾದ ದಿನ ವಾಗಿದೆ. ಯಾರ ಸಹಕಾರ ಇಲ್ಲ ಎನ್ನುವ ಭಾವನೆ ಬರಬಹುದು.ಧಾನ್ಯದಿಗಳನ್ನು ಮಾಡಿ ನೀವು ಸಮಯ ಕಳೆಯ ಬೇಕಾಗುತ್ತದೆ. ನಾಳೇ ನಿಮಗೆ ಅತೀ ಉತ್ತಮವಾದ ದಿನವಾಗಲಿದೆ.