ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಅಕ್ಟೋಬರ್ 4, 2026: ಇಂದು ಹೊಸ ಅವಕಾಶಗಳು ತೆರೆದುಕೊಳ್ಳಲಿದೆ

Horoscope Today October 4th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಪುನರ್ವಸು ನಕ್ಷತ್ರದ ಅಕ್ಟೋಬರ್‌ 4ನೇ ತಾರೀಕಿನ ಈ ದಿನದ ಭವಿಷ್ಯದ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಇಂದು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ

ಸಾಂದರ್ಭಿಕ ಚಿತ್ರ -

Profile
Pushpa Kumari Oct 4, 2026 6:00 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಇಂದು ಉತ್ತಮವಾದ ದಿನವಾಗಲಿದ್ದು, ಕೆಲಸಗಳಲ್ಲಿ ಉತ್ಸಾಹ ಹೆಚ್ಚಾಗಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಲಿದ್ದು, ಆರ್ಥಿಕವಾಗಿ ಯಶಸ್ಸು ಕಾಣುತ್ತೀರಿ.

ವೃಷಭ ರಾಶಿ: ಕುಟುಂಬದವರ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಿ ಪ್ರತಿಷ್ಠೆ ಸಿಗಬಹುದು. ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ.

ಮಿಥುನ ರಾಶಿ: ಇಂದು ಪ್ರಮುಖ ಕೆಲಸಗಳು ಯಶಸ್ವಿಯಾಗುವ ದಿನವಾಗಲಿದೆ. ಸ್ನೇಹಿತರೊಂದಿಗೆ ಖುಷಿಯಾದ ದಿನ ಕಳೆಯುವಿರಿ.

ಕಟಕ ರಾಶಿ: ಇಂದು ಮನೆಯವರೊಂದಿಗೆ ಖುಷಿಯಿಂದ ದಿನ ಕಳೆಯುತ್ತೀರಿ. ಅತಿಥಿಗಳ ಆಗಮನವಾಗಲಿದೆ. ಅದೇ ರೀತಿ ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದೆ.

ಸಿಂಹ ರಾಶಿ: ನಿಮ್ಮ ಪ್ರತಿಭೆಗೆ ತಕ್ಕ ಮೆಚ್ಚುಗೆ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಸಾಧ್ಯತೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ.

ಕನ್ಯಾ ರಾಶಿ: ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.‌ ಕೆಲಸದ ಸ್ಥಳದಲ್ಲಿ ಪ್ರತಿಷ್ಠೆ ಹೆಚ್ಚಾಗಬಹುದು.

ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ

ತುಲಾ ರಾಶಿ: ಇಂದು ವ್ಯಾಪಾರ-ವ್ಯವಹಾರದಲ್ಲಿ ಲಾಭ ನಿಮ್ಮದಾಗಬಹುದು. ಆದರೆ ನಿಮ್ಮ ಖರ್ಚಿನ ಮೇಲೆ ನಿಯಂತ್ರಣ ಇರಲಿ.

ವೃಶ್ಚಿಕ ರಾಶಿ: ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಿರಿಯರ ಸಲಹೆ ತೆಗೆದುಕೊಳ್ಳಲು ಮರೆಯದಿರಿ.

ಧನು ರಾಶಿ: ಹೊಸ ಕೆಲಸ ಆರಂಭಿಸಲು ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆಯ ಚಿಂತನೆ ಮೂಡಬಹುದು.

ಮಕರ ರಾಶಿ: ಇಂದು ಹಣಕಾಸಿನ ವಿಚಾರದಲ್ಲಿ ಒಳಿತಾಗಲಿದೆ. ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ.

ಕುಂಭ ರಾಶಿ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಬಹುದು. ಆರ್ಥಿಕವಾಗಿ ಸದೃಢಗೊಳ್ಳುತ್ತೀರಿ.

ಮೀನ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಹಾಗೂ ಗೌರವ ನಿಮ್ಮದಾಗುತ್ತದೆ.