Vastu Tips: : ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಎಲ್ಲಿಡಬೇಕು ಗೊತ್ತಾ..?
Vastu Tips for Flute: ಕೃಷ್ಣನಿಗೆ ಅತಿ ಪ್ರಿಯವಾದ ವಸ್ತುಗಳಲ್ಲಿ ಕೊಳಲು ಪ್ರಮುಖ ಸ್ಥಾನ ಹೊಂದಿದೆ. ಹಾಗಾಗಿ ಮನೆಯಲ್ಲಿ ಕೊಳಲನ್ನು ಇಟ್ಟರೆ ಸಂತೋಷ, ಸಮೃದ್ಧಿ ಹಾಗೂ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿಯೂ ಕೊಳಲಿಗೆ ವಿಶೇಷ ಮಹತ್ವ ನೀಡಲಾಗಿದೆ. ಮನೆಯಲ್ಲಿ ಕೊಳಲನ್ನು ಇಡುವುದರಿಂದ ಶುಭ ಫಲ ದೊರಕುತ್ತದೆ ಎಂದು ವಾಸ್ತು ಹೇಳುತ್ತದೆ. ಹಾಗಾದ್ರೆ ಬನ್ನಿ ಕೊಳಲನ್ನು ಎಲ್ಲಿ ಇಡಬೇಕು..? ಹೇಗೆ ಇಡಬೇಕು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಕೊಳಲು -
ಬೆಂಗಳೂರು: ಹಿಂದೂ ಸನಾತನ ಧರ್ಮದಲ್ಲಿ (Hindu Dharma) ವಾಸ್ತುಶಾಸ್ತ್ರಕ್ಕೆ(Vastu Shastra) ತನ್ನದೇ ಆದ ಸ್ಥಾನವಿದ್ದು, ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ನಮ್ಮ ಆಚಾರ-ವಿಚಾರಗಳಲ್ಲಿಯೂ ವಾಸ್ತು ಹಾಸುಹೊಕ್ಕು ಆಗಿದ್ದು, ಜೀವನದಲ್ಲಿ ಸುಖ ಶಾಂತಿಯನ್ನು ತರುವಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ.
ಅಲ್ಲದೇ ವಾಸ್ತುವಿಗೆ ಅನುಗುಣವಾಗಿ ಮನೆ, ಕಚೇರಿ ಅಥವಾ ಯಾವುದೇ ಸ್ಥಳವನ್ನು ನಿರ್ಮಾಣ ಮಾಡುವುದರಿಂದ ಆ ಮನೆ ಅಥವಾ ಕಚೇರಿಯಲ್ಲಿ ಸಂತೋಷ ನೆಲೆಸುತ್ತದೆ ಎಂಬುದು ನಂಬಿಕೆ. ವಾಸ್ತುವು ನಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಚಿಂತನೆ ಹಾಗೂ ಭಾವನೆಗಳನ್ನು ವೃದಿಸುವುದರ ಜೊತೆ ಶಾಂತಿ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಜೊತೆಗೆ ಇದು ಸಕಾರಾತ್ಮಕ ಭಾವವನ್ನು ಮೂಡಿಸುತ್ತದೆ.
ಇನ್ನು ಕೆಲವೊಮ್ಮೆ ನಾವು ಈ ವಾಸ್ತುವಿನ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ಮಾಡುತ್ತೇವೆ. ಸ್ಟೇಟಸ್ ಅಂತಸ್ತು ಅಂತ ನಮ್ಮ ಅಗತ್ಯಕ್ಕೆ ತಕ್ಕಂತೆ ಯಾವ್ಯಾವ ವಸ್ತುಗಳನ್ನು ಮನಸ್ಸಿಗೆ ಇಚ್ಚೆ ಬಂದಂತೆ ಇಟ್ಟು ಬಿಡುತ್ತೇವೆ. ಆದರೆ ಇದರಿಂದ ನಮ್ಮ ಬದುಕಿನಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ನಕಾರಾತ್ಮಕತೆಯೂ ಹೆಚ್ಚಾಗುತ್ತದೆ.
ಎಲ್ಲಿಯವರೆಗೆ ವಾಸ್ತು ಮುಖ್ಯವೆಂದರೆ ಮನೆಯಲ್ಲಿ ಕೆಲವು ಪ್ರಾಣಿ, ಪಕ್ಷಿಗಳನ್ನು ಸಾಕುವುದು ಕೂಡ ವಾಸ್ತುವಿಗೆ ಅನುಗುಣವಾಗಿ ಇರಬೇಕು, ಇದು ವಾಸ್ತುವಿನ ಭಾಗವಾಗಿದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಅಲ್ಲದೇ ನಾವು ಕೆಲವೊಮ್ಮೆ ಮನೆಯ ಅಂದಕ್ಕೆ ಎಂದು ಬಳಸುವ ಅಥವಾ ಇಡುವ ನವಿಲುಗರಿ, ಫಿಶ್ ಅಕ್ವೇರಿಯಂ, ಕೊಳಲು ಇದಕ್ಕೆ ಹೊರತಾಗಿಲ್ಲ.
ಈ ಸುದ್ದಿಯನ್ನು ಓದಿ: Viral Video: "ನೀವು ಶ್ರೇಷ್ಠರಂತೆ ನಟಿಸುವುದು ಬೇಡ"; ಭಾರತೀಯ ವ್ಯಕ್ತಿ ಮೇಲೆ ಜನಾಂಗೀಯ ದಾಳಿ, ವಿಡಿಯೋ ವೈರಲ್
ಹಾಗಾಗಿ ನಾವಿಂದು ಮನೆಯಲ್ಲಿ ಕೊಳಲನ್ನು(Flute) ಎಲ್ಲಿ ಇಡಬೇಕು..? ಹೇಗೆ ಇಡಬೇಕು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಶ್ರೀಕೃಷ್ಣನ ಪ್ರಿಯ ವಸ್ತು ಆಗಿರುವ ಕೊಳಲಿಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದ್ದು, ವಾಸ್ತು ದೋಷಗಳನ್ನು ನಿವಾರಿಸುವಲ್ಲಿ ಕೊಳಲು ಪ್ರಮುಖ ಪಾತ್ರ ವಹಿಸಲಿದೆ. ಹಣಕಾಸಿನ ಸಮಸ್ಯೆಗಳನ್ನು ಪರಿಹಾರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಆರ್ಥಿಕ ಸಮಸ್ಯೆಗೆ ಪರಿಹಾರ
ವ್ಯಾಪಾರದಲ್ಲಿ ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದರೆ ಅಥವಾ ಬೇರೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಅದಕ್ಕೆ ಕೊಳಲಿನಲ್ಲಿ ಪರಿಹಾರವಿದೆ. ಬಿದಿರಿ ನಿಂದ ಮಾಡಿದ ಕೊಳಲನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆ ಆಗುತ್ತದೆ. ನಿಮ್ಮ ಅಂಗಡಿ ಅಥವಾ ಕಚೇರಿಯ ಚಾವಣಿಯ ಮೇಲೆ ಈ ಬಿದುರಿನ ಕೊಳಲನ್ನು ನೇತುಹಾಕಬೇಕು. ಇದರಿಂದ ವ್ಯವಹಾರದಲ್ಲಿ ಯಶಸ್ಸು ಸಿಗುವುದಲ್ಲದೆ ಲಾಭ ನಿಮ್ಮದಾಗುತ್ತದೆ.
ಲಕ್ಷ್ಮೀ ನೆಲಸುತ್ತಾಳೆ
ಇನ್ನು ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಬೆಳ್ಳಿಯ ಕೊಳಲನ್ನು ಇಡುವುದು ಶ್ರೇಷ್ಠ ಎಂದು ಹೇಳಲಾಗಿದ್ದು, ಬೆಳ್ಳಿಯ ಕೊಳಲನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಇದಲ್ಲದೇ ವಿದ್ಯಾಭ್ಯಾಸ, ವ್ಯಾಪಾರ, ಉದ್ಯೋಗದಲ್ಲಿ ಅಡಚಣೆ ಉಂಟಾದಾಗ ಮಲಗುವ ಕೋಣೆಯ ಬಾಗಿಲಲ್ಲಿ ಎರಡು ಕೊಳಲುಗಳನ್ನು ಹಾಕುವುದು ಶುಭಕರವಾಗಿದೆ.
ಕೌಟುಂಬಿಕ ಕಲಹ ನಿವಾರಣೆಗಾಗಿ
ಇನ್ನು ಮನೆಯಲ್ಲಿ ಕೌಟುಂಬಿಕ ಕಲಹ, ಮನಸ್ತಾಪ ಅಥವಾ ಸತಿ ಪತಿಗಳ ಮಧ್ಯೆ ಬಿನ್ನಾಭಿಪ್ರಾಯಗಳನ್ನು ಕೊಳಲು ಪರಿಹಾರಿಸಲಿದ್ದು, ಕೊಳಲಿನ ಮೂಲಕ ದಾಂಪತ್ಯ ಜೀವನದಲ್ಲಿ ಸಾಮರಸ್ಯವನ್ನು ತರಬಹುದು. ಹಾಗಾಗಿ ಎರಡು ಕೊಳಲುಗಳನ್ನು ತೆಗೆದುಕೊಂಡು ಅವುಗಳನ್ನು ಕೆಂಪು ದಾರ ಅಥವಾ ರಿಬ್ಬನ್ ನಿಂದ ಹಾಸಿಗೆಗೆ ಕಟ್ಟಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.