ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Makar Sankranti 2026: ಮನೆಯ ಸುಖ, ಸಂಪತ್ತಿಗಾಗಿ ಮಕರ ಸಂಕ್ರಾತಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಈ ದಿನದಿಂದ ಶುಭಕಾರ್ಯ ಮರು ಆರಂಭವಾಗುತ್ತದೆ. ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತರುವುದು ಭಾಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.

ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟ ನಿಮ್ಮದಾಗುತ್ತದೆ!

ಸಂಕ್ರಾಂತಿ (ಎಐ ಚಿತ್ರ) -

Profile
Sushmitha Jain Jan 15, 2026 6:00 AM

ಬೆಂಗಳೂರು, ಜ. 15: ಸಂಕ್ರಾಂತಿ (Makar Sankranti) ಸೂರ್ಯ ದೇವರಿಗೆ ಸಮರ್ಪಿತವಾದ ಪವಿತ್ರ ಹಬ್ಬ. ಸೂರ್ಯನು ತನ್ನ ಚಲನೆಯನ್ನು ಬದಲಿಸಿ ಉತ್ತರಾಯಣ ಪ್ರವೇಶಿಸುವುದನ್ನು ಸೂಚಿಸುವ ಹಬ್ಬವನ್ನಾಗಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸಾಗುವ ಈ ಸಂಕ್ರಮಣವು ಪ್ರಕೃತಿಯ ಹೊಸ ಚಕ್ರದ ಆರಂಭವನ್ನು ಸೂಚಿಸುತ್ತದೆ. 2026ನೇ ಸಾಲಿನಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ.

ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಸಂಕ್ರಾಂತಿಯ ಮರುದಿನ ಶ್ರೀ ಕೃಷ್ಣನನ್ನು ಪೂಜಿಸುವ ಸಂಪ್ರದಾಯವಿದೆ. ಮಕರ ಸಂಕ್ರಾಂತಿಯ ನಂತರದ ದಿನವೇ ಶ್ರೀ ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದನೆಂಬ ಪೌರಾಣಿಕ ಹಿನ್ನೆಲೆ ಇದಕ್ಕೆ ಕಾರಣ. ಇದು ರೈತರಿಗೆ ಬೆಳೆ ಕೈಗೆ ಬರುವ ಕಾಲವಾಗಿದ್ದು, ಹಬ್ಬವು ಕೃತಜ್ಞತೆಯ ಸಂಕೇತವಾಗಿದೆ. ಈ ಕಾರಣದಿಂದ ಗೆಣಸು, ಕಡಲೆಕಾಯಿ, ಅವರೇಕಾಯಿ, ಎಳ್ಳು, ಬೆಲ್ಲ ಸೇರಿದಂತೆ ನಾನಾ ಧಾನ್ಯಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳಿಗೆ ಕಿಚ್ಚು ಹಾಯಿಸುವ ಪದ್ಧತಿಯೂ ಸಂಕ್ರಾಂತಿ ಸಂಭ್ರಮದ ಅವಿಭಾಜ್ಯ ಅಂಗವಾಗಿ ಇಂದಿಗೂ ನಡೆದು ಬರುತ್ತಿದೆ.

ಹಿಂದೂ ಧರ್ಮದಲ್ಲಿ ಸಂಕ್ರಾಂತಿ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಈ ದಿನದಿಂದ ಶುಭ ಕಾರ್ಯ ಪುನಃ ಆರಂಭವಾಗುತ್ತದೆ. ಹಾಗೇ ಹೊಸ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾತಿ ದಿನದಂದು ಕೆಲ ವಿಶೇಷ ವಸ್ತುಗಳನ್ನು ಮನೆಗೆ ತರುವುದು ಶ್ರೇಷ್ಠವೆಂದು ನಂಬಲಾಗುತ್ತದೆ. ಇವುಗಳನ್ನು ಮನೆಗೆ ತರುವುದರಿಂದ ಭಾಗ್ಯ ವೃದ್ಧಿ, ಶಾಂತಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿಮ್ಮ ಜೀವನದಲ್ಲೂ ಶುಭಫಲಗಳು ದೊರಕಬೇಕೆಂದಿದ್ದರೆ ಈ ವಸ್ತುಗಳನ್ನು ಮನೆಗೆ ತರಬಹುದು.

ಹಬ್ಬದ ದಿನ ಈ ವಸ್ತು ಮನೆಗೆ ತನ್ನಿ

ತೆಂಗಿನಕಾಯಿ: ಮಕರ ಸಂಕ್ರಾಂತಿಯಂದು ಸಣ್ಣ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿ ಅಥವಾ ಪೂಜಾ ಸ್ಥಳದಲ್ಲಿ ಇಡಬೇಕು. ಇದರಿಂದ ಮನೆಗೆ ಲಕ್ಷ್ಮೀಯ ಆಗಮವಾಗಲಿದ್ದು, ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ತುಳಸಿ: ಗಿಡ ತುಳಸಿಯನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹೊಸ ವರ್ಷದ ಮೊದಲ ಹಬ್ಬದ ಸಂದರ್ಭದಲ್ಲಿ ಒಂದು ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ಅಥವಾ ತರುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

Makar Sankranti 2026: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದೇಕೆ? ಏನಿದರ ವಿಶೇಷ ಗೊತ್ತಾ?

ಲೋಹದ ಆಮೆ: ಮನೆಗೆ ಲೋಹದ ಆಮೆಯ ವಿಗ್ರಹವನ್ನು ತಂದರೆ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ದುಷ್ಟ ಶಕ್ತಿಗಳು ದೂರವಾಗುತ್ತದೆ ಎಂದು ನಂಬಲಾಗುತ್ತದೆ.

ದಕ್ಷಿಣಾವರ್ತಿ ಶಂಖ: ಸಂಕ್ರಾಂತಿ ಹಬ್ಬದ ಪೂಜೆಯ ನಂತರ ದಕ್ಷಿಣಾವರ್ತಿ ಶಂಖವನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದು ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ನವಿಲು ಗರಿಗಳು: ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ನವಿಲು ಗರಿಗಳನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀದೇವಿಯ ಕೃಪೆ ಸದಾ ಇರಲಿದೆ ಎಂದು ನಂಬಿಕೆ. ಸುಮಾರು ಮೂರು ನವಿಲು ಗರಿಗಳನ್ನು ತರುವುದು ಶುಭಕರ.

ಲಾಫಿಂಗ್ ಬುದ್ಧ: ಸಂಕ್ರಾಂತಿಯಂದು ಲಾಫಿಂಗ್ ಬುದ್ಧನ ವಿಗ್ರಹ ಅಥವಾ ಫೋಟೊವನ್ನು ಮನೆಗೆ ತಂದು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಸಮೃದ್ಧಿ ಹಾಗೂ ಸಂತೋಷ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.