ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 11, 2026: ಗುರು ವಕ್ರ ತ್ಯಾಗದಿಂದ ಯಾವ ರಾಶಿಗೆ ಶುಭವಾಗಲಿದೆ?

Horoscope Today March 11: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಅಷ್ಟಮಿ ತಿಥಿ, ಜೇಷ್ಠ ನಕ್ಷತ್ರದ ಮಾರ್ಚ್ 11ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಈ ರಾಶಿಗೆ ಇಂದು ಉತ್ತಮ ಉದ್ಯೋಗ ಸಿಗುವ ಸಾಧ್ಯತೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Mar 11, 2026 6:00 AM

ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಜೇಷ್ಠ ನಕ್ಷತ್ರ ಇದ್ದು ಗುರು ವಕ್ರ ತ್ಯಾಗ ಮಾಡುತ್ತಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಇಡಲಿದ್ದೀರಿ.ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಉತ್ತಮವಾದ ದಿನವಾಗಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಹಣಕಾಸಿನ ವಿಚಾರಕ್ಕೆ ಪ್ರಗತಿ ಉಂಟಾಗುವ ಸಾಧ್ಯತೆ ಇರುತ್ತದೆ. ಧನ ಆಗಮನವಾಗುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಕೆಲಸಕ್ಕೆ ಸಂಬಂಧಿಸಿದ ಪೂಜಾ ಕಾರ್ಯಕ್ರಮಗಳು ನಿಮ್ಮ ಮನೆಯಲ್ಲಿ ನಡೆಯಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾದ ದಿನವಾಗಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಉಂಟಾದ ಸಣ್ಣ ಪುಟ್ಟ ತೊಂದರೆಗಳು ಮಯವಾಗಲಿದೆ. ಹಾಗೂ ಆಧ್ಯಾತ್ಮಿಕತೆಯಲ್ಲಿ ಅತೀ ಹೆಚ್ಚಿನ ಆಸಕ್ತಿ ನೀವು ತೋರಿಸಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಮಿತ್ರತ್ವದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರಲಿದೆ. ಅದೇ ರೀತಿ ಆರೋಗ್ಯದಲ್ಲೂ ಜಾಗೃತರಾಗಿ ಇರಬೇಕು.

ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಲಾಭಗಳು ನಿಮಗೆ ಸಿಗುತ್ತದೆ.

Vastu Tips: ಸಾಲದ ತಲೆನೋವು ಕಾಡುತ್ತಿದೆಯೇ? ಮನೆಯ ಈ ದಿಕ್ಕಿನಲ್ಲಿ ಈ ವಸ್ತು ಇಟ್ಟರೆ ಆರ್ಥಿಕ ಸಮಸ್ಯೆ ದೂರ!

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಪ್ರತಿಷ್ಠೆ ಸಿಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಿವಾಹ ಯೋಗ ಉಂಟಾಗುವ ಸಾಧ್ಯತೆ ಇದೆ. ಸಂತಾನೋತ್ಪತ್ತಿ ಭಾಗ್ಯ ಕೂಡ ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ಗೋಚರ ಇರುತ್ತದೆ. ಮನಸ್ಸಿಗೆ ಸ್ವಲ್ಪ ಯೋಚನೆಗಳು ಕಾಡುವ ಸಾಧ್ಯತೆ ಇರುತ್ತದೆ‌.ಅದೇ ರೀತಿ ಮುಖ್ಯವಾದ ಸಂಬಂಧದಲ್ಲಿ ಒಡಕು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ಗೋಚರ ಇರುತ್ತದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ವಿವಾಹ ಯೋಗ ಇರಲಿದೆ. ಒಳ್ಳೆಯ ಕೆಲಸ ಸಿಗಲಿದ್ದು ಯಶಸ್ಸು ಮತ್ತು ಗೌರವ ಸಿಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ವೈರಿ ಭಾದೆಗಳು ಜಾಸ್ತಿಯಾಗಬಹುದು. ಸರಿಯಾದ ಮಾರ್ಗದಲ್ಲಿ ನಡೆದಾಗ ಮಾತ್ರ ಜಯ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಪ್ರೀತಿ ಪ್ರೇಮ ವಿಚಾರದಲ್ಲೂ ನೆಮ್ಮದಿ ಇರುತ್ತದೆ.

ಮೀನ ರಾಶಿ: ಮೀನ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಕಷ್ಟಕರವಾದ ದಿನವಾಗಿದೆ. ಆದರೆ ಮನೆಯಲ್ಲಿ ನೆಮ್ಮದಿ ತರುವ ದಿನವಾಗಿದೆ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ.