ದಿನ ಭವಿಷ್ಯ, ಜೂನ್ 10, 2026: ಈ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಪ್ರಾಪ್ತಿ!
Horoscope Today June 10th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ದಶಮಿ ತಿಥಿ,ರೇವತಿ ನಕ್ಷತ್ರದ, ಜೂನ್ 10ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ದಶಮಿ ತಿಥಿ,ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ರೇವತಿ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ. ಹಾಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಗೆ ನಾನಾ ರೀತಿಯ ವ್ಯಾಕ್ಯೂಲತೆ ಇಂದು ಕಾಡುತ್ತಿರಬಹುದು. ಹಾಗಾಗಿ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ.
ವೃಷಭ ರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದೇ ರೀತಿ ಕೆಲಸ ಕಾರ್ಯದಲ್ಲಿ ಇಂದು ಧನ ಲಾಭವಾಗುತ್ತದೆ.
ಮಿಥುನ ರಾಶಿ: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಇಂದು ನಿನಗೆ ಗಜಕೇಸರಿ ಯೋಗ ಪ್ರಾಪ್ತಿಯಾಗಲಿದ್ದು ಮುಖ್ಯ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಳ್ಳುತ್ತೀರಿ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಆದರೂ ಕೂಡ ಹಿರಿಯರ ಆಶೀರ್ವಾದದಿಂದ ಕೆಲವೊಂದು ಮುಖ್ಯ ಕೆಲಸವನ್ನು ಪೂರೈಸಿಕೊಳ್ಳಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಾನಾ ರೀತಿಯ ಯೋಚನೆಗಳು ಇಂದು ಕಾಡುತ್ತಿರಬಹುದು. ಇತರರು ನಿಮ್ಮನ್ನು ಟೀಕೆ ಮಾಡುವ ಸಂದರ್ಭ ಇಂದು ಬರಬಹುದು.
Vastu Tips: ಅಡುಗೆಮನೆಯ ವಾಸ್ತು ನಿಯಮಗಳು: ಆರೋಗ್ಯ, ಸಮೃದ್ಧಿಗೆ ಈ ಸರಳ ಟಿಪ್ಸ್ ಪಾಲಿಸಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಗಜಕೇಸರಿ ಯೋಗ ನಿಮಗೆ ಇರಲಿದ್ದು ಮುಖ್ಯವಾದ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ನಿಮ್ಮ ಷಷ್ಠದಲ್ಲಿ ಗಜಕೇಸರಿ ಯೋಗ ಇದೆ. ವೈರಿಗಳು ನಿಮಗೆ ಇದ್ದರೂ ಸರಿಯಾದ ನಿರ್ಧಾರ ತೆಗೆದುಕೊಂಡಾಗ ಯಶಸ್ಸು ಖಂಡಿತ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಗೆ ಮಕ್ಕಳಿಗೆ ಭಾರೀ ಅನುಕೂಲವಾಗಿ ಇರುತ್ತದೆ. ಇಂದು ಕೆಲಸ ಕಾರ್ಯದಲ್ಲಿ ,ಬಿಸೆನೆಸ್ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಅದೇ ರೀತಿ ನಿಮ್ಮ ಪ್ರತಿಷ್ಠೆ ಕೂಡ ಇಂದು ಹೆಚ್ಚಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ನಿಮ್ಮ ಚತುರ್ಥದಲ್ಲಿ ಗಜ ಕೇಸರಿ ಯೋಗ ಇದೆ. ಹಾಗಾಗಿ ವೈಯಕ್ತಿಕವಾಗಿ ಬಹಳ ದೊಡ್ಡ ತಿರುವನ್ನು ನೀವು ಕಾಣಬಹುದು. ಕೋರ್ಟ್ ಕಛೇರಿ ವ್ಯವಹಾರದಲ್ಲೂ ನಿಮಗೂ ಜಯ ಸಿಗುತ್ತದೆ
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಇಂದು ಅತೀ ಲಾಭದಾಯಕ ದಿನವಾಗಿದೆ
ಕುಂಭರಾಶಿ: ಈ ರಾಶಿಯವರಿಗೆ ಮನೆಯಲ್ಲಿ ನೆಮ್ಮದಿ, ಸಂತೋಷ ಇರುತ್ತದೆ. ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗದರ್ಶನ ಕೂಡ ಇಂದು ಪ್ರಾಪ್ತಿಯಾಗುತ್ತದೆ.
ಮೀನ ರಾಶಿ: ಮೀನ ರಾಶಿಗೆ ನಿಮ್ಮ ರಾಶಿಯಲ್ಲಿ ಗಜ ಕೇಸರಿ ಯೋಗ ಇದೆ. ಮುಂದಿನ ದಿನದಲ್ಲಿ ನಿಮಗೆ ಸಮಯ ಕಳೆಯಲು ಉತ್ತಮ ಮಾರ್ಗದರ್ಶನ ಸಿಗುತ್ತದೆ.