ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ ಏಪ್ರಿಲ್ 17, 2026: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

Horoscope Today April 17: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯ ತಿಥಿ, ರೇವತಿ ನಕ್ಷತ್ರದ ಎಪ್ರಿಲ್ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂದು ಈ ರಾಶಿಯವರು ವ್ಯವಹಾರದಲ್ಲಿ ಎಚ್ಚರ ವಹಿಸಿ

ಇಂಟರ್‌ನೆಟ್ ಚಿತ್ರ -

Profile
Pushpa Kumari Apr 17, 2026 6:00 AM

ಬೆಂಗಳೂರು, ಏ. 17: ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ಚೈತ್ರ ಮಾಸೆ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಕೆಲವು ವಿಚಾರದಲ್ಲಿ ನಿಮಗೆ ನಷ್ಟ ಉಂಟಾಗಬಹುದು. ಆದೇ ರೀತಿ ಅತೀ ಹೆಚ್ಚಿನ ಭಾವುಕತೆಯೂ ನಿಮ್ಮಲ್ಲಿ ಇರಲಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು ಧನಾವಾಗಲಿದೆ. ಮಿತ್ರತ್ವದಲ್ಲಿ ಖುಷಿ ಸಿಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಅದೇ ರೀತಿ ಇಂದು ನಿಮ್ಮ ಪ್ರತಿಷ್ಠೆ ಜಾಸ್ತಿಯಾಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆದರೂ ಕೆಲವೊಂದು ವಿಚಾರದಲ್ಲಿ ನಿಮಗೆ ಅದೃಷ್ಟ ನಿಮ್ಮದಾಗಲಿದೆ. ಹಿಂದಿನ ಕೆಲವು ಸಮಸ್ಯೆಗೆ ಪರಿಹಾರ ಸಿಗುವ ದಿನವಾಗಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ದಾಂಪತ್ಯ ಹಾಗೂ ಪ್ರೇಮ ಪ್ರಕರಣದಲ್ಲಿ ನೋವುಂಟಾಗಬಹುದು. ನಿಮ್ಮ ಪ್ರೀತಿ ಪಾತ್ರರಿಂದಲೇ ಬೇಸರ ಆಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ಇದ್ದು ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ.

ತುಳಸಿ ಕಟ್ಟೆಯ ಬಳಿ ಈ ಗಿಡಗಳನ್ನು ನೆಡಿ; ಹಣದ ಸಮಸ್ಯೆ ನಿಮ್ಮ ಬಳಿ ಸುಳಿಯುವುದೂ ಇಲ್ಲ

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇವತ್ತು ನಿಮ್ಮ ಆತ್ಮವಿಶ್ವಾಸ ತುಂಬ ಚೆನ್ನಾಗಿರುತ್ತದೆ. ಯಾರ ಅಡೆತಡೆಗಳು ನಿಮಗೆ ಇರುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ವ್ಯವಹಾರದಲ್ಲಿ ಯೋಚಿಸಿ ಕೆಲಸ ಮಾಡುವುದು ಒಳ್ಳೆಯದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ನೀವು ಯೋಚನೆ ಮಾಡಬೇಕಾಗುತ್ತದೆ. ಅದೇ ರೀತಿ ಮನೆಯ ಜವಾಬ್ದಾರಿಯನ್ನು ನೀವು ಹೊರಬೇಕಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗಲಿದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ‌.

ಕುಂಭರಾಶಿ: ಈ ರಾಶಿಯವರಿಗೆ ಸಂಸಾರದ ವಿಚಾರವಾಗಿ ಜವಾಬ್ದಾರಿ ವಹಿಸಬೇಕಾಗುತ್ತದೆ. ಅದೇ ರೀತಿ ಹಣಕಾಸಿನ ವ್ಯವಹಾರ ಬಗ್ಗೆಯೂ ಹೆಚ್ಚಿನ ಯೋಚನೆ ಮಾಡಬೇಕಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ನೆಮ್ಮದಿ ಇರುತ್ತದೆ.‌ ಎಲ್ಲ ಕೆಲಸ ಕಾರ್ಯದಲ್ಲೂ ಜಯ ಪ್ರಾಪ್ತಿಯಾಗುತ್ತದೆ.