ದಿನ ಭವಿಷ್ಯ, ಫೆಬ್ರವರಿ 26, 2026: ಬುಧ ವಕ್ರಿಯಿಂದ ಈ ರಾಶಿಗೆ ಇಂದು ದಾಂಪತ್ಯದಲ್ಲಿ ಕಲಹ!
Horoscope Today February 26: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಶುಕ್ಷ ಪಕ್ಷದ, ದಶಮಿ ತಿಥಿ, ಮೃಗಶಿರ ನಕ್ಷತ್ರದ ಫೆಬ್ರವರಿ 26ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೃಗಶಿರ ನಕ್ಷತ್ರ ಇದ್ದು ಬುಧ ವಕ್ರಿ ಕೂಡ ಆಗಿದ್ದಾನೆ. ಹೀಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂದು ಮೇಷ ರಾಶಿಯವರಿಗೆ ಕಾರ್ಯಕ್ಷೇತ್ರದ ಗೊಂದಲ ಗಳು ಮರುಕಳಿಸಬಹುದು. ಅದೇ ರೀತಿ ಮಾತುಕತೆಯಲ್ಲಿ ವ್ಯತ್ಯಾಸ ಉಂಟಾಗಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅದೃಷ್ಟ ಪರೀಕ್ಷೆ ಮುಂದುವರಿಯಬಹುದು. ಕಾರ್ಯಕ್ಷೇತ್ರದ ಜವಾಬ್ದಾರಿ ಬಗ್ಗೆ ಹಾಗೂ ತಂದೆಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅದೃಷ್ಟ ಪರೀಕ್ಷೆ ನಡೆಯುತ್ತಿರುವ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಬೆಂಬಲ ಸಿಗಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಪಾರ್ಟ್ನರ್ಸ್ ಶಿಪ್ ವ್ಯವಹಾರ ಹಾಗೂ ಮಿತ್ರತ್ವದಲ್ಲಿ ಕಲಹ ಉಂಟಾಗಬಹುದು. ಜಾಗೃತರಾಗಿ ನಿರ್ಧಾರ ತೆಗೆದುಕೊಳ್ಳಬೇಕು.
Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಜಯ ಉಂಟಾಗಿ ಮನಸ್ಸಿಗೆ ತೃಪ್ತಿ ತರಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಂದರೆಯಾಗಬಹುದು. ಬುದ್ದಿವಂತಿಕೆಯಿಂದ ನಿರ್ಧಾರ ಕೈಗೊಳ್ಳಬೇಕು. ಪ್ರೇಮ, ಪ್ರೀತಿಯಲ್ಲಿ ಗೊಂದಲ ಉಂಟಾಗಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಪ್ರೇಮ ಪ್ರೀತಿ ವಿಚಾರದಲ್ಲಿ ನೆಮ್ಮದಿ. ಖುಷಿಯಾಗಿ ದಿನವನ್ನು ಕಳೆಯುತ್ತೀರಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸಂಸಾರದ ವಿಚಾರದಲ್ಲಿ ನೆಮ್ಮದಿ ಇತ್ತು. ಈಗ ಮತ್ತೆ ಕಲಹ ಉಂಟಾಗುವ ಸಾಧ್ಯತೆ ಇದೆ. ಸಣ್ಣ ಪುಟ್ಟದಾದ ತೊಂದರೆಗಳು ಇಂದು ಬರಬಹುದು.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮ ದಿನವಾಗಿದೆ. ಕುಟುಂಬದ ಜೊತೆ ಖುಷಿಯಾಗಿ ದಿನ ಕಳೆಯುತ್ತೀರಿ
ಮಕರ ರಾಶಿ: ಮಕರ ರಾಶಿಯವರಿಗೆ ಮನೆಯಲ್ಲಿ ಇದ್ದ ನೆಮ್ಮದಿ ಹದಗೆಡಬಹುದು. ಆದರೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ
ಕುಂಭರಾಶಿ: ಈ ರಾಶಿಯವರಿಗೆ ನಿಮ್ಮ ವ್ಯಕ್ತಿತ್ವ ದಲ್ಲಿ ಇದ್ದ ಟೀಕೆಗಳು ಬಗೆಹರಿಯಬಹುದು. ಉತ್ತಮ ಬೆಂಬಲ ಇತರರಿಂದ ಪಡೆಯಬಹುದು.
ಮೀನ ರಾಶಿ: ಮೀನ ರಾಶಿಗೆ ಇಂದು ಮನಸ್ಸಿನ ಗೊಂದಲ ನಿವಾರಣೆಯಾಗಬಹುದು. ಮಿತ್ರರಿಂದ ಗೊಂದಲ ಉಂಟಾಗಿದ್ದರೂ ಸರಿಯಾದ ಸಂತ್ವಾನ ನಿಮಗೆ ಸಿಗಬಹುದು.