Astro Tips: ಭಾನುವಾರ ಸೂರ್ಯಾರಾಧನೆ ಮಾಡಿದರೆ ಉದ್ಯೋಗದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ; ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ
ಭಾನುವಾರ ಸೂರ್ಯದೇವನ ಆರಾಧನೆಗೆ ಅತ್ಯಂತ ಶುಭಕರ ದಿನವೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಸೂರ್ಯೋದಯದ ವೇಳೆ ಅರ್ಘ್ಯ ಅರ್ಪಿಸಿ ವಿಶೇಷ ಮಂತ್ರಗಳನ್ನು ಜಪಿಸಿದರೆ ಆತ್ಮವಿಶ್ವಾಸ, ಆರೋಗ್ಯ, ಗೌರವ ಹಾಗೂ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಉಪವಾಸ, ದಾನಧರ್ಮ, ಕೇಸರಿ ಬಟ್ಟೆ ಧಾರಣೆ ಹಾಗೂ ಸೂರ್ಯ ಮಂತ್ರ ಜಪದ ಮಹತ್ವದ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.
ಸೂರ್ಯಾರಾಧನೆ -
ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಸೂರ್ಯದೇವ (Surya Dev) ಅತ್ಯಂತ ಪ್ರಭಾವಶಾಲಿ ಗ್ರಹದೇವತೆಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಆತ್ಮವಿಶ್ವಾಸ, ಆರೋಗ್ಯ, ನಾಯಕತ್ವ, ಗೌರವ ಮತ್ತು ಜೀವನದ ಪ್ರಗತಿಗೆ ಸೂರ್ಯನ ಆಶೀರ್ವಾದ ಮುಖ್ಯವೆಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಭಾನುವಾರವನ್ನು ಸೂರ್ಯದೇವನ ಆರಾಧನೆಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತಿಭಾವದಿಂದ ಸೂರ್ಯದೇವನ ಪೂಜೆ, ಅರ್ಘ್ಯ ಪ್ರದಾನ ಮತ್ತು ಮಂತ್ರ ಜಪ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ವಿಶೇಷವಾಗಿ ಉದ್ಯೋಗ, ವ್ಯವಹಾರ ಮತ್ತು ಸಮಾಜದಲ್ಲಿ ಮಾನ-ಗೌರವ ಹೆಚ್ಚಲು ಭಾನುವಾರದ ಆರಾಧನೆ ಫಲಪ್ರದವೆಂದು ಹೇಳಲಾಗುತ್ತದೆ. ಸೂರ್ಯದೇವನ ಕೃಪೆ ಪಡೆಯಲು ಕೆಲವು ವಿಶೇಷ ನಿಯಮಗಳನ್ನು ಪಾಲಿಸುವುದರ ಜೊತೆಗೆ ಶಕ್ತಿಯುತ ಮಂತ್ರಗಳನ್ನು ಪಠಿಸುವುದು ಬಹಳ ಶುಭಕರವೆಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದ್ದು, ಶಾಸ್ತ್ರದಲ್ಲಿ(Astro Tips) ನೀಡಿದ ಸಲಹೆಗಳೇನು..? ಯಾವ ಮಂತ್ರಗಳನ್ನು ಪಠಿಸಬೇಕು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ..
ಭಾನುವಾರದಂದು ಸೂರ್ಯದೇವನ ಆರಾಧನೆ ಹೇಗೆ ಮಾಡಬೇಕು?
ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಭ್ರವಾದ ಅಥವಾ ಕೇಸರಿ ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಬಳಿಕ ತಾಮ್ರದ ಪಾತ್ರೆಯಲ್ಲಿ ನೀರು, ಕೆಂಪು ಹೂವು, ಅಕ್ಕಿ ಮತ್ತು ಸ್ವಲ್ಪ ಬೆಲ್ಲ ಹಾಕಿ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಬೇಕು. ಅರ್ಘ್ಯ ಅರ್ಪಿಸುವ ವೇಳೆ ಸೂರ್ಯ ಮಂತ್ರಗಳನ್ನು ಜಪಿಸಿದರೆ ವಿಶೇಷ ಫಲ ದೊರೆಯುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ? ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ
ಭಾನುವಾರದಂದು ಮಾಡಬೇಕಾದ ಶುಭ ಕಾರ್ಯಗಳು
ಉಪವಾಸ ಮಾಡುವುದು
ಸಾಧ್ಯವಾದರೆ ಭಾನುವಾರದಂದು ಉಪವಾಸ ಮಾಡುವುದು ಶುಭಕರ. ಇದು ಮನಸ್ಸಿನ ಶುದ್ಧತೆಯನ್ನು ಹೆಚ್ಚಿಸಿ ಸೂರ್ಯದೇವನ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಕೇಸರಿ ಅಥವಾ ಕೆಂಪು ಬಣ್ಣದ ಬಟ್ಟೆ ಧರಿಸಿ
ಭಾನುವಾರ ಕೇಸರಿ ಅಥವಾ ಕೆಂಪು ಬಣ್ಣ ಸೂರ್ಯದೇವನಿಗೆ ಪ್ರಿಯವಾದ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಆತ್ಮಬಲ ಮತ್ತು ಗೌರವ ಹೆಚ್ಚುತ್ತದೆ ಎನ್ನಲಾಗುತ್ತದೆ.
ದಾನ ಧರ್ಮ ಮಾಡುವುದು
ಭಾನುವಾರದಂದು ಬೆಲ್ಲ, ಗೋಧಿ, ತಾಮ್ರ, ಕೆಂಪು ಹೂವು ಅಥವಾ ಕೆಂಪು ಬಟ್ಟೆ ದಾನ ಮಾಡುವುದು ಶುಭಕರ. ದಾನ ಮಾಡುವುದರಿಂದ ಸೂರ್ಯದೋಷ ಕಡಿಮೆಯಾಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ ಎಂಬ ನಂಬಿಕೆ ಇದೆ.
ಏಕಮುಖಿ ರುದ್ರಾಕ್ಷಿ ಧಾರಣೆ
ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಸೂರ್ಯದೇವನ ಅನುಗ್ರಹ ಲಭಿಸಿ ಆತ್ಮವಿಶ್ವಾಸ ಹಾಗೂ ಮಾನಸಿಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಮಾಣಿಕ್ಯ ರತ್ನ ಧರಿಸುವುದು
ಜಾತಕದಲ್ಲಿ ಸೂರ್ಯ ದುರ್ಬಲವಾಗಿದ್ದರೆ ವ್ಯಕ್ತಿಗೆ ಪದೇಪದೇ ಸಮಸ್ಯೆಗಳು ಎದುರಾಗಬಹುದು. ಇಂತಹವರು ಜ್ಯೋತಿಷಿಗಳ ಸಲಹೆಯಂತೆ ಮಾಣಿಕ್ಯ ರತ್ನ ಧರಿಸಿದರೆ ಸೂರ್ಯಬಲ ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
Astro Tips: ಮದುವೆ ವಿಳಂಬವ ಆಗುತ್ತಿದೆಯೇ; ಹಾಗಾದ್ರೆ ಗುರುವಾರ ಈ ಒಂದು ವಸ್ತುವನ್ನು ದಾನ ಮಾಡಿ
ಸೂರ್ಯದೇವನ ಶಕ್ತಿಯುತ ಮಂತ್ರಗಳು
ಸೂರ್ಯ ಬೀಜ ಮಂತ್ರ
ಓಂ ಘೃಣಿಂ ಸೂರ್ಯಃ ಆದಿತ್ಯಃ
ಈ ಮಂತ್ರವನ್ನು ಪ್ರತಿದಿನ 11 ಅಥವಾ 108 ಬಾರಿ ಜಪಿಸುವುದರಿಂದ ಮನಶಾಂತಿ ಮತ್ತು ಆತ್ಮಬಲ ಹೆಚ್ಚುತ್ತದೆ ಎಂದು ನಂಬಲಾಗಿದೆ.
ಮನೋವಾಂಛಿತ ಫಲಪ್ರದ ಮಂತ್ರ
ಓಂ ಹ್ರೀಂ ಹ್ರೀಂ ಸೂರ್ಯಾಯ ಸಹಸ್ರಕಿರಣರಾಯ ಮನೋವಾಂಚಿತ ಫಲಮ್ ದೇಹಿ ದೇಹಿ ಸ್ವಾಹಾ
ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.
ಸೂರ್ಯ ಕೃಪಾ ಮಂತ್ರ
ಓಂ ಏಹಿ ಸೂರ್ಯ ಸಹಸ್ತ್ರಾಂಶೋಂ ತೇಜೋ ರಾಶೇ ಜಗತ್ಪತೇ, ಅನುಕಂಪಯೇಮಾಂ ಭಕ್ತ್ಯಾ, ಗೃಹಣಾಘೃಯ ದಿವಾಕರಃ
ಈ ಮಂತ್ರವು ಸೂರ್ಯದೇವನ ಕೃಪೆ ಮತ್ತು ಜೀವನದಲ್ಲಿ ಬೆಳವಣಿಗೆಗಾಗಿ ಪಠಿಸಲಾಗುತ್ತದೆ.
ಸೂರ್ಯ ಆದಿತ್ಯ ಮಂತ್ರ
ಓಂ ಹ್ರೀಂ ಘೃಣಿಃ ಸೂರ್ಯ ಅದಿತ್ಯಃ ಕ್ಲೀಂ ಓಂ
ಈ ಮಂತ್ರವನ್ನು ಜಪಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎನ್ನಲಾಗುತ್ತದೆ.
ಸೂರ್ಯ ನಮಸ್ಕಾರ ಮಂತ್ರ
ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ
ಸರಳ ಸೂರ್ಯ ಮಂತ್ರ
ಓಂ ಸೂರ್ಯಾಯ ನಮಃ
ಸೂರ್ಯ ಅನುಗ್ರಹ ಮಂತ್ರ
ಓಂ ಘೃಣಿ ಸೂರ್ಯಾಯ ನಮಃ
ಸೂರ್ಯಾರಾಧನೆಯಿಂದ ದೊರೆಯುವ ಪ್ರಯೋಜನಗಳು
ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ
ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಬಹುದು
ಆರೋಗ್ಯ ಮತ್ತು ಉತ್ಸಾಹ ವೃದ್ಧಿಯಾಗುತ್ತದೆ
ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ
ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರಗತಿ ಸಾಧ್ಯವಾಗುತ್ತದೆ
ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಭಕ್ತಿಭಾವದಿಂದ ಭಾನುವಾರದಂದು ಸೂರ್ಯದೇವನ ಆರಾಧನೆ ಮಾಡಿದರೆ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸಕಾರಾತ್ಮಕತೆ ಮೂಡುತ್ತದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.