ದಿನ ಭವಿಷ್ಯ, ಆಗಸ್ಟ್ 4, 2026: ಇಂದು ಸಾಲದಿಂದ ಮುಕ್ತಿ ಹೊಂದಲಿದ್ದೀರಿ; ಬಾಕಿ ಕೆಲಸಗಳೆಲ್ಲ ಪೂರ್ಣ
Horoscope Today August 4th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಷಷ್ಠಿ ತಿಥಿ, ರೇವತಿ ನಕ್ಷತ್ರದ, ಆಗಸ್ಟ್ 4ನೇ ತಾರೀಕಿನ ಈ ದಿನ ಗುರು ಕರ್ಕಾಟಕದಲ್ಲಿ ಉಚ್ಚನಾಗಿದ್ದಾನೆ. ಮನೆ ಹಾಗೂ ಶಿಕ್ಷಣ ಸಂಪತ್ತಿಗೆ ಇಂದು ಪ್ರಾಪ್ತ ಕಾಲವಾಗಿದೆ. ಉಳಿದ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಅವಕಾಶಗಳು ನಿಮಗೆ ಒಲಿದು ಬರಲಿದ್ದು, ನಿಮ್ಮ ನಿರ್ಧಾರಗಳಿಗೆ ಮೆಚ್ಚುಗೆ ಸಿಗಬಹುದು. ಹಿರಿಯರ ಆಶೀರ್ವಾದ ಇಂದು ಮುಖ್ಯ.
ವೃಷಭ ರಾಶಿ: ಈ ರಾಶಿಯವರ ಬಾಕಿ ಉಳಿದ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ. ಆದರೆ ಹೂಡಿಕೆ ಮಾಡುವ ಮುನ್ನ ಬಹಳಷ್ಟು ಭಾriರೀ ನೀವು ಯೋಚನೆ ಮಾಡಬೇಕಾಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಇಂದು ಪ್ರಗತಿ ಕಾಣುತ್ತೀರಿ. ಸಂಗಾತಿಯೊಂದಿಗೆ ಇಂದು ನೆಮ್ಮದಿಯಿಂದ ದಿನ ಕಳೆಯುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಸಾಲದಿಂದ ಮುಕ್ತಿ ಸಿಗಬಹುದು. ಗುರು ಬಲದಿಂದ ಇಂದು ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಪ್ರೀತಿ ಹಾಗೂ ಮಕ್ಕಳ ವಿಚಾರದಲ್ಲಿ ಮಿಶ್ರಫಲ ಕಂಡುಬರಲಿದೆ. ಆದರೆ ಇಂದು ಹೂಡಿಕೆಯಲ್ಲಿ ಎಚ್ಚರ ವಹಿಸುವುದು ಅಗತ್ಯ.
ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮನೆ, ವಾಹನ ಹಾಗೂ ಆಸ್ತಿ ಖರೀದಿ ವಿಚಾರದಲ್ಲಿ ಲಾಭವಾಗುತ್ತದೆ. ಆದರೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಹೊಸ ಪರಿಚಯದಿಂದ ಒಳಿತಾಗಲಿದೆ. ಆದರೆ ನಿಮ್ಮ ಕೋಪ, ಸಿಟ್ಟನ್ನು ನಿಯಂತ್ರಿಸಬೇಕಾಗುತ್ತದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸಂತೋಷ ಇರಲಿದ್ದು, ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ಇಂದು ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಜನಪ್ರಿಯತೆ ಕೂಡ ಹೆಚ್ಚಾಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಖರ್ಚು ಹೆಚ್ಚಾಗಬಹುದು. ಆನ್‌ಲೈನ್ ಕೆಲಸದಲ್ಲಿ ಇಂದು ಅವಕಾಶಗಳು ಹೆಚ್ಚಿ ಯಶಸ್ಸು ಕಾಣುತ್ತೀರಿ.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದಾಯ ಮತ್ತು ಸ್ನೇಹಿತರಿಂದ ನಿಮಗೆ ಲಾಭ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಕೆಲಸದಲ್ಲಿ ಪ್ರಗತಿ ಮತ್ತು ಗೌರವ ಹೆಚ್ಚಾಗುತ್ತದೆ. ಪ್ರಮೋಷನ್ ಸಿಗುವ ಸಾಧ್ಯತೆ ಇದೆ.