ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಅದೃಷ್ಟ, ಸಂಪತ್ತು, ಸಮೃದ್ಧಿಗಾಗಿ ಬಳಸಿ ದಾಲ್ಚಿನಿ

ಪ್ರತಿಯೊಬ್ಬರ ಮನೆಯ ಅಡುಗೆ ಕೋಣೆಯಲ್ಲಿರುವ ಕೆಲವೊಂದು ವಸ್ತುಗಳು (Vastu Tips) ಮನೆ ಮಂದಿಯ ಅದೃಷ್ಟವನ್ನೇ ಬದಲಾಯಿಸುತ್ತದೆ. ಮನೆಯ ಸುಖ, ಶಾಂತಿ, ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದು ವಸ್ತುವೆಂದರೆ ದಾಲ್ಚಿನಿ. ಇದನ್ನು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ, ಯಾವ ರೀತಿ ಅದನ್ನು ಮನೆಯಲ್ಲಿ ಬಳಸಿಕೊಳ್ಳಬೇಕು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಅದೃಷ್ಟವನ್ನೇ ಬದಲಾಯಿಸುವ ಅಡುಗೆ ಮನೆಯಲ್ಲಿರುವ ವಸ್ತು ಯಾವುದು ಗೊತ್ತೇ ?

ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲೂ ದಾಲ್ಚಿನಿ ( vastu about cinnamon) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಅಡುಗೆಗೆ ಬಳಸಲಾಗುವ ಈ ಮಸಾಲೆ ಸಾಮಗ್ರಿಯಿಂದ ಮನೆಯಲ್ಲಿರುವ ನಕಾರಾತ್ಮಕತೆಯನ್ನೂ ದೂರ ಮಾಡಬಹುದು. ಅಡುಗೆ ಮನೆಗಳಲ್ಲಿ ಬಳಸುವ ದಾಲ್ಚಿನಿಯಿಂದ ಹೇಗೆ ಮನೆಯ ವಾಸ್ತುದೋಷಗಳನ್ನು (Vastu tips) ಸರಿಪಡಿಸಬಹುದು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ (Vastu shastra) ಹೇಳಲಾಗಿದೆ. ದಾಲ್ಚಿನಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ವಿಧಾನದ ಕುರಿತು ವಾಸ್ತು ತಜ್ಞರಾದ ಪಂಡಿತ್ ಜನ್ಮೇಶ್ ದ್ವಿವೇದಿ ಜಿ ಅವರು ಹೇಳುವುದು ಹೀಗೆ..

ದಾಲ್ಚಿನಿಯನ್ನು ಹೆಚ್ಚಾಗಿ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಇದರ ಪುಡಿ ವಾಸ್ತು ಪ್ರಕಾರ ಸಾಕಷ್ಟು ಪ್ರಯೋಜನಕಾರಿಯಾಗಿದೆ. ದಾಲ್ಚಿನಿಯು ಮನೆಯ ಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಇದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡುತ್ತದೆ.

ದಾಲ್ಚಿನಿಯ ಪರಿಮಳವು ತುಂಬಾ ಪ್ರಬಲವಾಗಿರುವುದರಿಂದ ಇದು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ. ಇದರ ಜೊತೆಗೆ ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯನ್ನು ಮನೆಗೆ ಆಹ್ವಾನಿಸುತ್ತದೆ. ಇದು ಮನಸ್ಸನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಇದು ಮನೆ ಮಂದಿಯ ಮನಸ್ಸನ್ನು ಸಹ ಶುದ್ಧವಾಗಿರಿಸುತ್ತದೆ.

ಹೇಗೆ ಬಳಸುವುದು?

ದಾಲ್ಚಿನಿ ಪುಡಿಯನ್ನು ದೀಪದಲ್ಲಿ ಹಾಕಿ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕ ವಾತಾವರಣ ನೆಲೆಸುವಂತೆ ಮಾಡುತ್ತದೆ.

ಆರ್ಥಿಕ ಲಾಭಕ್ಕಾಗಿ ಒಂದು ಸಣ್ಣ ಬಾಟಲಿಯಲ್ಲಿ ದಾಲ್ಚಿನಿ ಪುಡಿಯನ್ನು ಇರಿಸಿ. ಅದರಲ್ಲಿ ಒಂದು ನಾಣ್ಯವನ್ನು ಹಾಕಿ ತಿಜೋರಿಯಲ್ಲಿ ಇರಿಸಿ. ಇದು ಜೀವನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಮಾಡುತ್ತದೆ.

ಇದು ತಿಳಿದಿರಲಿ

ದಾಲ್ಚಿನ್ನಿ ಪುಡಿಯನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದಿರಬೇಕು. ಇನ್ನೊಬ್ಬರ ಬಳಿ ಸಾಲವಾಗಿ ಪಡೆಯಬಾರದ ವಸ್ತುಗಳಲ್ಲಿ ದಾಲ್ಚಿನಿ ಕೂಡ ಸೇರಿದೆ. ದಾಲ್ಚಿನಿಯಿಂದ ಮನೆಯ ಏನಾದರೂ ಸಮಸ್ಯೆ ದೂರ ಮಾಡಬೇಕಾದರೆ ಅದನ್ನು ಶನಿವಾರ ಅಥವಾ ಹುಣ್ಣಿಮೆಯ ದಿನದಂದು ಸ್ವಲ್ಪ ನೀರಿಗೆ ದಾಲ್ಚಿನಿ ಪುಡಿಯನ್ನು ಹಾಕಿ ಮನೆಯೊಳಗೆ ಚುಮುಕಿಸಿ.

ಇದನ್ನೂ ಓದಿ: Vastu Tips: ಆರ್ಥಿಕ ತೊಂದರೆ ಉಂಟಾಗದಿರಲು ಈ ವಸ್ತುಗಳನ್ನು ಎಂದಿಗೂ ದಾನ ನೀಡಬೇಡಿ!

ಮುಖ್ಯ ದ್ವಾರದ ಬಳಿ ಸ್ವಚ್ಛಗೊಳಿಸಿದ ಬಳಿಕ ದಾಲ್ಚಿನಿ ನೀರನ್ನು ಚುಮುಕಿಸಿ. ಇದನ್ನು ಬಳಿಕ ಸ್ವಚ್ಛಗೊಳಿಸಬೇಡಿ. ಒಂದು ಬಟ್ಟಲಿನಲ್ಲಿ ಸ್ವಲ್ಪ ದಾಲ್ಚಿನಿ ಪುಡಿಯನ್ನು ಹಾಕಿ ಡ್ರಾಯಿಂಗ್ ರೂಮ್ ನಲ್ಲಿ ಇರಿಸಿ ಅದು ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಯಾರಿಗೂ ದಾಲ್ಚಿನಿಯನ್ನು ದಾನ ಮಾಡಬಾರದು. ಇದು ನಮ್ಮ ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ದಾಲ್ಚಿನಿಯನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಜೀವನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಇದು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ.