Vastu Tips: ಮನೆಯ ಅಂಗಳದಲ್ಲಿ ಚೆಂಡು ಹೂವಿನ ಗಿಡ ನೆಡುವ ಮುನ್ನ ಈ ಸಂಗತಿ ತಿಳಿದಿರಲಿ
ಹಳದಿ ಚೆಂಡು ಹೂ ಉದಯಿಸುವ ಸೂರ್ಯನ ಕಿರಣಗಳನ್ನು ಸಂಕೇತಿಸುತ್ತವೆ. ಕಿತ್ತಳೆ ಹೂ ಸೂರ್ಯಾಸ್ತದ ಸಂಕೇತವೆಂದು ಹೇಳಲಾಗುತ್ತದೆ. ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದ ಹೂ ಎಂಬ ನಂಬಿಕೆ ಇದೆ. ವೇದ ಶಾಸ್ತ್ರಗಳಲ್ಲಿಯೂ ಚೆಂಡು ಹೂವಿನ ಮಹತ್ವವನ್ನು ಉಲ್ಲೇಖಿಸಲಾಗಿದೆ. ಈ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವುದರ ಜತೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 19: ಅಂಗಳದಲ್ಲಿ ಹಸಿರು ಹಾಗೂ ಹೂವಿನ ಗಿಡಗಳಿದ್ದರೆ ಆ ಮನೆ ಸೌಂದರ್ಯ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಜತೆಗೆ ಈ ಹೂವಿನ ಗಿಡಗಳು ಮನೆಯ ವಾತಾವರಣವನ್ನು ಪ್ರಶಾಂತಗೊಳಿಸಲಿದ್ದು, ಮನಸ್ಸನ್ನು ಹಿತವಾಗಿಡುತ್ತದೆ. ಆದ್ದರಿಂದ ಬಹುತೇಕರು ತಮ್ಮ ಮನೆಯಲ್ಲಿ ಹೂವಿನ ಗಿಡಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಇಂತಹ ಹೂವಿನ ಗಿಡಗಳಲ್ಲಿ ಚೆಂಡು ಹೂವು (Marigold Plant) ವಿಶೇಷ ಸ್ಥಾನವನ್ನು ಹೊಂದಿದೆ. ಹಿಂದೂ ಸಂಪ್ರದಾಯದಲ್ಲಿ(Hindu Tradition) ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡು ಹೂವುಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ದೇವತೆಗಳ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ.
ಹಳದಿ ಚೆಂಡು ಹೂ ಉದಯಿಸುವ ಸೂರ್ಯನ ಕಿರಣಗಳನ್ನು ಸಂಕೇತಿಸುತ್ತದೆ. ಕಿತ್ತಳೆ ಬಣ್ಣದ ಹೂ ಸೂರ್ಯಾಸ್ತವನ್ನು ಪ್ರತಿನಿಧಿಸುತ್ತದೆ. ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯ ಹೂವಿದು ಎಂಬ ನಂಬಿಕೆ ಇದೆ. ವೇದ ಶಾಸ್ತ್ರಗಳಲ್ಲಿಯೂ ಚೆಂಡು ಹೂವಿನ ಮಹತ್ವವನ್ನು ಉಲ್ಲೇಖಿಸಲಾಗಿದೆ. ಈ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವುದರ ಜತೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಈ ಹೂವಿನ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಮತ್ತು ಅದರ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ವಾಸ್ತು ಶಾಸ್ತ್ರದಲ್ಲಿ ಚೆಂಡು ಹೂವಿನ ಗಿಡವನ್ನು ನೆಡುವ ದಿಕ್ಕಿಗೆ ವಿಶೇಷ ಮಹತ್ವ ನೀಡಲಾಗಿದ್ದು, ಸರಿಯಾದ ಸ್ಥಳದಲ್ಲಿ ಈ ಗಿಡವನ್ನು ಬೆಳೆಸಿದರೆ ಶುಭ ಫಲಗಳು ದೊರೆಯುತ್ತವೆ. ಆದರೆ ತಪ್ಪಾದ ದಿಕ್ಕಿನಲ್ಲಿ ನೆಟ್ಟರೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು. ವಾಸ್ತು ನಿಯಮಗಳ ಪ್ರಕಾರ ಚೆಂಡು ಹೂವಿನ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡುವುದು ಅತ್ಯಂತ ಉತ್ತಮ. ಇದಲ್ಲದೆ ಪೂರ್ವ ಅಥವಾ ಉತ್ತರ ದಿಕ್ಕುಗಳೂ ಸಹ ಉತ್ತಮವೆಂದು ಹೇಳಲಾಗುತ್ತದೆ. ಈ ರೀತಿಯಾಗಿ ನೆಟ್ಟರೆ ಮನೆಯಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಜತೆಗೆ ಸುತ್ತಮುತ್ತಲಿನ ವಾತಾವರಣವೂ ಶುದ್ಧವಾಗಿರುತ್ತದೆ.
Vದಿಂಬಿಗೆ ತಲೆ ಇಟ್ಟ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕೇ..? ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಅನುಸರಿಸಿ
ಚೆಂಡು ಹೂ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ನೆಚ್ಚಿನ ಹೂವಾಗಿರುವುದರಿಂದ ಈ ಗಿಡವನ್ನು ಮನೆಯಲ್ಲಿ ಇಡುವಾಗ ವಿಶೇಷ ಕಾಳಜಿ ವಹಿಸಬೇಕು. ಗಿಡದ ಎಲೆಗಳು ಅಥವಾ ಹೂವುಗಳು ಒಣಗಿದರೆ ಅವನ್ನು ತಕ್ಷಣವೇ ತೆಗೆದು ಸ್ವಚ್ಛಗೊಳಿಸುವುದು ಅಗತ್ಯ. ಒಣಗಿದ ಅಥವಾ ಸತ್ತ ಗಿಡವನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಗೆ ಅನೇಕ ತೊಂದರೆಗಳು ಎದುರಾಗಬಹುದು. ವಿಶೇಷವಾಗಿ ಈ ಗಿಡವನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ನೆಡಬಾರದು. ಪಶ್ಚಿಮ ದಿಕ್ಕು ಸೂರ್ಯಾಸ್ತದ ದಿಕ್ಕಾಗಿರುವುದರಿಂದ ಈ ದಿಕ್ಕಿನಲ್ಲಿ ಗಿಡವಿದ್ದರೆ ಸಂಪತ್ತು ಕೈ ತಪ್ಪುವ ಸಾಧ್ಯತೆ ಇದೆ ಎಂಬ ನಂಬಿಕೆ ಇದೆ.
ಇನ್ನು ಚೆಂದು ಹೂವಿನ ಗಿಡವನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಅದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಹೂವಿನ ಸುವಾಸನೆ ಮನೆಗಳಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ವಾಸ್ತು ನಿಯಮಗಳನ್ನು ಪಾಲಿಸಿ ಈ ಗಿಡವನ್ನು ಬೆಳೆಸಿದರೆ ಲಕ್ಷ್ಮೀ–ವಿಷ್ಣು ದೇವಿಯ ಅನುಗ್ರಹ ಲಭಿಸಿ, ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸುತ್ತದೆ. ಈ ಹೂವುಗಳನ್ನು ಪೂಜೆಗೆ ಬಳಸುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಜತೆಗೆ ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿ ಜೀವನದಲ್ಲಿ ಪ್ರಗತಿ ಕಾಣಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಈ ಶುಭ ಸಸ್ಯವನ್ನು ಮನೆಯ ಮುಖ್ಯ ಬಾಗಿಲಿನ ಬಳಿ ನೆಡುವುದನ್ನು ಅತ್ಯಂತ ಮಂಗಳವೆಂದು ಹೇಳಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು.