ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವರ್ಷ ಭವಿಷ್ಯ: ಕುಂಭ ರಾಶಿಗೆ ಈ ವರ್ಷ ಗ್ರಹಗತಿಗಳ ಬದಲಾವಣೆ ಹೇಗಿರಲಿದೆ?

ಈ ವರ್ಷ ಪರಾಭವ ಸಂವತ್ಸರ ಆರಂಭವಾಗಿದೆ. ಈ ವರ್ಷದ ಗ್ರಹಗತಿಗಳ ಚಲನೆಯೂ ಜೀವನದ ವಿವಿಧ ಆಯಾಮಗಳಲ್ಲಿ ಬದಲಾವಣೆಯನ್ನು ತರುತ್ತಿದೆ. ಕುಂಭ ರಾಶಿಗೆ ಈ ಸಂವತ್ಸರ ಹೇಗಿರಲಿದೆ? ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ? ಈ ವರ್ಷ ಒಳಿತಾಗಲಿದೆಯೇ? ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Profile
Pushpa Kumari Mar 28, 2026 4:49 PM

ಬೆಂಗಳೂರು,ಮಾ.28: ಕುಂಭ ರಾಶಿಗೆ ಈ ವರ್ಷ ಶನಿಯ ಪ್ರಭಾವ ಹೆಚ್ಚಿದೆ. ಹೀಗಾಗಿ ಆಸ್ತಿ ವಿಚಾರವಾಗಿ ಮನಸ್ತಾಪ, ಕುಟುಂಬದಲ್ಲಿ ಕಲಹ ಇತ್ಯಾದಿ ಸಮಸ್ಯೆಗಳು ಸೃಷ್ಟಿ ಯಾಗಬಹುದು. ಎಲ್ಲ ಕೆಲಸ ಕಾರ್ಯದಲ್ಲಿ ಶತ್ರುಗಳ ತೊಂದರೆ ಕೂಡ ಇರಲಿದ್ದು ಸಹೋದ್ಯೋಗಿಗಳೊಂದಿಗೆ ಕೆಲವು ವಿಚಾರದಲ್ಲಿ ಮನಸ್ಸಾಪ, ಗೊಂದಲ ಉಂಟಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಂಡರೆ ಒಳಿತು. ಆದರೆ ಗುರು ಗ್ರಹದಿಂದಾಗಿ ನೀವು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.