ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಏಪ್ರಿಲ್ 5, 2026: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ

Horoscope Today April 5: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ತೃತೀಯ ತಿಥಿ, ವಿಶಾಖ ನಕ್ಷತ್ರದ ಏಪ್ರಿಲ್ 5ನೇ ತಾರೀಕಿನ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಯಾವ ರಾಶಿಗೆಲ್ಲ ಇಂದು ಉತ್ತಮ ದಿನ?

ಇಂಟರ್‌ನೆಟ್ ಚಿತ್ರ -

Profile
Pushpa Kumari Apr 5, 2026 7:00 AM

ಬೆಂಗಳೂರು, ಏ. 5: ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸೆ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಬೇರೆಯವರು ಕೂಡ ನಿಮ್ಮ ಸಲಹೆಯನ್ನು ಇಂದು ಪಾಲಿಸುತ್ತಾರೆ. ಅದೇ ರೀತಿ ದಾಂಪತ್ಯದಲ್ಲಿ ನೆಮ್ಮದಿ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆದರೆ ಸಾಮಾಜಿಕ ಚಟುವಟಿಕೆ ಹಾಗೂ ಮಿತ್ರತ್ವದಲ್ಲಿ ಲಾಭ ಉಂಟಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಕಷ್ಟದ ದಿನವಾಗಲಿದೆ‌. ಹಣಕಾಸಿನ ವಿಚಾರ ಹಾಗೂ ವೈಯಕ್ತಿಕ ವಿಚಾರದಲ್ಲಿ ಜಾಗರೂಕತೆ ಅಗತ್ಯ.

ಕಟಕ ರಾಶಿ: ಕಟಕ ರಾಶಿವರಿಗೆ ಕಷ್ಟದ ದಿನವಾಗಲಿದೆ‌. ತಾಯಿಯ ಆರೋಗ್ಯ, ಕೋರ್ಟ್ ವಿಚಾರ, ಟ್ಯಾಕ್ಸ್ ವ್ಯವಹಾರ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ‌. ಮನಸ್ಸಿಗೆ ನೆಮ್ಮದಿ ಇದ್ದು ಸಹೋದರ- ಸಹೋದರಿಯರ ಜತೆ ನೆಮ್ಮದಿಯಿಂದ ದಿನ ಕಳೆಯುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ.‌ ಆದರೆ ಸಂಸಾರದಲ್ಲಿ ನೀವು ನೆಮ್ಮದಿ ಕಾಣುವಂತಹ ದಿನವಾಗಲಿದೆ. ಹಾಗಾಗಿ ಮನೆಯವರ ಜತೆಗೆ ಹೆಚ್ಚಿನ ಸಮಯವನ್ನು ನೀವು ಕಳೆಯಲಿದ್ದೀರಿ.

ಮನೆಯ ಈ ಐದು ಸ್ಥಳಗಳಲ್ಲಿ ನವಿಲುಗರಿ ಇಟ್ಟರೆ ಐಶ್ವರ್ಯ ಹೆಚ್ಚಾಗೋದು ಗ್ಯಾರಂಟಿ!

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದ ಮನಸ್ಸಿನ ನೋವೆಲ್ಲ ಇಂದು ಮಾಯವಾಗುತ್ತದೆ. ಮುಂದಿನ ಕೆಲಸಗಳಿಗೆ ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಮಿತ್ರರು ಕೂಡ ಯಾವುದೇ ಸಹಕಾರ ನಿಮಗೆ ನೀಡುವುದಿಲ್ಲ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಧನ ಲಾಭ ಉಂಟಾಗಲಿದ್ದು, ಇಷ್ಟಾರ್ಥ ಸಿದ್ಧಿಯಾಗುತ್ತದೆ. ಮಿತ್ರರಿಂದ ಕೂಡ ಖುಷಿ ಸಿಗುವ ದಿನ ನಿಮ್ಮದಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲ ಕಡೆಯಲ್ಲೂ ನಿಮಗೆ ಲಾಭದಾಯಕ ದಿನ ಆಗಲಿದೆ.

ಕುಂಭರಾಶಿ: ಈ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ದಿನದಲ್ಲಿ ಇದ್ದಂತಹ ನೋವೆಲ್ಲ ಪರಿಹಾರವಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯ ನಿರ್ಧಾರ ಬೇಡ. ಪ್ರೀತಿ ಪಾತ್ರರಿಂದ ಕೂಡ ಇರಿಸು-ಮುರಿಸು ಆಗಲಿದೆ.