ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಮೆರಿಕದಲ್ಲೊಬ್ಬ ತುಘಲಕ್!

ಇದು ಅಮೆರಿಕನ್ನರ ಪುಣ್ಯವೋ, ಅಥವಾ ಜಗತ್ತಿನ ಮಿಕ್ಕ ರಾಷ್ಟ್ರಗಳ ಕರ್ಮವೋ ಎಂಬುದನ್ನು ಭಗವಂತನೇ ಹೇಳಬೇಕು. ಕೆಲ ತಿಂಗಳ ಹಿಂದೆ, ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಬಂದು ಬೀಳುವ ವೈವಿಧ್ಯಮಯ ಸರಕು-ಸಾಮಗ್ರಿಗಳ ಮೇಲೆ ಅತಿರೇಕದ ಸುಂಕ ಹೇರುವ ನಿಲುವನ್ನು ಘೋಷಿ ಸುವ ಮೂಲಕ ತಮ್ಮ ‘ರಾಜತಾಂತ್ರಿಕ ಚೇಷ್ಟೆ’ಗೆ ಚಾಲನೆ ನೀಡಿದ್ದ ಟ್ರಂಪ್, ಭಾರತದ ವಿಷಯದಲ್ಲಿ ಅದ್ಯಾಕೋ ಸುಮ್ಮನಿದ್ದರು.

ಅಮೆರಿಕದಲ್ಲೊಬ್ಬ ತುಘಲಕ್!

Ashok Nayak Ashok Nayak Aug 1, 2025 6:49 AM

ಹುಚ್ಚು ದರ್ಬಾರಿಗೆ ಹೆಸರಾಗಿದ್ದ ಮುಹಮದ್-ಬಿನ್-ತುಘಲಕ್ ರಂಥವರು ಭಾರತದಲ್ಲಿ ಮಾತ್ರ ಇದ್ದುದು ಎಂಬುದು ಇದುವರೆಗೂ ಬಹುತೇಕರ ಗ್ರಹಿಕೆಯಾಗಿತ್ತು. ಆದರೆ ತುಘಲಕ್‌ನ ಮತ್ತೊಂದು ಅವತಾರವೇ ಎನ್ನಬಹುದಾದ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರ ಗದ್ದುಗೆಯಲ್ಲಿ ಮತ್ತೊಮ್ಮೆ ರಾರಾಜಿಸುತ್ತಿದ್ದಾರಲ್ಲಾ..!

ಇದು ಅಮೆರಿಕನ್ನರ ಪುಣ್ಯವೋ, ಅಥವಾ ಜಗತ್ತಿನ ಮಿಕ್ಕ ರಾಷ್ಟ್ರಗಳ ಕರ್ಮವೋ ಎಂಬುದನ್ನು ಭಗವಂತನೇ ಹೇಳಬೇಕು. ಕೆಲ ತಿಂಗಳ ಹಿಂದೆ, ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಬಂದು ಬೀಳುವ ವೈವಿಧ್ಯಮಯ ಸರಕು-ಸಾಮಗ್ರಿಗಳ ಮೇಲೆ ಅತಿರೇಕದ ಸುಂಕ ಹೇರುವ ನಿಲುವನ್ನು ಘೋಷಿಸುವ ಮೂಲಕ ತಮ್ಮ ‘ರಾಜತಾಂತ್ರಿಕ ಚೇಷ್ಟೆ’ಗೆ ಚಾಲನೆ ನೀಡಿದ್ದ ಟ್ರಂಪ್, ಭಾರತದ ವಿಷಯದಲ್ಲಿ ಅದ್ಯಾಕೋ ಸುಮ್ಮನಿದ್ದರು.

ಆದರೆ ಈಗ ಆಗಸ್ಟ್ 1ರಿಂದಲೇ ಅನ್ವಯವಾಗುವಂತೆ ಭಾರತೀಯ ಸರಕುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗುವುದು ಎಂದು ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಷಿಯಲ್’ನಲ್ಲಿ ಟ್ರಂಪ್ ಮಹಾಶಯರು ಬರೆದುಕೊಂಡಿದ್ದಾರೆ. ಈ ಹುಚ್ಚಾಟ ಎಲ್ಲಿಯವರೆಗೆ ನಡೆಯಲಿದೆ, ಟ್ರಂಪ್ ರ ‘ಸುಂಕಾಸ್ತ್ರ’ಕ್ಕೆ ಭಾರತ ಯಾವ ರೀತಿಯಲ್ಲಿ ‘ಪ್ರತ್ಯಸ್ತ್ರ’ವನ್ನು ಪ್ರಯೋಗಿಸಲಿದೆ ಎಂಬುದನ್ನು ಕಾಲವೇ ಹೇಳುತ್ತದೆ.

ಆದರೆ ಅಮೆರಿಕದಂಥ ಬೃಹತ್ ದೇಶದ ಅಧ್ಯಕ್ಷ ಗದ್ದುಗೆಯನ್ನು ಏರಿರುವ ಟ್ರಂಪ್, ಅದಕ್ಕೆ ತಕ್ಕ ನಾದ ಘನತೆ-ಗೌರವದಿಂದ ನಡೆದುಕೊಳ್ಳುತ್ತಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ. ಕೆಲ ದಿನಗಳ ಹಿಂದೆ, ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿ ನಿಂತು ಕದನವಿರಾಮ ಘೋಷಣೆ ಯಾಗುವುದಕ್ಕೆ ಕಾರಣವಾಗಿದ್ದೇ ನಾನು’ ಎಂದು ವಿವಿಧ ವೇದಿಕೆಗಳಲ್ಲಿ ಡಂಗುರ ಸಾರಿ ಕೊಳ್ಳುವ ಮೂಲಕ ಟ್ರಂಪ್ ಗೇಲಿಗೊಳಗಾಗಿದ್ದರು.

ಈ ಸಂಘರ್ಷವು ಅಂತ್ಯಗೊಳ್ಳಲು ಯಾವ ಅಂತಾರಾಷ್ಟ್ರೀಯ ನಾಯಕರೂ ಕಾರಣರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಒತ್ತಿ ಹೇಳಿದ್ದು ಕೂಡ ಟ್ರಂಪ್‌ರ ತಲೆಗೆ ಇಳಿಯಲಿಲ್ಲ ಎಂದರೆ, ಇವರನ್ನು ಯಾವ ಕೋನದಿಂದ ‘ಅಮೆರಿಕದ ಅಧ್ಯಕ್ಷರು’ ಎಂದು ಬಾಯಿ ತುಂಬಾ ಕರೆಯಬೇಕು? ಒಟ್ಟಿನಲ್ಲಿ ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳಬೇಕಿದೆ, ಅಷ್ಟೇ!