ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸುಂಕ ಸಮರ: ಜಾಣ್ಮೆ ಅಗತ್ಯ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 1ರಿಂದ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಲಾಗುವುದು ಘೋಷಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದ ಮೇಲೆ ಶೇ.25ರ ತೆರಿಗೆ ಘೋಷಿಸಿದ್ದ ಟ್ರಂಪ್ ಬಳಿಕ ಈ ವಿಚಾರದಲ್ಲಿ ಒಪ್ಪಂದಕ್ಕೆ ಬರಲು 90 ದಿನಗಳ ಗಡುವು ನೀಡಿ ದ್ದರು. ಆದರೆ ಈ ವಿಚಾರದಲ್ಲಿ ಅಂತಿಮ ಒಪ್ಪಂದಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಟ್ರಂಪ್ ಈಗ ನೇರವಾಗಿ ಸುಂಕ ಸಮರಕ್ಕಿಳಿದಿದ್ದಾರೆ.

ಸುಂಕ ಸಮರ: ಜಾಣ್ಮೆ ಅಗತ್ಯ

Ashok Nayak Ashok Nayak Jul 31, 2025 7:30 AM

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 1ರಿಂದ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಲಾಗುವುದು ಘೋಷಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದ ಮೇಲೆ ಶೇ.25ರ ತೆರಿಗೆ ಘೋಷಿಸಿದ್ದ ಟ್ರಂಪ್ ಬಳಿಕ ಈ ವಿಚಾರದಲ್ಲಿ ಒಪ್ಪಂದಕ್ಕೆ ಬರಲು 90 ದಿನಗಳ ಗಡುವು ನೀಡಿದ್ದರು. ಆದರೆ ಈ ವಿಚಾರದಲ್ಲಿ ಅಂತಿಮ ಒಪ್ಪಂದಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಟ್ರಂಪ್ ಈಗ ನೇರವಾಗಿ ಸುಂಕ ಸಮರಕ್ಕಿಳಿದಿದ್ದಾರೆ.

ಇದು ಭಾರತವನ್ನು ಬೆದರಿಸುವ ತಂತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಚೀನಾದ ಉತ್ಪನ್ನಗಳ ಮೇಲೆ ಶೇ.100ಕ್ಕಿಂತ ಹೆಚ್ಚಿನ ಸುಂಕ ಹೇರಿದ್ದ ಟ್ರಂಪ್, ಡ್ರ್ಯಾಗನ್ ರಾಷ್ಟ್ರ ಒಪ್ಪಂದಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸುಂಕದ ವಿಚಾರದಲ್ಲಿ ಟ್ರಂಪ್‌ಗೆ ಭಾರತದ ಮೇಲೆ ಮೊದಲಿ ನಿಂದಲೂ ಸಿಟ್ಟಿದೆ. ‌

ಇದನ್ನೂ ಓದಿ:Vishwavani Editorial: ಅಭಿವ್ಯಕ್ತಿಯಲ್ಲಿ ಅಶ್ಲೀಲತೆ ಸಲ್ಲ

ಭಾರತ ಟ್ಯಾರಿಫ್ ಕಿಂಗ್ ಎಂದು ಈ ಹಿಂದೆ ಟ್ರಂಪ್ ಜರಿದಿದ್ದರು. ಟ್ರಂಪ್ ಕೋಪಕ್ಕೆ ಇದೊಂದೇ ಕಾರಣವಲ್ಲ. ಭಾರತ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವುದು ಅಮೆರಿಕಕ್ಕೆ ಇಷ್ಟವಿಲ್ಲ. ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ನಡೆದ ಬ್ರಿಕ್ಸ್ ಸಂಘಟನೆಯ ದೇಶಗಳ ಮೇಲೂ ಟ್ರಂಪ್ ಸುಂಕ ಹೇರುವ ಬೆದರಿಕೆ ಹಾಕಿದ್ದರು. ಇದಲ್ಲದೆ ರಷ್ಯಾದೊಂದಿಗಿನ ಭಾರತದ ನಂಟೂ ಟ್ರಂಪ್ ಪಿತ್ತ ನೆತ್ತಿಗೇರಲು ಕಾರಣವಾಗಿದೆ.

ಎಲ್ಲರೂ ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಭಾರತ ಬಹುಪಾಲು ಮಿಲಿಟರಿ ಉಪಕರಣಗಳನ್ನು ಮತ್ತು ಇಂಧನವನ್ನು ರಷ್ಯಾದಿಂದ ಖರೀದಿಸಿದೆ ಎಂದು ಟ್ರಂಪ್ ದೂರಿದ್ದಾರೆ. ಭಾರತ ಮಾತ್ರವಲ್ಲ ಜಪಾನ್, ದಕ್ಷಿಣ ಕೊರಿಯಾ ಮುಂತಾದ ಮಿತ್ರ ರಾಷ್ಟ್ರಗಳ ಮೇಲೂ ಟ್ರಂಪ್ ಶೇ.25ರ ಸುಂಕ ಹೇರಿದ್ದಾರೆ.

ಈ ಸುಂಕ ಸಮರದಿಂದ ಭಾರತದ ಆಟೊಮೊಬೈಲ್, ಔಷಧ, ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಟರ್ಬೈನ್, ಕಂಪ್ಯೂಟರ್, ಜವಳಿ, ಜ್ಯುವೆಲ್ಲರಿ ಮತ್ತಿತರ ಸರಕುಗಳ ರಫ್ತಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 2024ರಲ್ಲಿ ಭಾರತ ಅಮೆರಿಕಕ್ಕೆ 77.5 ಶತಕೋಟಿ ಡಾಲರ್ ಮೌಲ್ಯದ ರಫ್ತು ಮಾಡಿತ್ತು.

40.7 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಅಮೆರಿಕದಿಂದ ಆಮದು ಮಾಡಿಕೊಂಡಿತ್ತು. ಇದೇನೇ ಇದ್ದರೂ ಈ ಸುಂಕ ಸಮರ ತಾತ್ಕಾಲಿಕವಾಗಿದ್ದು ಭಾರತ ಇದನ್ನು ಜಾಣ್ಮೆಯಿಂದ ನಿಬಾಯಿಸಬೇಕಿದೆ.