ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಭಿಮಾನವೋ ಅತಿರೇಕವೋ?

ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ಒಂದಷ್ಟು ಟಿಕೆಟ್ಟುಗಳು ಕಾಳಸಂತೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿವೆಯಂತೆ. 50 ಸಾವಿರ ಮುಖಬೆಲೆಯ ‘ವಿಐಪಿ’ ವರ್ಗದ ಟಿಕೆಟ್ಟು ಒಂದೂವರೆ ಲಕ್ಷ ರುಪಾಯಿಗೆ ಮಾರಾಟವಾಗಿರುವುದು ಈ ಅತಿರೇಕಕ್ಕೊಂದು ನಿರ್ದಶನ. ಇದು ಮಿಕ್ಕ ವರ್ಗಕ್ಕೂ ಅನ್ವಯವಾಗುವ ಮಾತು.

ಅಭಿಮಾನವೋ ಅತಿರೇಕವೋ?

Profile Ashok Nayak May 3, 2025 5:11 AM

ಚಿತ್ರಮಂದಿರಗಳಲ್ಲಿ ಸೂಪರ್‌ಸ್ಟಾರ್‌ಗಳ ಚಲನಚಿತ್ರ ಬಿಡುಗಡೆಯಾದಾಗ, ಕೌಂಟರ್‌ನಲ್ಲಿ ಕೆಲವೇ ಕ್ಷಣದಲ್ಲಿ (!) ಟಿಕೆಟ್ಟುಗಳೆಲ್ಲ ಮಾರಾಟವಾಗಿ, ಕಾಳಸಂತೆಕೋರರ ಕೈಯಲ್ಲಿ ಅವು ನಲಿದಾಡುವ ದೃಶ್ಯವನ್ನು ಬಹುತೇಕ ಕಂಡಿರುತ್ತೇವೆ. ತಮ್ಮ ಸಿನಿಮಾದ ಟಿಕೆಟ್ಟುಗಳು ಹೀಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬುದು ಸಂಬಂಧಪಟ್ಟವರಿಗೆ ಜಂಭದ ಬಾಬತ್ತಾಗಿ ಪರಿಣಮಿಸಬಹುದು. ಒಂದಿಷ್ಟು ಅಭಿಮಾನಿಗಳು ‘ಬ್ಲ್ಯಾಕ್‌ನಲ್ಲಿ ಟಿಕೆಟ್ ಖರೀದಿಸಿ ಚಿತ್ರವನ್ನು ವೀಕ್ಷಿಸಿದೆ’ ಎಂದು ಹೇಳಿ ಕೊಳ್ಳುವುದೂ ಉಂಟು. ಇವೆಲ್ಲ ಒಂದು ಮಿತಿಯಲ್ಲಿದ್ದರೆ ಪರವಾಗಿಲ್ಲ. ಅದು ಅತಿರೇಕವಾದರೆ ಸಹನೀಯ. ಶನಿವಾರದ ಐಪಿಎಲ್ ಪಂದ್ಯದ ಟಿಕೆಟ್ ಮಾರಾಟದ ಪರಿಯನ್ನು ಕಂಡಾಗ ಇಂಥ ದೊಂದು ಸಂದರ್ಭದ ನೆನಪಾಗುತ್ತದೆ.

ಇದನ್ನೂ ಓದಿ: Vishwavani Editorial: ಪೋಸ್ಟರ್ ವಾರ್ ನಿಲ್ಲಲಿ

ಕಾರಣ, ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ಒಂದಷ್ಟು ಟಿಕೆಟ್ಟುಗಳು ಕಾಳಸಂತೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿವೆಯಂತೆ. 50 ಸಾವಿರ ಮುಖಬೆಲೆಯ ‘ವಿಐಪಿ’ ವರ್ಗದ ಟಿಕೆಟ್ಟು ಒಂದೂವರೆ ಲಕ್ಷ ರುಪಾಯಿಗೆ ಮಾರಾಟ ವಾಗಿರುವುದು ಈ ಅತಿರೇಕಕ್ಕೊಂದು ನಿರ್ದಶನ. ಇದು ಮಿಕ್ಕ ವರ್ಗಕ್ಕೂ ಅನ್ವಯವಾಗುವ ಮಾತು.

ಊಟ-ಉಪಾಹಾರದ ಸೇವನೆಯಿಂದ ಅಥವಾ ಮನರಂಜನೆಯಿಂದ ಸಿಗುವ ಸಮಾಧಾನ/ಸುಖದ ವಿಷಯ ಬಂದಾಗ ದುಡ್ಡಿನ ಮುಖ ನೋಡಬಾರದು ಎಂಬುದೇನೋ ಒಂದು ಹಂತದವರೆಗೆ ಒಪ್ಪು ವ ಮಾತೇ; ಆದರೆ ಕೆಲವೇ ಗಂಟೆಗಳ ಮನರಂಜನೆಗೆ ಹೀಗೆ ಸಾವಿರಗಟ್ಟಲೆ, ಲಕ್ಷಗಟ್ಟಲೆ ಪ್ರಮಾಣ ದಲ್ಲಿ ದುಡ್ಡನ್ನು ಪೋಲು ಮಾಡುವುದಿದೆಯಲ್ಲಾ, ಅದು ಅಷ್ಟೊಂದು ಸ್ವೀಕಾರಾರ್ಹವಲ್ಲವೇನೋ.

‘ನಮ್ಮ ದುಡ್ಡು, ನಮ್ಮ ಮೋಜು, ಅದನ್ನು ಕೇಳಲು ನೀವ್ಯಾರು?’ ಎನ್ನುವವರಿಗೆ ಇಲ್ಲಿ ಉತ್ತರವಿಲ್ಲ. ಆದರೆ ಪರಿಶ್ರಮದ ದುಡಿಮೆಯ ಹಣವನ್ನು ಹೀಗೆ ವೃಥಾ ಹುಡಿಗಟ್ಟುವುದು ಮತ್ತು ಅದು ಯಾರದೋ ಮಡಿಲಿಗೆ ಸೇರುವುದು- ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ? ಎಂಬುದಿಲ್ಲಿ ಪ್ರಶ್ನೆ. ಆದರೆ ಇದಕ್ಕೆ ಉತ್ತರಿಸುವವರಾರು?!