ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಪೋಸ್ಟರ್ ವಾರ್ ನಿಲ್ಲಲಿ

ಪಹಲ್ಗಾಮ್ ದಾಳಿಯ ತರುವಾಯದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಕಾಣೆಯಾಗಿದ್ದರೆ’ ಎಂದು ಬಿಂಬಿಸುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ‘ಗಾಯಬ್’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದು ಬಿಡುಗಡೆಯಾಯಿತು. ಇದರಲ್ಲಿ, ಮುಖಭಾಗವನ್ನು ಮರೆಮಾಚಿ, ಕುರ್ತಾ-ಪೈಜಾಮಾ-ಶೂ ಕಾಣುವ ರೀತಿಯಲ್ಲಿ ಬಿಂಬಿಸಲಾಗಿತ್ತು

ಪೋಸ್ಟರ್ ವಾರ್ ನಿಲ್ಲಲಿ

Profile Ashok Nayak May 2, 2025 6:58 AM

ರಾಜಕೀಯ ಪಕ್ಷಗಳು ಎಂದಾಕ್ಷಣ ಪರಸ್ಪರ ಟೀಕೆ-ಟಿಪ್ಪಣಿ, ಕಾಲೆಳೆಯುವಿಕೆ ಇರುವಂಥದ್ದೇ. ಪಕ್ಷಗಳು ಇನ್ನೂ ಜೀವಂತವಾಗಿವೆ ಎಂಬ ಭಾವನೆ ಮೂಡುವುದೇ ಇಂಥ ಏಟು-ಎದುರೇಟುಗಳು ಚಾಲ್ತಿಯಲ್ಲಿದ್ದಾಗ. ಆಡಳಿತಾರೂಢರನ್ನು ಕಾಲಾನುಕಾಲಕ್ಕೆ ಕಿವಿ ಹಿಂಡಿ ಸರಿದಾರಿಗೆ ತರುವ ನಿಷ್ಠುರ ವಿಪಕ್ಷಗಳು ಸದನದಲ್ಲಿ ಇರಬೇಕಾದ್ದು ಕೂಡ ಅತ್ಯವಶ್ಯ. ಇದು ನಮ್ಮ ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ, ಟೀಕೆ-ಟಿಪ್ಪಣಿಗಳು ಸಭ್ಯತೆಯ ಎಲ್ಲೆ ಯನ್ನು ಮೀರಿದರೆ ಸಹಿಸಲು ಅಸಾಧ್ಯ. ಅದರಲ್ಲೂ, ಪರದೇಶದವರು ನಮ್ಮ ರಾಜಕೀಯ ವ್ಯವಸ್ಥೆ ಯನ್ನು ಆಡಿಕೊಳ್ಳುವಷ್ಟರ ಮಟ್ಟಿಗೆ ಮತ್ತು ಪರದೇಶದವರ ಗಮನಕ್ಕೆ ಬರುವ ರೀತಿಯಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡಿಕೊಂಡರೆ ಅದನ್ನು ಯಾರು ತಾನೇ ಸಹಿಸಿ ಯಾರು? ಮೊನ್ನಿನ ನಿದರ್ಶನ ವನ್ನೇ ತೆಗೆದುಕೊಳ್ಳಿ.

ಇದನ್ನೂ ಓದಿ: Vishwavani Editorial: ದುಡಿಯುವ ಕೈಗಳಿಗೆ ಶಕ್ತಿ ಸಿಗಲಿ

ಪಹಲ್ಗಾಮ್ ದಾಳಿಯ ತರುವಾಯದಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಕಾಣೆಯಾಗಿದ್ದರೆ’ ಎಂದು ಬಿಂಬಿಸುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ‘ಗಾಯಬ್’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದು ಬಿಡುಗಡೆಯಾಯಿತು. ಇದರಲ್ಲಿ, ಮುಖಭಾಗವನ್ನು ಮರೆಮಾಚಿ, ಕುರ್ತಾ-ಪೈಜಾಮಾ-ಶೂ ಕಾಣುವ ರೀತಿಯಲ್ಲಿ ಬಿಂಬಿಸ ಲಾಗಿತ್ತು. ಇದನ್ನು ಕಂಡ ಪಾಕಿಸ್ತಾನದ ರಾಜಕಾರಣಿಯೊಬ್ಬರು Naughty Congress ಎಂಬ ಪ್ರತಿಕ್ರಿಯೆ ನೀಡಿದ್ದೂ ಆಯಿತು. ದೇಶದೊಳಗೆ ಮಾತ್ರವೇ ಪ್ರಯೋಗವಾಗಬೇಕಾದ ಟೀಕಾಸ್ತ್ರಗಳು ಹೀಗೆ ಗಡಿಯಾಚೆಯವರ ಗಮನವನ್ನೂ ಸೆಳೆದಾಗ ಹಾಗೂ ಅವರು ಅದನ್ನು ಆಡಿಕೊಳ್ಳುವಂತಾದಾಗ ಆಗುವ ವ್ಯತಿರಿಕ್ತ ಬೆಳವಣಿಗೆಯಿದು. ಇದರಿಂದಾಗಿ ದೇಶಭಕ್ತ ಭಾರತೀಯರಿಗೆ ಸಹಿಸಲು ಅಸಾಧ್ಯವಾದ ಮುಜುಗರವಾಗುತ್ತದೆ ಎಂಬು ದನ್ನು ಬಿಡಿಸಿ ಹೇಳಬೇಕಿಲ್ಲ; ಆದರೆ ಇಂಥ ಸೂಕ್ಷ್ಮವು ನಮ್ಮ ರಾಜಕೀಯ ಪ್ರಭೃತಿಗಳಿಗೆ ಅರ್ಥವಾಗ ದಿರುವುದು ವಿಷಾಧನೀಯ.

ಪರದೇಶಗಳ ವೇದಿಕೆಯಲ್ಲಿ ಕುಳಿತು ಭಾರತದ ಬಗ್ಗೆ ಹಗುರವಾಗಿ ಮಾತನಾಡುವ ತಥಾಕಥಿತ ಜನನಾಯಕರಿಗೂ ಈ ಮಾತು ಅನ್ವಯ. ಪ್ರಜಾಪ್ರತಿನಿಧಿಗಳು ಇನ್ನಾದರೂ ಪ್ರಬುದ್ಧರಾಗಲಿ ಎಂಬು ದು ಸಹೃದಯಿ ನಾಗರಿಕರ ಆಶಯ ಮತ್ತು ನಿರೀಕ್ಷೆ.