Vishwavani Editorial: ಸುಟ್ಟರೂ ಹೋಗದ ಹುಟ್ಟುಗುಣ!
ಉಗ್ರರು ಪಹಲ್ಗಾಮ್‌ನಲ್ಲಿ ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಗತ್ತೇ ತನಗೆ ಛೀಮಾರಿ ಹಾಕು ತ್ತಿರುವುದನ್ನು ಕಂಡಾದರೂ ಪಾಕಿಸ್ತಾನ ತೆಪ್ಪಗಿರಬೇಕಿತ್ತು. ಇಲ್ಲವೆಂದರೆ, ತನ್ಮ ಹುಟ್ಟಡಗಿಸಲು ಭಾರತವು ನಡೆಸುತ್ತಿರುವ ಸೇನಾ ಸನ್ನದ್ಧತೆಯನ್ನು ಕಂಡಾದರೂ ಪಾಕ್ ಬಾಲ ಮುದುರಿ ಕೊಂಡಿರ ಬೇಕಿತ್ತು. ಆದರೆ, ‘ಮಗಳು ವಿಧವೆಯಾದರೂ ಪರವಾಗಿಲ್ಲ, ಅಳಿಯ ಸಾಯಬೇಕು’ ಎನ್ನುವ ಜಾಯ ಮಾನ ಈ ‘ಮಗ್ಗುಲುಮುಳ್ಳು’ ದೇಶದ್ದು. ಹೀಗಾಗಿ ಎರಡು ಅನಪೇಕ್ಷಿತ ಕೃತ್ಯಗಳಿಗೆ ಪಾಕಿಸ್ತಾನದ ಪರ ಸಮರ್ಥಕರು ಕೈಹಾಕಲು ಹವಣಿಸುತ್ತಿರುವ ಸುದ್ದಿ ಬಂದಿದೆ


ಉಗ್ರರು ಪಹಲ್ಗಾಮ್‌ನಲ್ಲಿ ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಗತ್ತೇ ತನಗೆ ಛೀಮಾರಿ ಹಾಕು ತ್ತಿರುವುದನ್ನು ಕಂಡಾದರೂ ಪಾಕಿಸ್ತಾನ ತೆಪ್ಪಗಿರಬೇಕಿತ್ತು. ಇಲ್ಲವೆಂದರೆ, ತನ್ಮ ಹುಟ್ಟಡಗಿಸಲು ಭಾರತವು ನಡೆಸುತ್ತಿರುವ ಸೇನಾ ಸನ್ನದ್ಧತೆಯನ್ನು ಕಂಡಾದರೂ ಪಾಕ್ ಬಾಲ ಮುದುರಿ ಕೊಂಡಿರ ಬೇಕಿತ್ತು. ಆದರೆ, ‘ಮಗಳು ವಿಧವೆಯಾದರೂ ಪರವಾಗಿಲ್ಲ, ಅಳಿಯ ಸಾಯಬೇಕು’ ಎನ್ನುವ ಜಾಯಮಾನ ಈ ‘ಮಗ್ಗುಲುಮುಳ್ಳು’ ದೇಶದ್ದು. ಹೀಗಾಗಿ ಎರಡು ಅನಪೇಕ್ಷಿತ ಕೃತ್ಯಗಳಿಗೆ ಪಾಕಿ ಸ್ತಾನದ ಪರ ಸಮರ್ಥಕರು ಕೈಹಾಕಲು ಹವಣಿಸುತ್ತಿರುವ ಸುದ್ದಿ ಬಂದಿದೆ. ಅಂದರೆ, ಉಗ್ರರು ಮತ್ತು ಅವರ ಸಹಚರರನ್ನು ಇರಿಸಲಾಗಿರುವ ಜೈಲುಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಕೃಪಾ ಪೋಷಿತ ಉಗ್ರರು ಸಂಚು ರೂಪಿಸಿರುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾಹಿತಿ ದಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ: Vishwavani Editorial: ಬೋಧನಾ ಗುಣಮಟ್ಟ ಹೆಚ್ಚಳವಾಗಲಿ
ಮತ್ತೊಂದೆಡೆ, ಪಹಲ್ಗಾಮ್ ದಾಳಿಯ ತರುವಾಯದಲ್ಲಿ ಭಾರತ ಕೈಗೊಂಡಿರುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಮಾನತು, ಗಡಿ ಬಂದ್, ವ್ಯಾಪಾರ ಸ್ಥಗಿತ, ವಾಯುಪ್ರದೇಶದ ನಿರ್ಬಂಧ ಮುಂತಾದ ಕ್ರಮಗಳಿಂದ ಕಂಗೆಟ್ಟಿರುವ ಪಾಕಿ-ಹ್ಯಾಕರ್‌ಗಳು ಭಾರತೀಯ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಲತಾಣಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸಿರು ವುದಾಗಿ ಬಡಾಯಿ ಕೊಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಗಳ ಈ ಚಿತ್ತಸ್ಥಿತಿಗೆ ಏನನ್ನುವುದು? ದೇಶ ವಿಭಜನೆಯಾದ ಕಾಲದಿಂದಲೂ ಇಂಥ ಕಿತಾಪತಿ ಗಳನ್ನೇ ಉಸಿರಾಗಿಸಿಕೊಂಡಿರುವ ಪಾಕಿಗಳನ್ನು ಉದ್ದೇಶಿಸಿ, ‘ಇದು ಸುಟ್ಟರೂ ಹೋಗದ ಹುಟ್ಟು ಗುಣ’ ಎಂದು ನಾವು ಉದ್ಗರಿಸಬೇಕೇ? ಯಾವುದೇ ಒಬ್ಬ ವ್ಯಕ್ತಿಯಾಗಲೀ ಅಥವಾ ಒಂದು ವ್ಯವಸ್ಥೆ ಯಾಗಲೀ, ತಾನು ಅಧಃಪತನದತ್ತ ಸಾಗುತ್ತಿರುವ ಸೂಕ್ಷ್ಮ ಗೊತ್ತಾಗುತ್ತಿದ್ದಂತೆ, ಅದರಿಂದ ಮೇಲೇಳುವ ಪ್ರಯತ್ನವಾದರೂ ಹೊಮ್ಮುತ್ತದೆ.
ಆದರೆ ಪಾಕಿಸ್ತಾನದ ವಿಷಯದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ. ವರ್ಷದ ಹಿಂದೆ ತನ್ನ ರಾಜಕೀಯ ವ್ಯವಸ್ಥೆ ಹದಗೆಟ್ಟು ಅರಾಜಕತೆ ರೂಪುಗೊಂಡಾಗ ಅಥವಾ ನಾಗರಿಕರಿಗೆ ಪಡಿತರದ ಗೋಧಿಹಿಟ್ಟು ಹಂಚುವುದಕ್ಕೂ ಆಗದೆ ಕೈಕೈ ಹಿಸುಕಿಕೊಳ್ಳುವಂಥ ಸ್ಥಿತಿ ರೂಪುಗೊಂಡಾಗಲಾದರೂ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ಪಾಕ್‌ಗೆ ಅಷ್ಟೊಂದು ಸಮಯವೆಲ್ಲಿ, ಸಂಯಮ ವೆಲ್ಲಿ?!