ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿದ್ದ ಯೋಜನೆಯ ಭಾಗವಾಗಿದ್ದ ಟ್ಯಾಂಕ್ ಇದು ಎಂಬುದು ಗಮನಿಸಬೇಕಾದ ಸಂಗತಿ. ಈ ಘಟನೆಯನ್ನು ಸ್ಥೂಲ ನೋಟದಲ್ಲಿ ದಕ್ಕಿಸಿಕೊಳ್ಳುವವರು, ‘ಕುಸಿದಿದ್ದು ಕೇವಲ ನೀರಿನ ಟ್ಯಾಂಕ್, ಇಲ್ಲಿ ಅಣೆಕಟ್ಟೆಯೇನೂ ಒಡೆದು ಹೋಗಿಲ್ಲವಲ್ಲ’ ಎಂದು ಹಗುರ ದನಿಯಲ್ಲಿ ಪ್ರತಿಕ್ರಿಯಿಸಬಹುದು.

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

-

Ashok Nayak
Ashok Nayak Jan 23, 2026 8:53 AM

ಬರೋಬ್ಬರಿ 12 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಒಂದು ಉದ್ಘಾಟನೆ ಗೂ ಮೊದಲೇ ಕುಸಿದುಬಿದ್ದ ಘಟನೆ ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯಲ್ಲಿ ನಡೆದಿದೆ.

33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿದ್ದ ಯೋಜನೆಯ ಭಾಗವಾ ಗಿದ್ದ ಟ್ಯಾಂಕ್ ಇದು ಎಂಬುದು ಗಮನಿಸಬೇಕಾದ ಸಂಗತಿ. ಈ ಘಟನೆಯನ್ನು ಸ್ಥೂಲ ನೋಟದಲ್ಲಿ ದಕ್ಕಿಸಿಕೊಳ್ಳುವವರು, ‘ಕುಸಿದಿದ್ದು ಕೇವಲ ನೀರಿನ ಟ್ಯಾಂಕ್, ಇಲ್ಲಿ ಅಣೆಕಟ್ಟೆಯೇನೂ ಒಡೆದುಹೋಗಿಲ್ಲವಲ್ಲ’ ಎಂದು ಹಗುರ ದನಿಯಲ್ಲಿ ಪ್ರತಿಕ್ರಿಯಿಸಬಹುದು.

ಇದನ್ನೂ ಓದಿ: Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು

ಆದರೆ ಆ 33 ಹಳ್ಳಿಗಳ ಜನರ ಪಾಲಿಗೆ ಅಲ್ಲಿ ಕುಸಿದಿರುವುದು ಟ್ಯಾಂಕ್ ಮಾತ್ರವೇ ಅಲ್ಲ, ವ್ಯವಸ್ಥೆಯ ಮೇಲೆ ಅವರು ಇಟ್ಟಿದ್ದ ವಿಶ್ವಾಸ ಕೂಡ ಎಂದರೆ ಅತಿಶಯೋಕ್ತಿ ಆಗಲಾರದು. ಈ ಘಟನೆಯನ್ನು ಕೇವಲ ಪ್ರಾಸಂಗಿಕ ಉಲ್ಲೇಖಕ್ಕೆ ಬಳಸಿ ಕೈಬಿಡುವಂಥದ್ದಲ್ಲ; ಏಕೆಂದರೆ ದೇಶದ ಉದ್ದಗಲಕ್ಕೂ ಇಂಥ ಸಾಕಷ್ಟು ಕುಸಿತಗಳು ಹಿಂದೆಯೂ ನಡೆದಿವೆ, ನಡೆಯುತ್ತಲೂ ಇವೆ.

ಬಿಗಿಯಾಗಿ ಲಗಾಮು ಹಾಕದಿದ್ದರೆ ಮುಂದೆಯೂ ನಡೆಯುತ್ತವೆ! ಜನಪರ ಯೋಜನೆಗಳು ಅಥವಾ ಅಭಿವೃದ್ಧಿ ಕಾರ್ಯಗಳು, ಸ್ವಾರ್ಥ-ಲಾಲಸೆಯ ಜನರ ಕಪಿಮುಷ್ಟಿಯಲ್ಲಿ ಸಿಲುಕಿ ಹೇಗೆ ತಮ್ಮ ಮೂಲ ಆಶಯಗಳನ್ನೇ ಕಳೆದುಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆಯಷ್ಟೇ. ಕೆಲ ದಿನಗಳ ನಂತರ, ಇದನ್ನೂ ಮೀರಿಸುವ ಕರ್ಮಕಾಂಡವೊಂದು ಬಯಲಾಗುತ್ತಿದ್ದಂತೆ ‘ನೀರಿನ ಟ್ಯಾಂಕ್‌ನ ಕುಸಿತ’ದ ಸುದ್ದಿಯೂ ಜನರ ಮನದಾಳದಿಂದ ಮಾಸುತ್ತದೆ ಮತ್ತು ಭ್ರಷ್ಟರ ಮುಖಗ ಳಲ್ಲಿ ವಿಕೃತ ಆನಂದವು ರಾರಾಜಿಸತೊಡಗುತ್ತದೆ. ಕಾರಣ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಯಾರಿಗೂ ವ್ಯವಧಾನವಿಲ್ಲ!