ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಪ್ರಶಂಸಾರ್ಹ ಬೆಳವಣಿಗೆ

‘ಬ್ರಹ್ಮೋಸ್’ ಎಂಬುದು ಭಾರತ ಮತ್ತು ರಷ್ಯಾ ದೇಶಗಳ ಜಂಟಿ ಸಹಯೋಗದಲ್ಲಿ ಸಾಕಾರ ಗೊಂಡಿರುವ ಕನಸು ಎಂಬುದಿಲ್ಲಿ ಉಲ್ಲೇಖನೀಯ. ಇಂಥ ಮತ್ತಷ್ಟು ಉಪಕ್ರಮಗಳಿಗೆ ಭಾರತವು ಮುಂದಾದರೆ ಒಳಿತು ಎಂಬ ಗ್ರಹಿಕೆ ಬಹುತೇಕರಲ್ಲಿ ಗಟ್ಟಿಯಾಗುತ್ತಿರುವಾಗಲೇ, ಅಂಥ ಮತ್ತೊಂದು ಸಹಯೋಗಕ್ಕೆ ಭಾರತ ಮುಂದಾಗಿದೆ.

ಇದು ಪ್ರಶಂಸಾರ್ಹ ಬೆಳವಣಿಗೆ

Profile Ashok Nayak Jun 7, 2025 6:59 AM

ಪಹಲ್ಗಾಮ್ ಮಾರಣಹೋಮಕ್ಕೆ ಕುಮ್ಮಕ್ಕು ನೀಡಿದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲೆಂದು ಪಾಕ್-ಕೃಪಾಪೋಷಿತ ಉಗ್ರರ ಬೀಡುಗಳ ಮೇಲೆ ದಾಳಿ ಮಾಡಲು ಹಮ್ಮಿಕೊಳ್ಳಲಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯು ಹಲವು ನೆಲೆಗಳಲ್ಲಿ ಭಾರತದ ಸೇನಾಶಕ್ತಿಯನ್ನು ಜಗದೆದುರು ತೆರೆದಿಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ‘ಬ್ರಹ್ಮೋಸ್’ ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಈಗ ವಿಶ್ವದ ವಿವಿಧ ದೇಶಗಳು ಸರದಿಯಲ್ಲಿ ನಿಂತಿರುವುದು ಇದಕ್ಕೊಂದು ಪುರಾವೆಯಾ ಗಬಲ್ಲದು.

‘ಬ್ರಹ್ಮೋಸ್’ ಎಂಬುದು ಭಾರತ ಮತ್ತು ರಷ್ಯಾ ದೇಶಗಳ ಜಂಟಿ ಸಹಯೋಗದಲ್ಲಿ ಸಾಕಾರ ಗೊಂಡಿರುವ ಕನಸು ಎಂಬುದಿಲ್ಲಿ ಉಲ್ಲೇಖನೀಯ. ಇಂಥ ಮತ್ತಷ್ಟು ಉಪಕ್ರಮಗಳಿಗೆ ಭಾರತವು ಮುಂದಾದರೆ ಒಳಿತು ಎಂಬ ಗ್ರಹಿಕೆ ಬಹುತೇಕರಲ್ಲಿ ಗಟ್ಟಿಯಾಗುತ್ತಿರುವಾಗಲೇ, ಅಂಥ ಮತ್ತೊಂದು ಸಹಯೋಗಕ್ಕೆ ಭಾರತ ಮುಂದಾಗಿದೆ.

ಇದನ್ನೂ ಓದಿ: Vishwavani Editorial: ವಿನಾಶಕಾಲದಲ್ಲಿ ವಿಪರೀತ ಬುದ್ಧಿ

ಫ್ರಾನ್ಸ್ ಮೂಲದ ರಫೆಲ್ ಯುದ್ಧ ವಿಮಾನಗಳ ತಯಾರಕನಾಗಿರುವ ‘ಡಸಾಲ್ಟ್ ಏವಿಯೇಷನ್’ ಸಂಸ್ಥೆಯು ಭಾರತದ ‘ಟಾಟಾ ಸಮೂಹ’ದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಇತ್ತೀಚಿನ ಹೆಮ್ಮೆಯ ಸುದ್ದಿ. ಈ ಸಹಯೋಗವು ಭಾರತ ಹಾಗೂ ಇತರ ದೇಶಗಳ ಮಾರುಕಟ್ಟೆಗಳಿಗೆಂದು ಫೈಟರ್ ಜೆಟ್‌ಗಳ ಕೆಲವು ಭಾಗಗಳನ್ನು ತಯಾರಿಸಲಿದೆ ಎಂಬುದು ಲಭ್ಯ ಮಾಹಿತಿ. ಈ ಸಹಯೋ ಗದ ಫಲವಾಗಿ ಭಾರತದ ಏರೋಸ್ಪೇಸ್ ಮೂಲಸೌಕರ್ಯ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆಯಾಗಲಿದೆ ಎಂಬ ಅಂಶವೂ ಈ ಬೆಳವಣಿಗೆಗೆ ಇರುವ ಮಹತ್ವವನ್ನು ಒತ್ತಿ ಹೇಳಿದೆ.

ಬಹುತೇಕರಿಗೆ ಗೊತ್ತಿರುವಂತೆ, ಸ್ವಾತಂತ್ರ್ಯಾನಂತರದ ಹಲವು ವರ್ಷಗಳವರೆಗೆ, ಸಾಕಷ್ಟು ಉತ್ಪನ್ನ ಗಳು ಮತ್ತು ಸೇವೆಗಳಿಗೆ ಪರದೇಶಗಳ ಕಡೆಗೇ ಕಣ್ಣು ನೆಡಬೇಕಾಗಿದ್ದ ಭಾರತವು 10 ವರ್ಷ ಗಳಿಂದೀಚೆಗೆ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದೆ. ಉಪಗ್ರಹಗಳ ಉಡಾವಣೆಗೆ ಅನ್ಯದೇಶಗಳ ತಂತ್ರಜ್ಞಾನ ಮತ್ತು ಉಡಾವಣಾ ಕೇಂದ್ರವನ್ನು ನೆಚ್ಚಬೇಕಿದ್ದ ಭಾರತವು ಈಗ ತನ್ನದೇ ನೆಲದಲ್ಲಿ ಪರದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವಷ್ಟರ ಮಟ್ಟಿಗೆ ಸ್ವಾವಲಂಬಿಯಾಗಿರುವುದು

ಇದಕ್ಕೊಂದು ಪುರಾವೆ. ಪ್ರಸ್ತುತ ಡಸಾಲ್ಟ್ ಏವಿಯೇಷನ್ ಜತೆಗೆ ಆಗಿರುವ ಒಡಂಬಡಿಕೆಯ ರೀತಿಯಲ್ಲೇ ಮತ್ತಷ್ಟು ಸಹಯೋಗಗಳು ಏರ್ಪಟ್ಟರೆ, ಅದು ಭಾರತದ ಭವಿಷ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬಲ್ಲದು.