Vishwavani Editorial: ಮಹಿಳಾ ಮೀಸಲು: ಮಹತ್ವದ ಹೆಜ್ಜೆ
ಪ್ರಸ್ತುತ ಲೋಕಸಭೆಯಲ್ಲಿ 543 ಸಂಸದರ ಪೈಕಿ ಕೇವಲ 74 ಮಹಿಳಾ ಸಂಸದರು ಇದ್ದಾರೆ. ಒಟ್ಟು ಸದಸ್ಯ ರಲ್ಲಿ ಇದು ಸುಮಾರು ಶೇ.13.6 ಮಾತ್ರ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದರೂ, ಸಂಸತ್ತಿ ನಲ್ಲಿ ಅವರ ಪಾಲು ಶೇ.15 ದಾಟಿಲ್ಲ. ಇನ್ನು ದೇಶದ ಎಲ್ಲ ವಿಧಾನಸಭೆಗಳ ಸರಾಸರಿ ಮಹಿಳಾ ಪ್ರತಿನಿಧಿತ್ವ ಸುಮಾರು ಶೇ.9 ಮಾತ್ರ ಇದೆ. ಕೆಲವು ರಾಜ್ಯಗಳಲ್ಲಿ ಇದು ಶೇ.10ಕ್ಕಿಂತ ಕಡಿಮೆ, ಕೆಲವೆಡೆ ಶೇ.20ರಷ್ಟು ತಲುಪಿಲ್ಲ.
-
ಭಾರತದಲ್ಲಿ ಮಹಿಳಾ ರಾಜಕೀಯ ಪ್ರತಿನಿಧಿತ್ವವನ್ನು ಹೆಚ್ಚಿಸಲು ಶಾಸನಸಭೆಗಳಲ್ಲಿ ಮೀಸಲು ಕಲ್ಪಿಸಲು ಕಾನೂನು ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆ ಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೀರ್ಘಕಾಲದಿಂದ ಚರ್ಚೆಯಲ್ಲಿರುವ ಈ ವಿಷಯವು ಈಗ ಕಾರ್ಯರೂಪಕ್ಕೆ ಬರಲು ಸನ್ನದ್ಧವಾಗಿರುವುದು ಸ್ವಾಗತಾರ್ಹ ಬೆಳವಣಿಗೆ.
ಪ್ರಸ್ತುತ ಲೋಕಸಭೆಯಲ್ಲಿ 543 ಸಂಸದರ ಪೈಕಿ ಕೇವಲ 74 ಮಹಿಳಾ ಸಂಸದರು ಇದ್ದಾರೆ. ಒಟ್ಟು ಸದಸ್ಯರಲ್ಲಿ ಇದು ಸುಮಾರು ಶೇ.13.6 ಮಾತ್ರ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದರೂ, ಸಂಸತ್ತಿನಲ್ಲಿ ಅವರ ಪಾಲು ಶೇ.15 ದಾಟಿಲ್ಲ. ಇನ್ನು ದೇಶದ ಎಲ್ಲ ವಿಧಾನಸಭೆಗಳ ಸರಾಸರಿ ಮಹಿಳಾ ಪ್ರತಿನಿಧಿತ್ವ ಸುಮಾರು ಶೇ.9 ಮಾತ್ರ ಇದೆ. ಕೆಲವು ರಾಜ್ಯಗಳಲ್ಲಿ ಇದು ಶೇ.10ಕ್ಕಿಂತ ಕಡಿಮೆ, ಕೆಲವೆಡೆ ಶೇ.20ರಷ್ಟು ತಲುಪಿಲ್ಲ.
ದೇಶದ ಎಲ್ಲ ಸಂಸದರು ಮತ್ತು ಶಾಸಕರಲ್ಲಿ ಮಹಿಳೆಯರ ಪ್ರಮಾಣ ಸುಮಾರು ಶೇ.10 ಮಾತ್ರ ಇದೆ. ದೇಶದ ಜನಸಂಖ್ಯೆಯ ಅರ್ಧ ಭಾಗವಾದ ಮಹಿಳೆಯರಿಗೆ ಸಮಾನ ಅವಕಾಶ ದೊರೆಯುತ್ತಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಮೂಲಕ ರಾಜಕೀಯದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಈ ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮಹತ್ವಪೂರ್ಣವಾಗಿದೆ.
ಇದನ್ನೂ ಓದಿ: Vishwavani Editorial: ಸಿದ್ದರಾಮಯ್ಯ ನಡೆ ಮಾದರಿ
ಇದು ಮಹಿಳೆಯರಿಗೆ ಮಾತ್ರವಲ್ಲದೆ ಸಮಗ್ರ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಹಿಳೆ ಯರು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿದರೆ, ಶಿಕ್ಷಣ, ಆರೋಗ್ಯ, ಮಹಿಳಾ ಭದ್ರತೆ ಮತ್ತು ಕುಟುಂಬ ಕಲ್ಯಾಣದಂತಹ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂಬುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ.
ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಮೀಸಲಾತಿ ಯಶಸ್ವಿಯಾಗಿ ಜಾರಿಯಾಗಿರುವುದು ಇದರ ಜೀವಂತ ಉದಾಹರಣೆಯಾಗಿದೆ. ಆದಾಗ್ಯೂ, ಕೇವಲ ಮೀಸಲಾತಿ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಹಿಳೆಯರಿಗೆ ರಾಜಕೀಯ ತರಬೇತಿ, ಆರ್ಥಿಕ ಬೆಂಬಲ ಮತ್ತು ಸಾಮಾ ಜಿಕ ಮನೋಭಾವದಲ್ಲಿ ಬದಲಾವಣೆ ಅಗತ್ಯವಿದೆ.
ಮಹಿಳಾ ಮೀಸಲು ವಿಧೇಯಕಕ್ಕೆ ಬೆಂಬಲ ಘೋಷಿಸಿರುವ ಪ್ರತಿಪಕ್ಷ ಇದರ ಜತೆಗೆ ಮಂಡನೆಯಾಗು ತ್ತಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನಿರಾಕರಿಸಿವೆ. ಹೆಚ್ಚುವರಿ ಕ್ಷೇತ್ರಗಳು ಲಭ್ಯ ವಾಗದ ಹೊರತು ಮೀಸಲು ಕಾನೂನು ಜಾರಿಯಾಗುವುದು ಕಷ್ಟ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸಹಮತದ ನಿರ್ಧಾರಕ್ಕೆ ಬರಬೇಕಿದೆ. ಮಹಿಳಾ ಮೀಸಲು ಐತಿಹಾಸಿಕ ಅಗತ್ಯವೂ ಹೌದು.