ಈ ಬಾರಿ ಬಿಗ್ ಬಾಸ್ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ
ಈ ಬಾರಿ ದೊಡ್ಮನೆಯೊಳಗೆ ಯಾವೆಲ್ಲಾ ಕಂಟೆಸ್ಟೆಂಟ್ ಹೋಗಬಹುದು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಬಲ್ಲ ಮೂಲಗಳಿಂದ ಬಿಬಿಕೆ 12ಗೆ ಕನ್ನಡದ ನಟಿ ಸುಧಾರಾಣಿ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.