ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial: ಗೌತಮ್ - ಭೂಮಿಕಾ ಒಂದಾಗೋ ಅಮೃತ ಘಳಿಗೆ! ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಭೂಮಿಕಾ ವಾಪಸ್‌ ಆದ್ರೆ, ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ. ಇದೀಗ ಧಾರಾವಾಹಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ಆದಷ್ಟು ಬೇಗ ಭೂಮಿ ಗೌತಮ್‌ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ.

ಶಕುಂತಲಾಗೆ ಭಾಗ್ಯಮ್ಮ ಭರ್ಜರಿ ಆವಾಜ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jan 1, 2026 6:18 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial) ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪಡೆದುಕೊಂಡಿದೆ. ಒಂದು ಕಡೆ ಭೂಮಿಕಾ ವಾಪಸ್‌ ಆದ್ರೆ, ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ (Bhagyamma) ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ. ಇದೀಗ ಧಾರಾವಾಹಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ಆದಷ್ಟು ಬೇಗ ಭೂಮಿ (Bhoomika Gotham) ಗೌತಮ್‌ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ.

ಗೌತಮ್‌ನಿಂದ ದೂರ ಆಗಿದ್ದ ಭೂಮಿ

ಶಕುಂತಲಾ ಬೆದರಿಕೆಗೆ ಹೆದರಿದ ಭೂಮಿಕಾ ಅದೆಷ್ಟೋ ವರ್ಷಗಳ ಕಾಲ ಮನೆ ಬಿಟ್ಟು ಗೌತಮ್‌ನಿಂದ ದೂರ ಇದ್ದಳು. ಆ ಬಳಿಕ ಮತ್ತೆ ಹತ್ತಿರವಾಗಿದ್ದಾರೆ. ವಠಾರದಲ್ಲಿ ಬೇರೆ ಬೇರೆ ಮನೆಯಲ್ಲಿ ವಾಸ ವಿದ್ದರೂ ಮಾತು ಕತೆ ಅಷ್ಟಕಷ್ಟೆ ಆಗಿತ್ತು.

ಇದನ್ನೂ ಓದಿ: Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್​ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ

ಇನ್ನೇನು ಜೋಡಿ ಸರಿ ಹೋಗೋ ಅಷ್ಟರಲ್ಲಿ ಜೈದೇವ್‌ ಆಸ್ತಿಗಾಗಿ ಆಕಾಶ್‌ನನ್ನು ಕಿಡ್ನಾಪ್‌ ಮಾಡಿದ್ದ. ಹೀಗಾಗಿ ಭೂಮಿಕಾ ದೇಶವನ್ನು ಬಿಟ್ಟು ಹೋಗಬೇಕು ಎಂದು ನಿರ್ಧಾರ ಮಾಡುತ್ತಾಳೆ. ಆದರೆ ಹೋಗಬೇಕು ಎನ್ನುವಷ್ಟರಲ್ಲಿಯೇ ಆನಂದ್​ ಬಂದು ಮಗಳು ಬದುಕಿರುವ ಸುದ್ದಿಯನ್ನು ಹೇಳಿದ್ದಾನೆ. ಹೀಗಾಗಿ ಭೂಮಿಕಾ ಮತ್ತೆ ವಾಪಸ್‌ ಆಗಿದ್ದಾಳೆ.

ಇನ್ನೊಂದೆಡೆ ಮಲ್ಲಿ ಭೂಮಿಕಾಗೆ ಬುದ್ಧಿಮಾತು ಹೇಳಿ, ಗೌತಮ್​ ಮಗುವನ್ನು ಹುಡುಕುತ್ತಿರುವ ದಾಖಲೆ ಕೊಟ್ಟಿದ್ದಾಳೆ. ಇದನ್ನೆಲ್ಲಾ ನೋಡಿದ ಮೇಲೆ ಭೂಮಿಕಾಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿದೆ. ಗೌತಮ್​ ಬಳಿ ಎಲ್ಲಾ ವಿಷಯ ಹೇಳುವ ನಿರ್ಧಾರ ಮಾಡಿದ್ದಾಳೆ.

ಶಕುಂತಲಾ ಶಾಕ್‌

ಮತ್ತೊಂದು ಕಡೆ ಶಕುಂತಲಾ ಆಭರ್ಟ ಹೆಚ್ಚಾಗಿದೆ. ಭಾಗ್ಯಳನ್ನ ನೋಡಿ, ನಿನಗೆ ಮಾತೇ ಬರಲ್ಲ ಅಂತ ಶಕುಂತಲಾ ಆಡಿಕೊಂಡಿದ್ದಾಳೆ. ಆದರೆ ಭಾಗ್ಯ, ಶಕುಂತಲಾ ಕೈ ಗಟ್ಟಿಯಾಗಿ ಹಿಡಿದು ಅವಾಜ್‌ ಹಾಕಿದ್ದಾರೆ. ಇನ್ನು ಮೇಲೆ ನಿನ್ನ ಕೇಡುಗಾಲ ಶುರುವಾಯ್ತು ಅಂತ ಹೇಳಿದ್ದಾರೆ. ಭಾಗ್ಯಮ್ಮ ಮಾತಾಡೋದು ನೋಡಿ ಶಕುಂತಲಾ ಶಾಕ್‌ ಆಗಿದ್ದಾಳೆ.

ಹಾಗಿದ್ದರೆ ಭೂಮಿಕಾ- ಗೌತಮ್​ ಒಂದಾಗಿ ಮತ್ತೆ ಜೈದೇವ್‌ಗೆ ಬುದ್ಧಿ ಕಲಿಸ್ತಾರಾ? ಜೈದೇವ ಹತ್ರ ಆಸ್ತಿ ಬರೆಸಿಕೊಂಡು ಎರಡನೇ ಪತ್ನಿ ಮತ್ತೆ ಕುತಂತ್ರ ಮಾಡ್ತಾಳಾ? ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕನ್ನಡ ಕಿರುತೆರೆ ನಟಿ ಮೆಚ್ಚುಗೆ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ