ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಭೂಮಿಕಾ ಗೌತಮ್‌ ಒಂದಾದ ಬೆನ್ನಲ್ಲೇ ಜೈದೇವ್‌ಗೆ ಬಂತಾ ಕೇಡುಗಾಲ? ಏನಿದು ಟ್ವಿಸ್ಟ್‌?

Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಂಡು ವೀಕ್ಷಕರು ಫಿದಾ ಆಗಿದ್ದಾರೆ. ಕಾರಣ ಭೂಮಿ ಹಾಗೂ ಗೌತಮ್‌ ಈಗ ಒಂದಾಗಿದ್ದಾರೆ. ಐದು ವರ್ಷಗಳಿಂದ ದೂರವಿದ್ದ ಗೌತಮ್ ಮತ್ತು ಭೂಮಿಕಾ ಇದೀಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವಠಾರಕ್ಕೆ ಬಂದಿರುವ ತಂದೆ ಸದಾಶಿವ ಅವರ ಮಾತಿಗೆ ಒಪ್ಪಿ, ಭೂಮಿಕಾ ಮತ್ತೆ ಗೌತಮ್ ಜೊತೆ ಜೀವನ ನಡೆಸಲು ಮುಂದಾಗಿದ್ದಾಳೆ.

ಭೂಮಿಕಾ ಗೌತಮ್‌ ಒಂದಾದ ಬೆನ್ನಲ್ಲೇ ಜೈದೇವ್‌ಗೆ ಬಂತಾ ಕೇಡುಗಾಲ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jan 25, 2026 7:07 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (Amruthadhaare Serial) ಕಂಡು ವೀಕ್ಷಕರು ಫಿದಾ ಆಗಿದ್ದಾರೆ. ಕಾರಣ ಭೂಮಿ (Bhoomika) ಹಾಗೂ ಗೌತಮ್‌ (Gowtham) ಈಗ ಒಂದಾಗಿದ್ದಾರೆ. ಐದು ವರ್ಷಗಳಿಂದ ದೂರವಿದ್ದ ಗೌತಮ್ ಮತ್ತು ಭೂಮಿಕಾ ಇದೀಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವಠಾರಕ್ಕೆ ಬಂದಿರುವ ತಂದೆ ಸದಾಶಿವ ಅವರ ಮಾತಿಗೆ ಒಪ್ಪಿ, ಭೂಮಿಕಾ ಮತ್ತೆ ಗೌತಮ್ ಜೊತೆ ಜೀವನ ನಡೆಸಲು ಮುಂದಾಗಿದ್ದಾಳೆ. ಒಟ್ಟಿಗೆ ಪೂಜೆ ಕೂಡ ಮಾಡಿ ಅಂತೂ ಒಂದಾದರು. ಇದರ ಬೆನ್ನಲ್ಲೇ ಕೆಡಿ ಜೈದೇವ್‌ಗೆ (Jaidev) ಎಡಗಣ್ಣು ಹೊಡೆದುಕೊಳ್ಳಲು ಶುರು ಆಗಿದೆ. ಅಪಶಕುಮ ಇರಬೋದಾ ಅಂತ ಶಾಕ್‌ ಆಗಿದ್ದಾನೆ.

ಸೀತಾರಾಮ ಕಲ್ಯಾಣ

ಗೌತಮ್‌ ಹಾಗೂ ಭೂಮಿಕಾ ವಠಾರದಲ್ಲಿ ಸೀತಾರಾಮ ಕಲ್ಯಾಣ ಆಯೋಜಿಸಲಾಗಿತ್ತು. ಭೂಮಿ ಮನೆಯವರು, ಗೌತಮ್‌ ತಾಯಿ, ಅಜ್ಜಿ, ಆನಂದ್-ಅಪರ್ಣಾ ಕೂಡ ಈ ಸಮಾರಂಭಕ್ಕೆ ಬಂದಿದ್ದರು. ಮಿಂಚು ಮತ್ತು ಅಪ್ಪು ಜೊತೆ ವಠಾರಕ್ಕೆ ಬಂದಿರುವ ಸದಾಶಿವ, ಮಗಳು ಭೂಮಿಕಾಳನ್ನು ನೋಡಿ ಭಾವುಕರಾಗಿದ್ದಾರೆ. ಹಾಗೆಯೇ ಅಪ್ಪು ತನ್ನ ಮೊಮ್ಮಗ ಎಂಬ ಸತ್ಯ ತಿಳಿದು ಸದಾಶಿವ ಖುಷಿಯಾಗಿದ್ದಾರೆ.

ಇದನ್ನೂ ಓದಿ: Anusha Hegde: 'ರಾಧಾ ರಮಣ ಧಾರಾವಾಹಿ' ಖ್ಯಾತಿಯ ನಟಿ ಅನುಷಾ ಹೆಗಡೆ ಬದುಕಲ್ಲಿ ಬಿರುಗಾಳಿ! ಡಿವೋರ್ಸ್ ಘೋಷಿಸಿದ ನಟಿ

ಜೈದೇವ್‌ಗೆ ಬಂತಾ ಕೇಡುಗಾಲ!

ಅತ್ತ ಜೈದೇವ್‌ಗೆ ಎಡಗಣ್ಣು ಹೊಡೆದುಕೊಳ್ಳುತ್ತಿದೆ. ಈ ಬಗ್ಗೆ ಜೈದೇವ್‌ ಪತ್ನಿ ದಿಯಾ ಜೊತೆ ಗಾಬರಿಯಾಗಿ ಚರ್ಚಿಸಿದ್ದಾನೆ. ಆದರೆ ದಿಯಾ, ಇದೆಲ್ಲ ಈಗಲೂ ನಂಬ್ತೀಯಾ ಅಂತ ಕಾಮಿಡಿ ಮಾಡಿದ್ದಾಳೆ. ಜಯದೇವ್‌ಗೆ ಗತಿ ಕಾಣಿಸಬೇಕು ಎಂದು ಅವನ ಎರಡನೇ ಪತ್ನಿ ದಿಯಾ ಕೂಡ ಪ್ಲ್ಯಾನ್‌ ಮಾಡಿದ್ದಾಳೆ.

ಇನ್ನೊಂದು ಕಡೆ ಜೈದೇವ್‌ ಮಾವನ ಬಳಿ ಪ್ರಸ್ತಾಪಿಸಿದಾಗ, ಅತ್ತ ಭೂಮಿ, ಗೌತಮ್‌ ಒಂದಾದ ಮೇಲೆ ಜೈದೇವ್‌ಗೆ ತಪ್ಪಿದಲ್ಲ ಅಂತ ಮನದಲ್ಲೇ ಊಹಿಸಿದ್ದಾನೆ. ಒಟ್ಟಿನಲ್ಲಿ ಮುಂದೆ ಜಯದೇವ್‌ ಹಾಗೂ ಶಕುಂತಲಾರಿಂದ ಏನೆಲ್ಲ ಸಮಸ್ಯೆ ಆಗಿದೆ ತನ್ನ ಮಗ ಆಕಾಶ್‌ಗೂ ಕೂಡ ಅಪಾಯ ಆಗುತ್ತಿತ್ತು ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಮುಂದಿನ ಎಪಿಸೋಡ್‌ನಲ್ಲಿ ಜೈದೇವ್‌ ಏನು ಪ್ಲ್ಯಾನ್‌ ಮಾಡ್ತಾನೆ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ