85 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಕ್ತಾಯಗೊಳಿದ ಭಾರತ
Asian Games 2026: ಕಳೆದ ಬಾರಿ ಭಾರತದ 661 ಮಂದಿ ಚೀನಾದ ಹ್ಯಾಂಗ್ಝೋ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. ಭಾರತ 28 ಚಿನ್ನ ಸೇರಿ 106 ಪದಕ ಗೆದ್ದಿತ್ತು. ಅದು ಏಷ್ಯಾಡ್ ಇತಿಹಾಸದಲ್ಲೇ ಭಾರತ ಗೆದ್ದ ಅತಿ ಹೆಚ್ಚು ಪದಕ. ಭಾರತ 4ನೇ ಸ್ಥಾನಿಯಾಗಿತ್ತು.
India finish Asian Games -
ನಗೋಯಾ, ಅ.4: ಮಿನಿ ಒಲಿಂಪಿಕ್ಸ್ ಖ್ಯಾತಿಯ, 20ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಸ್ಪರ್ಧೆಗಳು ಶನಿವಾರ ಮುಕ್ತಾಯಗೊಂಡವು ಇಂದು(ಭಾನುವಾರ) ಸಮಾರೋಪ ಸಮಾರಂಭ ನಡೆಯಲಿದೆ. ಈ ಮೂಲಕ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಭಾರತವು ಒಟ್ಟು 85 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು. ಈ ಸಂಖ್ಯೆಯು 2022ರ ಆವೃತ್ತಿಗಿಂತ 21 ಪದಕಗಳು ಕಡಿಮೆಯಾಗಿದೆ. ಐಚಿ-ನಗೋಯಾದಲ್ಲಿನ ಭಾರತದ ಅಭಿಯಾನಕ್ಕೆ ಸಂಬಂಧಿಸಿದ ಪ್ರಮುಖ ಅಂಕಿಅಂಶಗಳು ಇಲ್ಲಿವೆ.
ಕಳೆದ ಬಾರಿ ಭಾರತದ 661 ಮಂದಿ ಚೀನಾದ ಹ್ಯಾಂಗ್ಝೋ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. ಭಾರತ 28 ಚಿನ್ನ ಸೇರಿ 106 ಪದಕ ಗೆದ್ದಿತ್ತು. ಅದು ಏಷ್ಯಾಡ್ ಇತಿಹಾಸದಲ್ಲೇ ಭಾರತ ಗೆದ್ದ ಅತಿ ಹೆಚ್ಚು ಪದಕ. ಭಾರತ 4ನೇ ಸ್ಥಾನಿಯಾಗಿತ್ತು. ಈ ಬಾರಿ 85 ಪದಕದೊಂದಿಗೆ 5ನೇ ಸ್ಥಾನಿಯಾಯಿತು. ಭಾರತ ಈವರೆಗಿನ ಆವೃತ್ತಿಗಳ ಪೈಕಿ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದು 2 ಬಾರಿ ಮಾತ್ರ. 1951ರಲ್ಲಿ 2ನೇ, 1962ರಲ್ಲಿ 3ನೇ ಸ್ಥಾನಿಯಾಗಿತ್ತು.
ಗುರುವಾರದವರೆಗೂ, ಕೇವಲ 10 ಚಿನ್ನದ ಪದಕಗಳೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ ಅಗ್ರ 10ರ ಹೊರಗಿತ್ತು. ಆದರೆ ಕೊನೆಯ ಎರಡು ದಿನಗಳಲ್ಲಿ, ಹಾಕಿ ಮತ್ತು ಕ್ರಿಕೆಟ್ ತಂಡಗಳು ಚಿನ್ನದ ಪದಕಗಳನ್ನು ಗೆದ್ದುಕೊಂಡವು. ಜೊತೆಗೆ ಬಿಲ್ಲುಗಾರಿಕೆ, ಬಾಕ್ಸಿಂಗ್ ಮತ್ತು ಕುಸ್ತಿಯಲ್ಲೂ ಭಾರತವು ಅದ್ಭುತ ಫಲಿತಾಂಶಗಳನ್ನು ದಾಖಲಿಸಿತು. ಈ ಅಂತಿಮ ಹಂತದ ಭರ್ಜರಿ ಪ್ರದರ್ಶನವು ಇನ್ನೂ 11 ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಲ್ಲದೆ, ಭಾರತವನ್ನು ಅಗ್ರ ಐದು ಸ್ಥಾನಗಳೊಳಗೆ ತಲುಪಿಸಿತು.
ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ
ಚಿನ್ನ ಗೆದ್ದವರು
ಕ್ರಿಕೆಟ್; ಟೀಮ್ ಇಂಡಿಯಾ ಮಹಿಳೆಯರು
ಕಮಲಜೀತ್, ಸುರುಚಿ ಸಿಂಗ್ - ಶೂಟಿಂಗ್, ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್
ಟೀಮ್ ಇಂಡಿಯಾ - ಕಬಡ್ಡಿ, ಮಹಿಳೆಯರ ಈವೆಂಟ್
ಟೀಮ್ ಇಂಡಿಯಾ- ಕಬಡ್ಡಿ, ಪುರುಷರ ಈವೆಂಟ್
ನೀರು ಧಂಡಾ - ಶೂಟಿಂಗ್
ಕಿರಣ್ ಪಹಲ್, ಪೂವಮ್ಮ ಎಂಆರ್, ಪ್ರಾಚಿ ಚೌಧರಿ, ವಿತ್ಯಾ ರಾಮರಾಜ್ - ಅಥ್ಲೆಟಿಕ್ಸ್, ಮಹಿಳೆಯರ 4x400 ಮೀ ರಿಲೇ
ಜ್ಯೋತಿ ಸುರೇಖಾ ವೆನ್ನಂ, ಪ್ರಿತಿಕಾ ಪ್ರದೀಪ್, ಚಿಕಿತಾ ತಾನಿಪರ್ತಿ-ಬಿಲ್ಲುಗಾರಿಕೆ
ಚಿಕಿತಾ ತಾನಿಪರ್ತಿ, ಸಾಹಿಲ್ ಜಾಧವ್ - ಬಿಲ್ಲುಗಾರಿಕೆ, ಮಿಶ್ರ ತಂಡ
ಕೈನಾನ್ ಚೆನೈ, ನೀರು ದಂಡಾ - ಶೂಟಿಂಗ್
ಸಾಹಿಲ್ ಜಾಧವ್, ಗಣೇಶ್ ಮಣಿರತ್ನಂ ತಿರುಮುರು, ಕುಶಾಲ್ ದಲಾಲ್ — ಬಿಲ್ಲುಗಾರಿಕೆ
ಅಂಕಿತಾ ಭಕತ್, ಕುಂಕುಮ್ ಮೊಹದ್, ಕೀರ್ತಿ ಶರ್ಮಾ- ಬಿಲ್ಲುಗಾರಿಕೆ, ಮಹಿಳಾ ತಂಡ ರಿಕರ್ವ್
ಲೊವ್ಲಿನಾ ಬೊರ್ಗೊಹೈನ್ - ಬಾಕ್ಸಿಂಗ್, ಮಹಿಳೆಯರ 75 ಕೆ.ಜಿ
ಪರ್ವೀನ್ ಹೂಡಾ - ಬಾಕ್ಸಿಂಗ್, ಮಹಿಳೆಯರ 65 ಕೆ.ಜಿ
ಅಂಕುಶ್ ಪಂಗಲ್ - ಬಾಕ್ಸಿಂಗ್, ಪುರುಷರ 80 ಕೆ.ಜಿ
ಸುಜೀತ್ ಕಲ್ಕಲ್ - ಕುಸ್ತಿ, ಪುರುಷರ 65 ಕೆ.ಜಿ
ಟೀಮ್ ಇಂಡಿಯಾ- ಹಾಕಿ, ಮಹಿಳಾ ವಿಭಾಗ
ಕುಂಕುಮ್ ಮೋಹೋದ್- ಬಿಲ್ಲುಗಾರಿಕೆ, ಮಹಿಳೆಯರ ವೈಯಕ್ತಿಕ ರಿಕರ್ವ್
ಪ್ರಣವಿ ಅರಸ್- ಗಾಲ್ಫ್, ಮಹಿಳೆಯರ ವೈಯಕ್ತಿಕ ವಿಭಾಗ
ಟೀಮ್ ಇಂಡಿಯಾ- ಕ್ರಿಕೆಟ್, ಪುರುಷರ ವಿಭಾಗ
ಅಮನ್ ಸೆಹ್ರಾವತ್- ಕುಸ್ತಿ, ಪುರುಷರ 57 ಕೆಜಿ ವಿಭಾಗ
ಟೀಮ್ ಇಂಡಿಯಾ- ಹಾಕಿ, ಪುರುಷರ ವಿಭಾಗ
IND vs WI: ಐದನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್!
ಬೆಳ್ಳಿ
ಎಲವೇನಿಲ್ ವಲರಿವನ್, ಸೋನಮ್ ಮಾಸ್ಕರ್, ವಿದರ್ಶಾ ವಿನೋದ್ — ಶೂಟಿಂಗ್, ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ
ಎಲವೇನಿಲ್ ವಲರಿವನ್ — ಶೂಟಿಂಗ್, ಮಹಿಳೆಯರ 10 ಮೀಟರ್ ಏರ್ ರೈಫಲ್
ರುದ್ರಾಂಕ್ಷ್ ಪಾಟೀಲ್, ಪಾರ್ಥ್ ಮಾನೆ, ಹಿಮಾಂಶು ಧಿಲ್ಲೋನ್ — ಶೂಟಿಂಗ್, ಪುರುಷರ 10 ಮೀಟರ್ ಏರ್ ರೈಫಲ್ ತಂಡ
ಹಿಮಾಂಶು ಧಿಲ್ಲೋನ್ — ಶೂಟಿಂಗ್, ಪುರುಷರ 10 ಮೀಟರ್ ಏರ್ ರೈಫಲ್
ಮೀರಾಬಾಯಿ ಚಾನು — ವೇಟ್‌ಲಿಫ್ಟಿಂಗ್, ಮಹಿಳೆಯರ 49 ಕೆಜಿ ವಿಭಾಗ
ರೋಶಿಬಿನಾ ದೇವಿ — ವುಶು, ಮಹಿಳೆಯರ 60 ಕೆಜಿ ಸಾಂಡಾ ವಿಭಾಗ
ಟೀಮ್ ಇಂಡಿಯಾ — ಅಥ್ಲೆಟಿಕ್ಸ್, ಮಿಶ್ರ 4x400 ಮೀಟರ್ ರಿಲೇ
ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ರುದ್ರಾಂಕ್ಷ್ ಪಾಟೀಲ್, ನೀರಜ್ ಕುಮಾರ್ — ಶೂಟಿಂಗ್, ಪುರುಷರ 50 ಮೀಟರ್ ರೈಫಲ್ 3P ತಂಡ
ಗುಲ್ವೀರ್ ಸಿಂಗ್ — ಅಥ್ಲೆಟಿಕ್ಸ್, ಪುರುಷರ 10,000 ಮೀಟರ್ ಓಟ
ಸಾವನ್ ಬರ್ವಾಲ್ - ಅಥ್ಲೆಟಿಕ್ಸ್, ಪುರುಷರ ಮ್ಯಾರಥಾನ್
ವಿದರ್ಶ ವಿನೋದ್, ಆಶಿ ಚೌಕ್ಸೆ, ತಿಲೋತ್ತಮ ಸೇನ್ - ಶೂಟಿಂಗ್, ಮಹಿಳೆಯರ 50 ಮೀ ರೈಫಲ್ 3P ತಂಡ
ತಜಿಂದರ್ಪಾಲ್ ಸಿಂಗ್ ತೂರ್ - ಅಥ್ಲೆಟಿಕ್ಸ್, ಶಾಟ್ ಪುಟ್
ಅಭಯ್ ಸಿಂಗ್ - ಸ್ಕ್ವಾಷ್, ಪುರುಷರ ಸಿಂಗಲ್ಸ್
ಅನಾಹತ್ ಸಿಂಗ್ - ಸ್ಕ್ವಾಷ್, ಮಹಿಳೆಯರ ಸಿಂಗಲ್ಸ್
ಆನ್ಸಿ ಸೋಜನ್ - ಅಥ್ಲೆಟಿಕ್ಸ್, ಮಹಿಳೆಯರ ಲಾಂಗ್ ಜಂಪ್
ಸರ್ವೇಶ್ ಕುಶಾರೆ - ಅಥ್ಲೆಟಿಕ್ಸ್, ಪುರುಷರ ಎತ್ತರ ಜಿಗಿತ
ಇಶಾ ಸಿಂಗ್ - ಶೂಟಿಂಗ್, ಮಹಿಳೆಯರ 25 ಮೀ ಪಿಸ್ತೂಲ್
ಗುಲ್ವೀರ್ ಸಿಂಗ್ - ಅಥ್ಲೆಟಿಕ್ಸ್, ಪುರುಷರ 1500 ಮೀ
ಮುರಳಿ ಶ್ರೀಶಂಕರ್ - ಅಥ್ಲೆಟಿಕ್ಸ್, ಪುರುಷರ ಲಾಂಗ್ ಜಂಪ್
ಯಶ್ ವೀರ್ ಸಿಂಗ್ - ಅಥ್ಲೆಟಿಕ್ಸ್, ಪುರುಷರ ಜಾವೆಲಿನ್ ಎಸೆತ
ನೀರು ದಂಡಾ, ಮನಿಶಾ ಕೀರ್, ಆಶಿಮಾ ಅಹ್ಲಾವತ್ - ಶೂಟಿಂಗ್, ಮಹಿಳಾ ಟ್ರ್ಯಾಪ್ ತಂಡ
ಪ್ರಿನ್ಸ್ ಕುರಿಸಿಂಕಲ್ ನೋಬಲ್, ಮನು ಫ್ರಾನ್ಸಿಸ್ - ನೌಕಾಯಾನ, ಪುರುಷರ ಸ್ಕಿಫ್
ನಿತೇಶ್ ಕುಮಾರ್ - ಕುಸ್ತಿ, ಗ್ರೀಕೋ-ರೋಮನ್ 97 ಕೆ.ಜಿ
ಕುಂಕುಮ್ ಮೊಹೋದ್, ಧೀರಜ್ ಬೊಮ್ಮದೇವರ - ಬಿಲ್ಲುಗಾರಿಕೆ, ಮಿಶ್ರ ತಂಡ ರಿಕರ್ವ್
ಧೀರಜ್ ಬೊಮ್ಮದೇವರ, ನೀರಜ್ ಚೌಹಾಣ್, ಯಶದೀಪ್ ಭೋಗೆ — ಬಿಲ್ಲುಗಾರಿಕೆ, ಪುರುಷರ ತಂಡ
ಪ್ರಣವಿ ಅರಸ್, ಅದಿತಿ ಅಶೋಕ್, ದೀಕ್ಷಾ ದಾಗರ್ - ಗಾಲ್ಫ್, ಮಹಿಳಾ ತಂಡ
ಅಂಟಿಮ್ ಪಂಗಲ್ - ಕುಸ್ತಿ, ಮಹಿಳೆಯರ 53 ಕೆ.ಜಿ
IND vs WI: ವಿಂಡೀಸ್‌ಗೆ ಜಯ ತಂದುಕೊಟ್ಟ ಶೇಯ್ ಹೋಪ್, 3ನೇ ಪಂದ್ಯ ಸೋತರೂ ಏಕದಿನ ಸರಣಿ ಗೆದ್ದ ಭಾರತ!
ಕಂಚು
ರುದ್ರಂಕ್ಷ್ ಪಾಟೀಲ್ - ಶೂಟಿಂಗ್, ಪುರುಷರ 10 ಮೀ ಏರ್ ರೈಫಲ್
ಸುಚಿಕಾ ತರಿಯಾಲ್ - ಮಿಶ್ರ ಸಮರ ಕಲೆಗಳು, ಮಹಿಳೆಯರ ಸಾಂಪ್ರದಾಯಿಕ -60 ಕೆ.ಜಿ
ಪರಿನಾಜ್ ಧಲಿವಾಲ್, ರೈಜಾ ಧಿಲ್ಲೋನ್, ಮಹೇಶ್ವರಿ ಚೌಹಾಣ್ - ಶೂಟಿಂಗ್, ಮಹಿಳಾ ಸ್ಕೀಟ್ ತಂಡ
ಅನಂತಜೀತ್ ಸಿಂಗ್ ನರುಕಾ, ಭಾವತೇಗ್ ಸಿಂಗ್ ಗಿಲ್, ಮೈರಾಜ್ ಅಹ್ಮದ್ ಖಾನ್ — ಶೂಟಿಂಗ್, ಪುರುಷರ ಸ್ಕೀಟ್ ತಂಡ
ಜೇ ಮೀನಾ - ಸಾಫ್ಟ್ ಟೆನಿಸ್, ಪುರುಷರ ಸಿಂಗಲ್ಸ್
ಟೀಮ್ ಇಂಡಿಯಾ — ಬ್ಯಾಡ್ಮಿಂಟನ್, ಪುರುಷರ ತಂಡ
ಸತ್ನಮ್ ಸಿಂಗ್, ಸಲ್ಮಾನ್ ಖಾನ್ - ರೋಯಿಂಗ್, ಪುರುಷರ ಡಬಲ್ ಸ್ಕಲ್ಸ್
ಅನಂತಜೀತ್ ಸಿಂಗ್ ನರುಕಾ, ಪರಿನಾಜ್ ಧಲಿವಾಲ್ - ಶೂಟಿಂಗ್, ಮಿಕ್ಸೆಡ್ ಸ್ಕೀಟ್ ತಂಡ
ಸೀಮಾ ಕುಮಾರಿ - ಅಥ್ಲೆಟಿಕ್ಸ್, ಮಹಿಳೆಯರ 10,000 ಮೀ
ದಿಯಾ ಚಿತಾಲೆ, ಮನುಷ್ ಶಾ - ಟೇಬಲ್ ಟೆನಿಸ್, ಮಿಶ್ರ ಡಬಲ್ಸ್
ಮನ್‌ಪ್ರೀತ್ ಕೌರ್ - ಅಥ್ಲೆಟಿಕ್ಸ್, ಶಾಟ್‌ಪುಟ್
ಬಾರಾನಿಕಾ ಇಲಂಗೋವನ್ - ಅಥ್ಲೆಟಿಕ್ಸ್, ಮಹಿಳೆಯರ ಪೋಲ್ ವಾಲ್ಟ್
ಜೋಷ್ನಾ ಚಿನಪ್ಪ, ವೆಲವನ್ ಸೆಂಥಿಲ್‌ಕುಮಾರ್ - ಸ್ಕ್ವಾಷ್, ಮಿಶ್ರ ಡಬಲ್ಸ್
ಪ್ರಾಚಿ ಚೌಧರಿ - ಅಥ್ಲೆಟಿಕ್ಸ್, ಮಹಿಳೆಯರ 400 ಮೀ
ಹರಿತಾ ಭದ್ರ - ಅಥ್ಲೆಟಿಕ್ಸ್, ಮಹಿಳೆಯರ 200 ಮೀ
ತೇಜಸ್ವಿನ್ ಶಂಕರ್ - ಅಥ್ಲೆಟಿಕ್ಸ್, ಡೆಕಾಥ್ಲಾನ್
ಪಾರುಲ್ ಚೌಧರಿ - ಅಥ್ಲೆಟಿಕ್ಸ್, ಮಹಿಳೆಯರ 3000ಮೀ ಸ್ಟೀಪಲ್‌ಚೇಸ್
ಪಿಂಕಿ ಬಲ್ಹರಾ - ಕುರಾಶ್, ಮಹಿಳೆಯರ -78 ಕೆ.ಜಿ
ವಿತ್ಯಾ ರಾಮರಾಜ್ - ಅಥ್ಲೆಟಿಕ್ಸ್, ಮಹಿಳೆಯರ 400 ಮೀ ಹರ್ಡಲ್ಸ್
ಪಾರುಲ್ ಚೌಧರಿ - ಅಥ್ಲೆಟಿಕ್ಸ್, ಮಹಿಳೆಯರ 5000 ಮೀ
ರೋಹಿತ್ ಯಾದವ್ - ಅಥ್ಲೆಟಿಕ್ಸ್, ಪುರುಷರ ಜಾವೆಲಿನ್ ಎಸೆತ
ನರೇಂದರ್ ಬರ್ವಾಲ್ - ಬಾಕ್ಸಿಂಗ್, ಪುರುಷರ +90 ಕೆ.ಜಿ
ಗುಲ್ವೀರ್ ಸಿಂಗ್ - ಅಥ್ಲೆಟಿಕ್ಸ್, ಪುರುಷರ 5000 ಮೀ
ಗುರಿಂದರ್‌ವೀರ್ ಸಿಂಗ್, ಸ್ನೇಹಾ ಎಸ್‌ಎಸ್, ಅನಿಮೇಶ್ ಕುಜೂರ್, ಹರಿತಾ ಭದ್ರ — ಅಥ್ಲೆಟಿಕ್ಸ್, ಮಿಶ್ರ 4x100ಮೀ ರಿಲೇ
ಪೂಜಾ ಸಿಂಗ್ - ಅಥ್ಲೆಟಿಕ್ಸ್, ಮಹಿಳೆಯರ ಎತ್ತರ ಜಿಗಿತ
ಧರ್ಮವೀರ್ ಚೌಧರಿ, ಮನು ಟಿಎಸ್, ಜಯ್ ಕುಮಾರ್, ವಿಶಾಲ್ ಟಿಕೆ - ಅಥ್ಲೆಟಿಕ್ಸ್, ಪುರುಷರ 4x400 ಮೀ ರಿಲೇ
ಪ್ರಿಯಾ ಘಂಘಾಸ್ - ಬಾಕ್ಸಿಂಗ್, ಮಹಿಳೆಯರ 60 ಕೆ.ಜಿ
ಕಪಿಲ್ ಪೋಖಾರಿಯಾ - ಬಾಕ್ಸಿಂಗ್, ಪುರುಷರ 90 ಕೆ.ಜಿ
ಸುನಿಲ್ ಕುಮಾರ್ - ಕುಸ್ತಿ, ಗ್ರೀಕೋ-ರೋಮನ್ 87 ಕೆ.ಜಿ
ಅನಾಹತ್ ಸಿಂಗ್, ಜೋಶನಾ ಚಿನಪ್ಪ, ತನ್ವಿ ಖನ್ನಾ, ಶಮೀನಾ ರಿಯಾಜ್ - ಸ್ಕ್ವಾಷ್, ಮಹಿಳಾ ತಂಡ
ಹರ್ಷಿತಾ ತೋಮರ್, ಶೀತಲ್ ವರ್ಮಾ - ಸೈಲಿಂಗ್, ಮಹಿಳಾ ಸ್ಕಿಫ್
ನೇತ್ರ ಕುಮನನ್ - ನೌಕಾಯಾನ, ಮಹಿಳಾ ಡಿಂಗಿ
ಟೀಮ್ ಇಂಡಿಯಾ — ಸೆಪಾಕ್ ಟಕ್ರಾವ್, ಪುರುಷರ ಕ್ವಾಡ್ರಂಟ್
ಗಣೇಶ್ ಮಣಿರತ್ನಂ ತಿರುಮುರು - ಬಿಲ್ಲುಗಾರಿಕೆ, ಪುರುಷರ ಸಂಯುಕ್ತ ವೈಯಕ್ತಿಕ
ಅಭಯ್ ಸಿಂಗ್, ವೀರ್ ಚೋತ್ರಾಣಿ, ವೆಲವನ್ ಸೆಂಥಿಲ್‌ಕುಮಾರ್, ಸೂರಜ್ ಕುಮಾರ್ ಚಂದ್ — ಸ್ಕ್ವಾಷ್, ಪುರುಷರ ತಂಡ
ನೀರಜ್ ಚೌಹಾಣ್ - ಬಿಲ್ಲುಗಾರಿಕೆ, ಪುರುಷರ ವೈಯಕ್ತಿಕ ರಿಕರ್ವ್
ದೀಪಕ್ ಪುನಿಯಾ - ಕುಸ್ತಿ, ಪುರುಷರ 97 ಕೆ.ಜಿ