ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

ಕರ್ನಾಟಕದ ಸಂಸ್ಕೃತಿಯನ್ನು ದೇಶದಲ್ಲೇ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಪರಿಚಯಿಸಿದ ಕೀರ್ತಿ ರಿಷಬ್ ಶೆಟ್ಟರಿಗೆ ಸಲ್ಲುತ್ತದೆ. ಏಕತಾನತೆಯಲ್ಲಿ ಬಳಲುತ್ತಿದ್ದ ಭಾರತೀಯ ಚಿತ್ರರಂಗಕ್ಕೆ ಹೊಸ ಹಮ್ಮಸ್ಸು, ಹೊಸ ರೂಪ ಕೊಟ್ಟ ರಿಷಬ್ ಶೆಟ್ಟರು ತುಳುನಾಡಿನ ಭೂತಕೋಲ, ಕಂಬಳ ಮಾತ್ರವಲ್ಲದೆ ತುಳುನಾಡಿನ ಇತಿಹಾಸದ ತುಣುಕುಗಳನ್ನು ಪ್ರಕೃತಿ ರಮಣೀಯತೆಯನ್ನು ಸಿನಿಮಾದಲ್ಲಿ ಸುಂದರವಾಗಿ ತೋರಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದರು.

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

-

Ashok Nayak Ashok Nayak Nov 1, 2025 9:00 AM

ಜಿತೇಂದ್ರ ಕುಂದೇಶ್ವರ, ಮಂಗಳೂರು

ಭಾರತದ ನಂ.೧ ಜನಪ್ರಿಯ ಸೆಲೆಬ್ರಿಟಿ ತಾರಾ ಪಟ್ಟ ರಿಷಬ್ ಶೆಟ್ಟಿ ಮುಡಿಗೆ ಕರ್ನಾಟಕದ ಸಿನಿಮಾ ರಂಗದಲ್ಲಿ ಪಡಿಮೂಡಿದ ಹೆಮ್ಮೆಯ ಕನ್ನಡಿಗ

ಕರ್ನಾಟಕದ ಸಂಸ್ಕೃತಿಯನ್ನು ದೇಶದಲ್ಲೇ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಪರಿಚಯಿಸಿದ ಕೀರ್ತಿ ರಿಷಬ್ ಶೆಟ್ಟರಿಗೆ ಸಲ್ಲುತ್ತದೆ. ಏಕತಾನತೆಯಲ್ಲಿ ಬಳಲುತ್ತಿದ್ದ ಭಾರತೀಯ ಚಿತ್ರರಂಗಕ್ಕೆ ಹೊಸ ಹಮ್ಮಸ್ಸು, ಹೊಸ ರೂಪ ಕೊಟ್ಟ ರಿಷಬ್ ಶೆಟ್ಟರು ತುಳುನಾಡಿನ ಭೂತಕೋಲ, ಕಂಬಳ ಮಾತ್ರವಲ್ಲದೆ ತುಳುನಾಡಿನ ಇತಿಹಾಸದ ತುಣುಕುಗಳನ್ನು ಪ್ರಕೃತಿ ರಮಣೀಯತೆಯನ್ನು ಸಿನಿಮಾದಲ್ಲಿ ಸುಂದರವಾಗಿ ತೋರಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದರು. ಇವರು ಕರ್ನಾಟಕದ ಸಿನಿಮಾ ರಂಗದಲ್ಲಿ ಪಡಿಮೂಡಿದ ಹೆಮ್ಮೆಯ ಕನ್ನಡಿಗ.

ಹೆಮ್ಮೆಯ ಕನ್ನಡಿಗ: 2006ರಲ್ಲಿ ಕ್ಲ್ಯಾಪ್ ಬಾಯ್ ಆಗಿ ಏಟು ತಿಂದಿದ್ದ ಕುಂದಾಪುರ ಕನ್ನಡದ ಹುಡುಗ ಪ್ರಶಾಂತ್, 2025ರಲ್ಲಿ ದೇಶವೇ ಹೆಮ್ಮೆ ಪಡುವಂತಹ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಆಗಿ ಬೆಳೆದಿದ್ದಾರೆ. ಇಂಟರ್‌ನೆಟ್ ಮೂವೀ ಡೇಟಾಬೇಸ್ ಸಂಸ್ಥೆ ಪ್ರತಿ ವಾರ ಭಾರತದಲ್ಲಿರುವ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಗೊಳಿಸುತ್ತದೆ. ಇದರಲ್ಲಿ ಭಾರತದ ನಂ.೧ ಜನಪ್ರಿಯ ಸೆಲೆಬ್ರಿಟಿ ತಾರಾಪಟ್ಟ ರಿಷಬ್ ಶೆಟ್ಟಿಗೆ ಒಲಿದಿದೆ.

ಇದನ್ನೂ ಓದಿ: Pragathi Rishab Shetty: ದೀಪಾವಳಿ ವೇಳೆ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ 'ಕಾಂತಾರ ಚಾಪ್ಟರ್‌ 1', ರಿಷಬ್‌ ಶೆಟ್ಟಿ ಮನೆಯಲ್ಲಿ ಡಬಲ್‌ ಸಂಭ್ರಮ

ಕುಂದಾಪುರದ ಕೆರಾಡಿಯಲ್ಲಿ 1983ರಲ್ಲಿ ಜನಿಸಿದ ರಿಷಬ್ ಶೆಟ್ಟಿ (ಪ್ರಶಾಂತ್ ಶೆಟ್ಟಿ) ಗೆ ಸಿನಿಮಾ ಸೆಳೆತ. ಇದೇ ಆಸೆಯಲ್ಲಿ ಬೆಂಗಳೂರಿಗೆ ಬಂದಿದ್ದ ರಿಷಬ್ ಆರಂಭದಲ್ಲಿ ವಾಟರ್ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದರು. 2005-06ರಲ್ಲಿ ‘ಸೈನೆಡ್’ ಸಿನಿಮಾದ ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ಬಳಿಕ ರವಿ ಶ್ರೀವತ್ಸ ಅವರ ‘ಗಂಡ ಹೆಂಡತಿ’ ಸಿನಿಮಾಗೆ ಕ್ಲ್ಯಾಪ್ ಬಾಯ್ ಆಗಿದ್ದರು.

ಕೆನ್ನೆಗೆ ಏಟು ಮಾತ್ರವಲ್ಲ ಮನಸ್ಸಿಗೂ ಆಘಾತ ಕೊಟ್ಟಿದ್ದ ದಿನಗಳವು. ವಾಟರ್ ಕ್ಯಾನ್ ವ್ಯವಹಾರ ದ ಲಾಭದ ಹಣವನ್ನು ಹೋಟೆಲ್ ಉದ್ಯಮಕ್ಕೆ ಸುರಿಯತ್ತಾರೆ. ಆದರೆ ಮೂರೇ ತಿಂಗಳಲ್ಲಿ ದುಡಿದ ಹಣವೆಲ್ಲಾ ಕರಗಿಹೋಯಿತು. ಇದರ ಮೇಲೆ ತಲೆ ಮೇಲೆ ಲಕ್ಷಾಂತರ ರು. ಸಾಲದ ಹೊರೆ. ಆದರೆ ಸಿನಿಮಾ ಹೋರಾಟ ನಡುವೆ ಜಾರಿ ಇತ್ತು. ಈ ಎಲ್ಲ ಸೋಲು ನೋವು ಮರೆಯಲು 2012ರ ಸಮಯ ದಲ್ಲಿ ‘ರಿಷಬ್ ಶೆಟ್ಟಿ’ ಎಂಬ ಹೊಸ ಹೆಸರಿನೊಂದಿಗೆ ಫೀಲ್ಡಿಗೆ ಇಳಿಯುತ್ತಾರೆ. 2016ರಲ್ಲಿ ‘ರಿಕ್ಕಿ’ ಮೂಲಕ ರಿಷಬ್ ನಿರ್ದೇಶಕರೂ ಆದರು. 2016ರ ಡಿಸೆಂಬರ್‌ನಲ್ಲಿ ‘ಕಿರಿಕ್ ಪಾರ್ಟಿ’ ಬಿಡುಗಡೆ ಯಾಗಿ ದೊಡ್ಡ ಗೆಲುವು ಸಿಗುತ್ತದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಎಂಬ ಮಕ್ಕಳ ಸಿನಿಮಾ!

ಅತ್ಯುತ್ತಮ ಚಿತ್ರ ಬಾಕ್ಸ್ ಆಫೀಸ್ ಯಶಸ್ಸಿನ ಜತೆಗೆ ರಾಷ್ಟ್ರ ಪ್ರಶಸ್ತಿ ಕೂಡ ರಿಷಬ್ ಪಾಲಿಗೆ ಭಾಗ್ಯ ದಂತೆ ಲಭಿಸುತ್ತದೆ. 2019ರಲ್ಲಿ ತೆರೆಕಂಡ ‘ಬೆಲ್ ಬಾಟಂ’ ಸಿನಿಮಾ ರಿಷಷ್ ಅವರನ್ನು ಯಶಸ್ವಿ ನಾಯಕನನ್ನಾಗಿಸಿತು.

ಪ್ಯಾನ್ ಇಂಡಿಯಾ ಸಿನಿಮಾ: ಕನ್ನಡ ಸಿನಿಮಾವಾಗಿ ತೆರೆಗೆ ಬಂದ ‘ಕಾಂತಾರ’ ನಂತರ ‘ಪ್ಯಾನ್ ಇಂಡಿಯಾ ಸಿನಿಮಾ’ ಪಟ್ಟ ಪಡೆದುಕೊಂಡಿತು. ಡಿವೈನ್ ಸ್ಟಾರ್ ಎಂಬ ಬಿರುದು ರಿಷಬ್ ಶೆಟ್ಟಿ ಹೆಸರಿನ ಜತೆ ಸೇರಿತು. ‘ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ’ ಕೂಡ ರಿಷಬ್ ಮುಡಿಗೇರಿತು. ಹೊಂಬಾಳೆ ತಂಡದ ಕಾಂತಾರ ಚಾಪ್ಟರ್-೧ ಸಿನಿಮಾ ಕೋಟಿ ಕೋಟಿ ಬಾಚಿ ರಿಷಬ್ ಶೆಟ್ಟರನ್ನು ದೇಶದಲ್ಲೇ ಮೆಗಾ ಸ್ಟಾರ್ ಮಾಡಿಸಿದೆ,