ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಟಿ20 ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

Women's T20 World Cup 2026: ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ 2020 ರ ರನ್ನರ್ಸ್ ಅಪ್ ಭಾರತ, ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, 2023 ಮತ್ತು 2024 ರ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟಿ 20 ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡಿದ ನೆದರ್ಲ್ಯಾಂಡ್ಸ್ ತಂಡಗಳಿವೆ.

ಮಹಿಳಾ ಟಿ20 ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

Women's T20 World Cup 2026 -

Abhilash BC
Abhilash BC May 17, 2026 10:19 AM

ಲಂಡನ್‌, ಮೇ 17: 2026ರ ಮಹಿಳಾ ಟಿ20 ವಿಶ್ವಕಪ್‌(Women's T20 World Cup 2026)ಗೆ ಒಂದು ತಿಂಗಳಿಗಿಂತಲೂ ಕಡಿಮೆ ಸಮಯ ಬಾಕಿ ಇದ್ದು, ಜೂನ್-ಜುಲೈನಲ್ಲಿ ಕ್ರೀಡಾ ಸಂಭ್ರಮವನ್ನು ಆಯೋಜಿಸಲು ಇಂಗ್ಲೆಂಡ್ ಉಸಿರು ಬಿಗಿಹಿಡಿದಿದೆ. ಮೊದಲ ಬಾರಿಗೆ 12 ತಂಡಗಳು ಟಿ20 ಕಿರೀಟಕ್ಕೆ ಹೋರಾಡಲು ಸಜ್ಜಾಗಿದೆ. ಆತಿಥೇಯ ಇಂಗ್ಲೆಂಡ್ ತಂಡ ಜೂನ್ 12 ರಂದು ಬರ್ಮಿಂಗ್ಹ್ಯಾಮ್, ಎಡ್ಜ್‌ಬಾಸ್ಟನ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. 24 ದಿನಗಳಲ್ಲಿ 33 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಜುಲೈ 5 ರಂದು ಐಕಾನಿಕ್ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ 2020 ರ ರನ್ನರ್ಸ್ ಅಪ್ ಭಾರತ, ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, 2023 ಮತ್ತು 2024 ರ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟಿ 20 ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡಿದ ನೆದರ್ಲ್ಯಾಂಡ್ಸ್ ತಂಡಗಳಿವೆ.

ಗುಂಪು ಬಿಯಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್, 2016 ರ ವಿಜೇತ ವೆಸ್ಟ್ ಇಂಡೀಸ್, 2009 ರ ಚಾಂಪಿಯನ್ ಇಂಗ್ಲೆಂಡ್, ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿವೆ. ಇಲ್ಲಿಯವರೆಗೆ ಘೋಷಿಸಲಾದ ಎಲ್ಲಾ ತಂಡಗಳು ಇಲ್ಲಿವೆ. ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ಮತ್ತು ಐರ್ಲೆಂಡ್‌ ಇನ್ನಷ್ಟೇ ತಮ್ಮ ತಂಡಗಳನ್ನು ಪ್ರಕಟಿಸಬೇಕಿದೆ.

ಆಸ್ಟ್ರೇಲಿಯಾ

ಸೋಫಿ ಮೊಲಿನೆಕ್ಸ್ (ನಾಯಕಿ), ನಿಕೋಲಾ ಕ್ಯಾರಿ, ಆಶ್ಲೀ ಗಾರ್ಡ್ನರ್, ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್‌ಹ್ಯಾಮ್.

ಬಾಂಗ್ಲಾದೇಶ

ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ಟರ್ (ಉಪನಾಯಕಿ), ಶರ್ಮಿನ್ ಅಕ್ಟರ್ ಸುಪ್ತಾ, ಸೋಭಾನಾ ಮೊಸ್ತರಿ, ಶೋರ್ನಾ ಅಕ್ಟರ್, ರಿತು ಮೋನಿ, ರಬೇಯಾ ಖಾನ್, ಫಾಹಿಮಾ ಖಾತುನ್, ಫರಿಹಾ ಇಸ್ಲಾಂ ತ್ರಿಸ್ನಾ, ಮಾರುಫಾ ಅಕ್ಟರ್, ಶಂಜಿದಾ ಅಕ್ಥರ್ ಮಗ್ಲಾ, ಸುಲ್ತಾನಾ ಖಾತುನ್, ತಾಜ್ ನೇರಿಯಾ ಅಕ್ಟರ್, ತಾಜ್ ನೇರಿಯಾ ಅಕ್ಟರ್.

ಭಾರತ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿಗೌಡ, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ನೆದರ್ಲ್ಯಾಂಡ್ಸ್

ಬಾಬೆಟ್ಟೆ ಡಿ ಲೀಡೆ (ನಾಯಕಿ), ಕ್ಯಾರೊಲಿನ್ ಡಿ ಲ್ಯಾಂಗೆ, ಫ್ರೆಡೆರಿಕ್ ಓವರ್‌ಡಿಜ್ಕ್, ಹನ್ನಾ ಲ್ಯಾಂಡ್‌ಹೀರ್, ಹೀದರ್ ಸೀಗರ್ಸ್, ಐರಿಸ್ ಜ್ವಿಲ್ಲಿಂಗ್, ಇಸಾಬೆಲ್ ವ್ಯಾನ್ ಡೆರ್ ವೊನಿಂಗ್, ಲಾರಾ ಲೀಮ್‌ಹುಯಿಸ್, ಮಿರ್ತೆ ವ್ಯಾನ್ ಡೆನ್ ರಾಡ್, ಫೆಬೆ ಮೊಲ್ಕೆನ್‌ಬೋರ್, ರೋಬಿನ್ ರಿಜ್ಕೆ, ರೊಸಾಲಿ ಲಾರೆನ್ಸ್, ಸನ್ಯಾ ಖುರಾನಾ, ಸಿಲ್ವರ್ ಸೀಗರ್ಸ್, ಸ್ಟೆರ್ರೆ ಕಾಲಿಸ್.

PBKS vs RCB: ಇಂದಿನ ಆರ್‌ಸಿಬಿ-ಪಂಜಾಬ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಪಾಕಿಸ್ಥಾನ

ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯೇಶಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಸೈರಾ ಜಬೀನ್, ಮುನೀಬಾ ಅಲಿ, ತುಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.

ದಕ್ಷಿಣ ಆಫ್ರಿಕಾ

ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ನಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಸುನೆ ಲೂಸ್, ಕರಾಬೊ ಮೆಸೊ, ನಾನ್‌ಕುಲುಲೆಕೊ ಮ್ಲಾಬಾ, ಕೈಲಾ ರೆನೆಕೆ, ತುಮಿ ಸೆಖುಕುನೆರ್.

ಇಂಗ್ಲೆಂಡ್‌

ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಟಿಲ್ಲಿ ಕಾರ್ಟೀನ್-ಕೋಲ್ಮನ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಡ್ಯಾನಿ ಗಿಬ್ಸನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ಹೀದರ್ ನೈಟ್, ಲಿನ್ಸೆ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವ್ಯಾಟ್-ಹಾಡ್ಜ್.

ನ್ಯೂಜಿಲೆಂಡ್

ಅಮೆಲೀ ಕೆರ್ (ನಾಯಕಿ), ಸುಜೀ ಬೇಟ್ಸ್, ಸೋಫಿ ಡಿವೈನ್, ಫ್ಲೋರಾ ಡೆವನ್‌ಶೈರ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಬ್ರೀ ಇಲಿಂಗ್, ಪಾಲಿ ಇಂಗ್ಲಿಸ್, ಜೆಸ್ ಕೆರ್, ರೋಸ್ಮರಿ ಮೈರ್, ನೆನ್ಸಿ ಪಟೇಲ್, ಜಾರ್ಜಿಯಾ ಪ್ಲಿಮ್ಮರ್, ಇಜ್ಜಿ ಶಾರ್ಪ್, ಲಿಯಾ ತಹುಹು.

ಸ್ಕಾಟ್ಲೆಂಡ್: ಕ್ಯಾಥರಿನ್ ಬ್ರೈಸ್ (ನಾಯಕಿ), ಕ್ಲೋಯ್ ಅಬೆಲ್, ಒಲಿವಿಯಾ ಬೆಲ್, ಸಾರಾ ಬ್ರೈಸ್, ಡಾರ್ಸಿ ಕಾರ್ಟರ್, ಪ್ರಿಯಾನಾಜ್ ಚಟರ್ಜಿ, ಗೇಬ್ರಿಯೆಲಾ ಫಾಂಟೆನ್ಲಾ, ಕ್ಯಾಥರೀನ್ ಫ್ರೇಸರ್, ಕಿರ್ಸ್ಟಿ ಗಾರ್ಡನ್, ಐಲ್ಸಾ ಲಿಸ್ಟರ್, ಮೈಸಿ ಮಸೀರಾ, ಅಬ್ತಾಹಾ ಮಕ್ಸೂದ್, ಮೇಗನ್ ಮೆಕ್‌ಕಾಲ್, ರಾಚೆಲ್ ಸ್ಲೇಟರ್, ಪಿಪ್ಪಾ ಸ್ಪ್ರೌಲ್.