ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

T20 World Cup

ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ತಮ್ಮ ಕಹಿ ಅನುಭವವನ್ನು ತೆರೆದಿಟ್ಟ ಸಂಜು ಸ್ಯಾಮ್ಸನ್‌!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಕಹಿ ಅನುಭವ ತೆರೆದಿಟ್ಟ ಸಂಜು!

ಭಾರತ ತಂಡದ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಸಂಜು ಸ್ಯಾಮ್ಸನ್, ಟೂರ್ನಿಯ ಆರಂಭಿಕ ಹಂತದಲ್ಲಿ ತಾವು ಮಾನಸಿಕವಾಗಿ ಅನುಭವಿಸಿದ್ದ ಕಹಿ ಅನುಭವನ್ನು ತೆರೆದಿಟ್ಟಿದ್ದಾರೆ. ಭಾರತದ ಪ್ಲೇಯಿಂಗ್ XI ನಿಂದ ಪದೇ-ಪದೆ ಹೊರಗುಳಿದ ನಂತರದ ಸಮಯದಲ್ಲಿ "ಸಂಪೂರ್ಣವಾಗಿ ಮುರಿದುಹೋದ" ಅನುಭವವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

ʻಒಂದೇ ಒಂದು ಫೋನ್‌ ಕರೆ ಇಶಾನ್‌ ಕಿಶನ್‌ರ ಅದೃಷ್ಟ ಬದಲಿಸಿತುʼ: ಸೂರ್ಯಕುಮಾರ್‌ ಯಾದವ್‌!

ಇಶಾನ್‌ ಕಿಶನ್‌ ಅದೃಷ್ಟ ಬದಲಿಸಿದ್ದೇಗೆಂದು ತಿಳಿಸಿದ ಸೂರ್ಯಕುಮಾರ್‌!

ಸುಮಾರು ಮೂರು ವರ್ಷಗಳ ಭಾರತ ತಂಡದಿಂದ ದೂರ ಉಳಿದಿದ್ದ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಿದ್ದರು. ಅವರು 317 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ಮೂರನೇ ಟಿ20 ವಿಶ್ವಕಪ್‌ ಗೆಲುವಿಗೆ ನೆರವು ನೀಡಿದ್ದರು. ಇಶಾನ್‌ ಕಿಶನ್‌ ಕಮ್‌ಬ್ಯಾಕ್‌ ಬಗ್ಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ.

ಟಿ20 ವಿಶ್ವಕಪ್‌ನೊಂದಿಗೆ ಸಿದ್ದಿ ವಿನಾಯಕ ದೇವಾಸ್ಥಾನಕ್ಕೆ ತೆರಳಿದ ಸೂರ್ಯ, ಗಂಭೀರ್, ಜಯ ಶಾ!

ಸಿದ್ದಿ ವಿನಾಯಕ ದೇವಾಸ್ಥಾನಕ್ಕೆ ತೆರಳಿದ ಸೂರ್ಯ, ಗಂಭೀರ್‌, ಜಯ ಶಾ!

ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ತಂಡವು ನ್ಯೂಜಿಲೆಂಡ್ ಅನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.

T20 World Cup: ಪಾಕಿಸ್ತಾನ ಕ್ರಿಕೆಟಿಗರಿಗೆ 16 ಲಕ್ಷ ರು ದಂಡ ವಿಧಿಸಿದ್ದು ನಿಜಾನಾ? ಸ್ಪಷ್ಟನೆ ನೀಡಿದ ಪಿಸಿಬಿ!

ಪಾಕ್‌ ಆಟಗಾರರಿಗೆ 16 ಲಕ್ಷ ರು ದಂಡ ವಿಧಿಸಿದ್ದರ ಬಗ್ಗೆ ಪಿಸಿಬಿ ಸ್ಪಷ್ಟನೆ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಿರ್ಗಮನದ ಬಳಿಕ ತನ್ನ ತಂಡದ ಆಟಗಾರರಿಗೆ ತಲಾ 16 ಲಕ್ಷ ರು ದಂಡ ವಿಧಿಸಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಳ್ಳಿ ಹಾಕಿದೆ. ಆಟಗಾರರ ಮೇಲೆ ಯಾವುದೇ ದಂಡ ವಿಧಿಸಲಾಗಿಲ್ಲ. ಆದರೆ ಆಟಗಾರರ ಪ್ರದರ್ಶನವನ್ನು ಆಧಾರವಾಗಿಸಿಕೊಂಡ ಜವಾಬ್ದಾರಿತನ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಪಿಸಿಬಿ ವಕ್ತಾರ ಆಮಿರ್‌ ಮಿರ್‌ ಸ್ಪಷ್ಟನೆ ನೀಡಿದ್ದಾರೆ.

ʻಫೈಯರ್‌ ಅಂಡ್‌ ಫೈಯರ್‌ʼ: ಅಭಿಷೇಕ್‌ ಶರ್ಮಾ ಜೊತೆಗಿನ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಅಭಿಷೇಕ್‌ ಶರ್ಮಾ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಹೀರೋ ಸಂಜು ಸ್ಯಾಮ್ಸನ್‌, ತಮ್ಮ ಆರಂಭಿಕ ಜೊತೆಗಾ ಅಭಿಷೇಕ್‌ ಶರ್ಮಾ ಬಗ್ಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಓಪನಿಂಗ್ ಜೊತೆಯಾಟವನ್ನು ʻಐಸ್ ಮತ್ತು ಫೈರ್ʼ ಎಂದು ಕರೆಯುವುದಕ್ಕಿಂತ “ಫೈರ್ ಮತ್ತು ಫೈರ್” ಎಂದು ಹೇಳುವುದು ಹೆಚ್ಚು ಸರಿಯಾಗುತ್ತದೆ ಎಂದು ಹಾಸ್ಯವಾಗಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಗೆಲುವಿನ ಹೊರತಾಗಿಯೂ ಗೌತಮ್‌ ಗಂಭೀರ್‌ಗೆ ಸೌರವ್‌ ಗಂಗೂಲಿ ವಾರ್ನಿಂಗ್‌!

ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಸೌರವ್‌ ಗಂಗೂಲಿ ವಾರ್ನಿಂಗ್‌!

ಭಾರತ ತಂಡ ಟಿ20 ವಿಶ್ವಕಪ್‌ ಗೆಲುವಿನ ಹೊರತಾಗಿಯೂ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್‌ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ವಿಶ್ರಾಂತಿ ಪಡೆಯಬಾರದು, ಇನ್ನು ಅವರಿಗೆ 2027 ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಮುಂದಿದೆ ಎಂದು ಹೇಳಿದ್ದಾರೆ.

T20 World Cup: ಸಂಜು, ಬುಮ್ರಾ ಅಲ್ಲ; ಇಂಗ್ಲೆಂಡ್‌ ಆಲ್‌ರೌಂಡರ್‌ಗೆ 10 ಅಂಕ ನೀಡಿದ ರಿಕಿ ಪಾಂಟಿಂಗ್‌!

ಸಂಜು ಅಲ್ಲ,ಆರ್‌ಸಿಬಿ ಮಾಜಿ ಆಲ್‌ರೌಂಡರ್‌ಗೆ 10 ಅಂಕ ನೀಡಿದ ಪಾಂಟಿಂಗ್‌!

ರಿಕಿ ಪಾಂಟಿಂಗ್ ವಿಲ್ ಜ್ಯಾಕ್ಸ್‌ಗೆ 10/10 ರೇಟಿಂಗ್ ನೀಡಿದ್ದರೆ, ಸಂಜು ಸ್ಯಾಮ್ಸನ್ ಮತ್ತು ಜಸ್‌ಪ್ರೀತ್ ಬುಮ್ರಾಗೆ 9.5/10 ರೇಟಿಂಗ್ ನೀಡಿದ್ದಾರೆ. ಫೈನಲ್‌‌ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ದಾಖಲೆಯ 255 ರನ್‌ಗಳನ್ನು ಗಳಿಸಿತು. ಅಂತಿಮವಾಗಿ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.

ʻಭಾರತ ತಂಡ ಹೊರಬೀಳುತ್ತಿತ್ತುʼ: ಟಿ20 ವಿಶ್ವಕಪ್‌ನ ʻಅತ್ಯಂತ ಮೂರ್ಖ ತಂಡʼ ದಕ್ಷಿಣ ಆಫ್ರಿಕಾ ಎಂದ ಮೈಕಲ್‌ ವಾನ್‌!

ದಕ್ಷಿಣ ಆಫ್ರಿಕಾ ಅತ್ಯಂತ ಮೂರ್ಖ ತಂಡ ಎಂದ ಮೈಕಲ್‌ ವಾನ್‌!

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವನ್ನು “ಅತ್ಯಂತ ಮೂರ್ಖ ತಂಡ” ಎಂದು ಟೀಕಿಸಿದ್ದಾರೆ. ಏಕೆಂದರೆ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕಿತ್ತು, ಇದರಿಂದ ಭಾರತ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಸ್ಥಾನ; T20 World Cup ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

T20 World Cup: ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಭಾರತ ತಂಡ ಚಾಂಪಿಯನ್‌ ಆಗುವ ಮೂಲಕ ಅಂತ್ಯವಾಯಿತು. ಈ ಟೂರ್ನಿಯಲ್ಲಿ ಕೆಲ ಬ್ಯಾಟ್ಸ್‌ಮನ್‌ಗಳು ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರ ಪೈಕಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

T20 World Cup ಗೆದ್ದ ಬಳಿಕ ಗೌತಮ್‌ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ಹೇಳಿದ್ದ ಮಾತನ್ನು ತಿಳಿಸಿದ ಸೂರ್ಯ!

T20 World Cup final: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿತ್ತು. ಆ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ ಪಂದ್ಯದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಡ್ರೆಸ್ಸಿಂಗ್‌ ರೂಂನಲ್ಲಿ ಏನು ಹೇಳಿದ್ದರು ಎಂಬುದನ್ನು ಇದೀಗ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದಾಯ್ತು, ಭಾರತ ತಂಡದ ಮುಂದಿನ ಗುರಿ ಏನೆಂದು ರಿವೀಲ್‌ ಮಾಡಿದ ಗೌತಮ್‌ ಗಂಭೀರ್‌!

ಭಾರತ ತಂಡದ ಮುಂದಿನ ಗುರಿ ಏನೆಂದು ತಿಳಿಸಿದ ಗೌತಮ್‌ ಗಂಭೀರ್‌!

ಗೌತಮ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ಇದೀಗ ಭಾರತ ತಂಡದ ಮುಂದಿನ ಗುರಿ ಏನೆಂದು ಗಂಭೀರ್‌ ರಿವೀಲ್‌ ಮಾಡಿದ್ದಾರೆ. 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲ್ಲುವುದು ಎಂದು ಹೇಳಿದ್ದಾರೆ.

ICC Men's T20 World Cup 2026: ಬೆಸ್ಟ್‌ ಪ್ಲೇಯಿಂಗ್ XI ಪ್ರಕಟಿಸಿದ ಹರ್ಷ ಭೋಗ್ಲೆ!

T20 World Cupನ ಬೆಸ್ಟ್‌ ಪ್ಲೇಯಿಂಗ್ XI ಪ್ರಕಟಿಸಿದ ಹರ್ಷ ಭೋಗ್ಲೆ!

ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆದ 2026ರ ಸಾಲಿನ ICC Men's T20 World Cup 2026 ಟೂರ್ನಿಯಲ್ಲಿ ಆಡಿದ ಅತ್ಯುತ್ತಮ ಆಟಗಾರರನ್ನು ಒಳಗೊಂಡ ಬೆಸ್ಟ್ XI ತಂಡವನ್ನು ಜನಪ್ರಿಯ ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಪ್ರಕಟಿಸಿದ್ದು, ವಿವಿಧ ದೇಶಗಳ ಸ್ಟಾರ್ ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ʻನನ್ನ ಅಪ್ಪ ನಿಜವಾದ ಹೀರೋʼ-T20 World Cup ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ ಶಿವಂ ದುಬೇ!

ಟಿ20 ವಿಶ್ವಕಪ್‌ ಪದಕವನ್ನು ಅಪ್ಪನಿಗೆ ಸಮರ್ಪಿಸಿದ ಶಿವಂ ದುಬೇ!

ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನ ಹೀರೋಗಳಲ್ಲಿ ಒಬ್ಬರಾದ ಶಿವಂ ದುಬೇ ಅವರು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಟಿ20 ವಿಶ್ವಕಪ್‌ ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ್ದಾರೆ ಹಾಗೂ ತಮ್ಮ ತಂದೆಯೇ ನನಗೆ ಹೀರೋ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಿಂದ ಕೈಬಿಟ್ಟಿದ್ದ ಬಗ್ಗೆ ಜಿತೇಶ್‌ ಶರ್ಮಾ ಪ್ರಾಮಾನಿಕ ಪ್ರತಿಕ್ರಿಯೆ

ಟಿ20 ವಿಶ್ವಕಪ್‌ನಿಂದ ಸ್ಥಾನ ಸಿಗದ ಬಗ್ಗೆ ಜಿತೇಶ್‌ ಪ್ರತಿಕ್ರಿಯೆ!

Jitesh Sharma in T20 World Cup Snub: ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದರಿಂದ ನಿರಾಶೆಯಾಗಿತ್ತು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಹೇಳಿದ್ದಾರೆ. ಆದರೆ ಇದರಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲ, ಏಕೆಂದರೆ ಆ ಅವಕಾಶ ತಪ್ಪಿದ ಕಾರಣದಿಂದ ತಮ್ಮ ತಂದೆಯ ಜೊತೆ ಅಮೂಲ್ಯ ಸಮಯ ಕಳೆಯಲು ಸಾಧ್ಯವಾಯಿತು ಎಂದಿದ್ದಾರೆ.

T20 World Cup: ʻಡ್ಯಾರಿಲ್‌ ಮಿಚೆಲ್‌ ಬಳಿ ಅರ್ಷದೀಪ್‌ ಸಿಂಗ್‌ ಕ್ಷಮೆ ಕೇಳುವ ಅಗತ್ಯವಿರಲಿಲ್ಲʼ-ಗೌತಮ್‌ ಗಂಭೀರ್‌ ಅಚ್ಚರಿ ಹೇಳಿಕೆ!

ಡ್ಯಾರಿಲ್‌ ಮಿಚೆಲ್‌ ಬಳಿ ಅರ್ಷದೀಪ್‌ ಕ್ಷಮೆ ಕೇಳುವ ಅಗತ್ಯವಿಲ್ಲ: ಗಂಭೀರ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಡ್ಯಾರಿಲ್‌ ಮಿಚೆಲ್‌ ಹಾಗೂ ಅರ್ಷದೀಪ್‌ ಸಿಂಗ್‌ ಅವರ ನಡುವೆ ನಡೆದಿದ್ದ ಘಟನೆ ಬಗ್ಗೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಿಚೆಲ್‌ ಬಳಿಕ ಅರ್ಷದೀಪ್‌ ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಡಗೌಟ್‌ನಲ್ಲಿ ನಗೋದಿಲ್ಲ ಏಕೆ? ಕೊನೆಗೂ ಕಾರಣ ತಿಳಿಸಿದ ಗೌತಮ್ ಗಂಭೀರ್‌!

ಡಗೌಟ್‌ನಲ್ಲಿ ನಗದೇ ಇರಲು ಕಾರಣ ತಿಳಿಸಿದ ಗೌತಮ್ ಗಂಭೀರ್‌!

2026ರ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳೆ ಡಗೌಟ್‌ನಲ್ಲಿ ಒತ್ತಡ ಹೆಚ್ಚಿರುತ್ತದೆ. ಅದರಿಂದಲೇ ನಗು ಕಾಣಿಸದಿರಬಹುದು ಎಂದು ಮಾಜಿ ನಾಯಕ ಎಂಎಸ್‌ ಧೋನಿ ಅವರ ತಮಾಷೆಯ ಕಾಮೆಂಟ್‌ಗೆ ಟೀಮ್ ಇಂಡಿಯಾ ಹಾಲಿ ಕೋಚ್ ಗೌತಮ್ ಗಂಭೀರ್‌ ಪ್ರತಿಕ್ರಿಯೆ ನೀಡಿದ್ದಾರೆ.

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್‌ 5 ಬ್ಯಾಟರ್ಸ್‌!

2026ರ ಟಿ20 ವಿಶ್ವಕಪ್‌ನ ಟಾಪ್‌ 5 ಸಿಕ್ಸರ್‌ ಸರದಾರರು!

T20 World Cup 2026: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು. ಫೈನಲ್‌ನಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ ಎದುರು 96 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಟೂರ್ನಿಯಲ್ಲಿ ಬಹು ಸಂಖ್ಯೆಯಲ್ಲಿ ಸಿಕ್ಸರ್‌ಗಳು ಮೂಡಿ ಬಂದಿದೆ. ಅದಂತೆ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

ICC T20I Rankings: ವೃತ್ತಿ ಜೀವನದ ಶ್ರೇಷ್ಠ ಸ್ಥಾನಕ್ಕೆ ಪ್ರವೇಶಿಸಿದ ಸಂಜು ಸ್ಯಾಮ್ಸನ್‌, ಅಭಿಷೇಕ್‌, ಇಶಾನ್‌ಗೂ ಜಾಕ್‌ಪಾಟ್‌!

ಟಿ20ಐ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡ ಸಂಜು ಸ್ಯಾಮ್ಸನ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌ ಹಾಗೂ ಅಭಿಷೇಕ್‌ ಶರ್ಮಾ ಅವರಿಗೆ ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಅಭಿಷೇಕ್‌ ಶರ್ಮಾ ಅಗ್ರ ಸ್ಥಾನವನ್ನು ಉಳಿಸಿಕೊಂಡರೆ, ಇಶಾನ್‌ ಕಿಶನ್‌ ಎರಡನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ.

T20I Rankings: ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ವರುಣ್‌ ಚಕ್ರವರ್ತಿ!

ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಕುಸಿದ ವರುಣ್‌ ಚಕ್ರವರ್ತಿ!

T20I Rankings: ಇತ್ತೀಚೆಗೆ ಅಂತ್ಯವಾದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರನೇ ಅವಧಿಯಲ್ಲಿ ಕಳೆಪೆ ಪ್ರದರ್ಶನವನ್ನು ತೋರಿದ ಪರಿಣಾಮ ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇವರ ಅಗ್ರ ಸ್ಥಾನವನ್ನು ಅಫ್ಘಾನಿಸ್ತಾನ ಸ್ಪಿನ್ನರ್‌ ರಶೀದ್‌ ಖಾನ್‌ ಅಲಂಕರಿಸಿದ್ದಾರೆ.

ಟಿ20 ವಿಶ್ವಕಪ್‌ ಟ್ರೋಫಿ ಕೇವಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದ ಕೀರ್ತಿ ಆಜಾದ್‌ಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ʻಧರ್ಮದ ಲೇಪನ ಬೇಡʼ: ಕೀರ್ತಿ ಆಜಾದ್‌ಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ಭಾರತ ಕ್ರಿಕೆಟ್‌ ತಂಡ ಯಾವಾಗಲೂ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ, ಮಸೀದಿ ಹಾಗೂ ಚರ್ಚ್‌ಗೆ ಏಕೆ ಭೇಟಿ ನೀಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದ 1983ರ ವಿಶ್ವಕಪ್‌ ವಿಜೇತ ಕೀರ್ತಿ ಆಜಾದ್‌ ಅವರ ಆರೋಪಕ್ಕೆ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಭಾರತ ತಂಡ ಟ್ರೋಫಿಯನ್ನು ತೆಗೆದುಕೊಂಡು ದೇವಾಸ್ಥಾನಕ್ಕೆ ತೆರಳಿತ್ತು. ಇದು ಕೀರ್ತಿ ಆಜಾದ್‌ಗೆ ಇಷ್ಟವಾಗಲಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಟರ್ನಿಂಗ್‌ ಪಾಯಿಂಟ್‌ ಆದ ಸಂಗತಿ ತಿಳಿಸಿದ ಶಿವಂ ದುಬೇ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ಟರ್ನಿಂಗ್‌ ಪಾಯಿಂಟ್‌ ತಿಳಿಸಿದ ದುಬೇ!

ICC Men's T20 World Cup 2026 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲು ಭಾರತ ತಂಡಕ್ಕೆ ಬಹು ದೊಡ್ಡ ತಿರುವು ತಂದುಕೊಟ್ಟಿತು ಎಂದು ಟೀಮ್ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಶಿವಂ ದುಬೇ ಹೇಳಿದ್ದಾರೆ.

T20 World Cup: ವಿಧಿವಶರಾದ ತಮ್ಮ ತಂದೆಗೆ ಭಾವನಾತ್ಮಕ ಸಂದೇಶ ರವಾನಿಸಿದ ರಿಂಕು ಸಿಂಗ್‌!

ವಿಧಿವಶರಾದ ತಮ್ಮ ತಂದೆಗೆ ರಿಂಕು ಸಿಂಗ್‌ ಭಾವನಾತ್ಮಕ ಸಂದೇಶ!

Rinku Singh Emotionla note: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಬಳಿಕ ಭಾರತ ತಂಡದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಅವರು ಇತ್ತೀಚೆಗೆ ವಿಧಿವಶರಾದ ತಮ್ಮ ತಂದೆಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರು ಭಾವನಾತ್ಮಕ ಪೋಸ್ಟ್‌ ಬರೆದಿದ್ದಾರೆ.

T20 World Cup: ಡ್ಯಾರಿಲ್‌ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್‌ ಸಿಂಗ್‌ಗೆ ದಂಡ!

ಡ್ಯಾರಿಲ್‌ ಮಿಚೆಲ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ದ ಅರ್ಷದೀಪ್‌ಗೆ ದಂಡ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಎದುರು ಅನಗತ್ಯವಾಗಿ ಥ್ರೋ ಮಾಡಿ ಕಿರಿಕ್‌ ಮಾಡಿದ್ದ ಭಾರತ ತಂಡದ ಯುವ ವೇಗಿ ಅರ್ಷದೀಪ್‌ ಸಿಂಗ್‌ಗೆ ಐಸಿಸಿ ದಂಡವನ್ನು ವಿಧಿಸಿದೆ. ಕಿವೀಸ್‌ ತಂಡದ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.

ಟಿ20 ವಿಶ್ವಕಪ್‌ ಚಾಪಿಯನ್ಸ್‌ ಭಾರತ ತಂಡಕ್ಕೆ 131 ಕೋಟಿ ರು ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಟಿ20 ವಿಶ್ವಕಪ್‌ ಚಾಂಪಿಯನ್ಸ್‌ ಭಾರತಕ್ಕೆ 131 ಕೋಟಿ ರು ನಗದು ಬಹುಮಾನ!

2026ರ ಐಸಿಸಿ ಟಿ20 ವಿಶ್ವಕಪ್‌ ಚಾಂಪಿಯನ್ಸ್‌ ಭಾರತ ತಂಡಕ್ಕೆ ಬಿಸಿಸಿಐ ಭರ್ಜರಿ ನಗದು ಬಹುಮಾನವನ್ನು ಘೋಷಿಸಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡಕ್ಕೆ 131 ಕೋಟಿ ನಗದು ಬಹುಮಾನವನ್ನು ಪ್ರಕಟಿಸಿದೆ. 2024ರ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿದ್ದ ವೇಳೆ ಅಂದಿನ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ 125 ಕೋಟಿ ರು. ಗಳನ್ನು ನೀಡಲಾಗಿತ್ತು.

Loading...