ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

GT vs CSK: ಐಪಿಎಲ್‌ ಇತಿಹಾಸದಲ್ಲೇ ಅನಗತ್ಯ ದಾಖಲೆ ಬರೆದ ಅನ್ಶುಲ್ ಕಾಂಬೋಜ್‌

IPL 2026: ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ತಂಡ 4 ವಿಕೆಟ್‌ಗೆ 229 ರನ್‌ ಬಾರಿಸಿತು. ಸಾಯಿ ಸುದರ್ಶನ್‌ (84) ಮತ್ತು ಶುಭಮನ್‌ ಗಿಲ್ (64) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿದರು. ಜೋಸ್ ಬಟ್ಲರ್ (ಔಟಾಗದೇ 57) ಅವರೂ ಮಿಂಚಿನ ಅರ್ಧಶತಕ ಹೊಡೆದರು.

ಐಪಿಎಲ್‌ ಇತಿಹಾಸದಲ್ಲೇ ಅನಗತ್ಯ ದಾಖಲೆ ಬರೆದ ಅನ್ಶುಲ್ ಕಾಂಬೋಜ್‌

Anshul Kamboj -

Abhilash BC
Abhilash BC May 22, 2026 8:16 AM

ಅಹಮದಾಬಾದ್‌, ಮೇ 22: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನ 66(IPL 2026) ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(GT vs CSK) ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 89 ರನ್‌ ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟ ಅನ್ಶುಲ್ ಕಾಂಬೋಜ್‌(Anshul Kamboj) ಐಪಿಎಲ್‌ ಇತಿಹಾಸದಲ್ಲಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಐಪಿಎಲ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಆಟಗಾರರ ಪಟ್ಟಿಯಲ್ಲಿ ಕಾಂಬೋಜ್ ರಶೀದ್ ಖಾನ್ ಅವರನ್ನು ಹಿಂದಿಕ್ಕಿದರು. ಗಮನಾರ್ಹವಾಗಿ, ಕಾಂಬೋಜ್ 2026 ರ ಋತುವಿನಲ್ಲಿ 34 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದು ಐಪಿಎಲ್‌ನ ಒಂದೇ ಋತುವಿನಲ್ಲಿ ಬೌಲರ್‌ ಒಬ್ಬ ಬಿಟ್ಟುಕೊಟ್ಟ ಅತಿ ಹೆಚ್ಚು ಸಿಕ್ಸರ್‌ಗಳಾಗಿದೆ. ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ರಶೀದ್‌ ಖಾನ್‌ ಹೆಸರಿನಲ್ಲಿತ್ತು. 2025ರ ಆವೃತ್ತಿಯಲ್ಲಿ 33 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಐಪಿಎಲ್ ಆವೃತ್ತಿಯಲ್ಲಿ ಹೆಚ್ಚಿನ ಸಿಕ್ಸರ್‌ಗಳನ್ನು ಹೊಡೆಸಿಕೊಂಡ ಬೌಲರ್‌ಗಳು

34 - ಅಂಶುಲ್ ಕಾಂಬೋಜ್ (2026)

33 - ರಶೀದ್ ಖಾನ್ (2025)

31 - ಮೊಹಮ್ಮದ್ ಸಿರಾಜ್ (2022)

30 - ವನಿಂದು ಹಸರಂಗ (2022)

30 - ಯುಜ್ವೇಂದ್ರ ಚಹಾಲ್ (2024)

30* - ಕಗಿಸೊ ರಬಾಡ (2026)

CSK vs GT: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಭರ್ಜರಿ ಗೆಲುವು ಪಡೆದ ಗುಜರಾತ್‌ ಟೈಟನ್ಸ್!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ತಂಡ 4 ವಿಕೆಟ್‌ಗೆ 229 ರನ್‌ ಬಾರಿಸಿತು. ಸಾಯಿ ಸುದರ್ಶನ್‌ (84) ಮತ್ತು ಶುಭಮನ್‌ ಗಿಲ್ (64) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿದರು. ಜೋಸ್ ಬಟ್ಲರ್ (ಔಟಾಗದೇ 57) ಅವರೂ ಮಿಂಚಿನ ಅರ್ಧಶತಕ ಹೊಡೆದರು.

ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಟೈಟನ್ಸ್‌ನ ವೇಗಿಗಳಾದ ಮೊಹಮ್ಮದ್‌ ಸಿರಾಜ್‌ (26ಕ್ಕೆ 3), ಕಗಿಸೊ ರಬಾಡ (32ಕ್ಕೆ 3) ಮತ್ತು ಸ್ಪಿನ್ನರ್‌ ರಶೀದ್‌ ಖಾನ್‌ (18ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ತತ್ತರಿಸಿತು. 13.4 ಓವರ್‌ಗಳಲ್ಲಿ 140 ರನ್‌ಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್‌

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 229 (ಸಾಯಿ ಸುದರ್ಶನ್ 84, ಶುಭಮನ್ ಗಿಲ್ 64, ಜೋಸ್ ಬಟ್ಲರ್ ಔಟಾಗದೇ 57, ಮುಕೇಶ್ ಚೌಧರಿ 36ಕ್ಕೆ1, ಸ್ಪೆನ್ಸರ್ ಜಾನ್ಸನ್ 47ಕ್ಕೆ1, ಅನ್ಷುಲ್ ಕಂಬೋಜ್ 56ಕ್ಕೆ1). ಚೆನ್ನೈ ಸೂಪರ್ ಕಿಂಗ್ಸ್: 13.4 ಓವರ್‌ಗಳಲ್ಲಿ 140 (ಮ್ಯಾರ್ಥ್ಯೂ ಶಾರ್ಟ್‌ 24, ಶಿವಂ ದುಬೆ 47; ಮೊಹಮ್ಮದ್‌ ಸಿರಾಜ್‌ 26ಕ್ಕೆ 3, ಕಗಿಸೊ ರಬಾಡ 32ಕ್ಕೆ 3, ರಶೀದ್‌ ಖಾನ್‌ 18ಕ್ಕೆ 3). ಪಂದ್ಯ ಶ್ರೇಷ್ಠ: ಮೊಹಮ್ಮದ್‌ ಸಿರಾಜ್‌.