ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PBKS vs GT: 11 ಎಸೆತ ಎಸೆದು ಅನಪೇಕ್ಷಿತ ದಾಖಲೆ ಬರೆದ ಅರ್ಶ್‌ದೀಪ್‌ ಸಿಂಗ್‌

Arshdeep Singh: ಅರ್ಶ್‌ದೀಪ್‌ ಸಿಂಗ್‌ ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಯಾವುದೇ ವಿಕೆಟ್ ಪಡೆಯದೆ 42 ರನ್‌ಗಳನ್ನು ಬಿಟ್ಟುಕೊಟ್ಟರು. ವೈಶಾಕ್ ವಿಜಯ್‌ಕುಮಾರ್ 34 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದ ಕಾರಣ ಪಂಜಾಬ್‌ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 162 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾಯಿತು.

ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆ ಬರೆದ ಅರ್ಶ್‌ದೀಪ್‌ ಸಿಂಗ್‌

Arshdeep singh -

Abhilash BC
Abhilash BC Mar 31, 2026 10:16 PM

ಮುಲ್ಲನ್‌ಪುರ, ಮಾ.31: ಮಂಗಳವಾರ ನ್ಯೂ ಚಂಡೀಗಢದಲ್ಲಿ ನಡೆದ ಗುಜರಾತ್ ಟೈಟಾನ್ಸ್(PBKS vs GT) ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿದ್ದಾರೆ. ಒಂದು ಓವರ್‌ ಪೂರ್ಣಗೊಳಿಸಲು ಬರೋಬ್ಬರಿ 11 ಎಸೆತಗಳನ್ನು ಎಸೆದರು. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಂಟಿಯಾಗಿ ಅತಿ ಉದ್ದದ ಓವರ್ ಆಗಿದೆ.

ಪಂದ್ಯದ ಅಂತಿಮ ಓವರ್‌ ಬೌಲಿಂಗ್‌ ನಡೆಸಿದ ಅರ್ಶ್‌ದೀಪ್‌, ಈ ಓವರ್‌ನಲ್ಲಿ ನಾಲ್ಕು ವೈಡ್‌ ಮತ್ತು ಒಂದು ನೋ ಬಾಲ್ ಸೇರಿ 11 ಎಸೆತ ಎಸೆದು 12 ರನ್‌ಗಳನ್ನು ಬಿಟ್ಟುಕೊಟ್ಟರು. ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ಮೊಹಮ್ಮದ್ ಸಿರಾಜ್ 11 ಎಸೆತಗಳನ್ನು ಬೌಲಿಂಗ್ ಮಾಡಿದ ಇತರ ಬೌಲರ್‌ಗಳು.

ಅರ್ಶ್‌ದೀಪ್‌ ಸಿಂಗ್‌ ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಯಾವುದೇ ವಿಕೆಟ್ ಪಡೆಯದೆ 42 ರನ್‌ಗಳನ್ನು ಬಿಟ್ಟುಕೊಟ್ಟರು. ವೈಶಾಕ್ ವಿಜಯ್‌ಕುಮಾರ್ 34 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದ ಕಾರಣ ಪಂಜಾಬ್‌ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 162 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾಯಿತು. ಯುಜ್ವೇಂದ್ರ ಚಾಹಲ್ 28 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು.

PBKS vs GT: ಪಂಜಾಬ್‌ ಕಿಂಗ್ಸ್‌ ಪರ ಪದಾರ್ಪಣೆ ಮಾಡಿದ ಅಶೋಕ್ ಶರ್ಮಾ ಯಾರು?

ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಗುಜರಾತ್‌ ಬ್ಯಾಟಿಂಗ್‌ ವೈಫಲ್ಯ ಕಂಡು 162 ರನ್‌ ಬಾರಿಸಿತು. ತಂಡದ ಪರ ನಾಯಕ ಶುಭಮನ್‌ ಗಿಲ್(‌39) ಮತ್ತು ಜಾಸ್‌ ಬಟ್ಲರ್‌(38) ರನ್‌ ಗಳಿಸಿ ಸಣ್ಣ ಬ್ಯಾಟಿಂಗ್‌ ಹೋರಾಟ ನಡೆಸಿದರು. ಉಳಿದಂತೆ ಯಾವುದೇ ಬ್ಯಾಟರ್‌ಗಳಿಂದ ದೊಡ್ಡ ಜತೆಯಾಟ ದಾಖಲಾಗಿಲ್ಲ. ಪದಾರ್ಪಣೆ ಮಾಡಿದ ಗ್ಲೆನ್‌ ಫಿಲಿಪ್ಸ್‌ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ಗೆ ಸೀಮಿತರಾದರು.

ಐಪಿಎಲ್‌ನಲ್ಲಿ ಬೌಲ್ ಮಾಡಿದ ಅತಿ ಉದ್ದದ ಓವರ್ (ಚೆಂಡುಗಳಲ್ಲಿ)

11 - ಮೊಹಮ್ಮದ್ ಸಿರಾಜ್ vs ಮುಂಬೈ, ಬೆಂಗಳೂರು, 2023

11 - ತುಷಾರ್ ದೇಶಪಾಂಡೆ vs ಎಲ್‌ಎಸ್‌ಜಿ, ಚೆನ್ನೈ, 2023

11 - ಶಾರ್ದೂಲ್ ಠಾಕೂರ್ vs ಕೆಕೆಆರ್, ಕೋಲ್ಕತ್ತಾ, 2025

11 - ಸಂದೀಪ್ ಶರ್ಮಾ vs ಡಿಸಿ, ದೆಹಲಿ, 2025

11 - ಹಾರ್ದಿಕ್ ಪಾಂಡ್ಯ vs ಗುಜರಾತ್‌, ವಾಂಖೆಡೆ

11 - ಅರ್ಶ್‌ದೀಪ್ ಸಿಂಗ್ vs ಗುಜರಾತ್‌, ಮುಲ್ಲನ್‌ಪುರ