ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕೈತಪ್ಪಿದ ಅವಳಿ ಚಿನ್ನ; ಬೆಳ್ಳಿಗೆ ತೃಪ್ತಿಪಟ್ಟ ಅನಾಹತ್​, ಅಭಯ್​ ಸಿಂಗ್​

Asian Games 2026: ನಗೋಯಾ ಕಿಂಜೊ ಫುಟೊ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಶಿವಸಂಗರಿ ಸುಬ್ರಮಣ್ಯಂ 18 ವರ್ಷದ ಅನಾಹತ್ ಅವರನ್ನು 11-4, 11-4, 11-7 ರಿಂದ ಸೋಲಿಸಿದರೆ, ವಿಶ್ವದ ನಂ. 17 ಎನ್​ಜಿ ಈನ್​ ಯೌ ಅವರು ವಿಶ್ವದ ನಂ. 26 ನೇ ಶ್ರೇಯಾಂಕದ ಅಭಯ್ ಅವರನ್ನು 11-5, 11-5, 11-5 ಅಂತರದಿಂದ ಸೋಲಿಸಿದರು.

ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕೈತಪ್ಪಿದ ಚಿನ್ನ; ಅನಾಹತ್​, ಅಭಯ್‌ಗೆ ಬೆಳ್ಳಿ

Anahat Singh and Abhay Singh -

Abhilash BC
Abhilash BC Sep 27, 2026 2:47 PM

ನಗೋಯಾ, ಸೆ.27: ಜೂನಿಯರ್​ ವಿಶ್ವ ಚಾಂಪಿಯನ್​ ಅನಾಹತ್​ ಸಿಂಗ್​ ಮತ್ತು ಅನುಭವಿ ಆಟಗಾರ ಅಭಯ್​ ಸಿಂಗ್​ ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಭಾನುವಾರ ನಡೆದ ಆರಂಭಿಕ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ 28 ವರ್ಷದ ಅಭಯ್ ಸಿಂಗ್‌ ಅವರು ಮಲೇಷ್ಯಾದ ಎನ್​ಜಿ ಈನ್​ ಯೌ ವಿರುದ್ಧ 3-0 ಅಂತರದ ಸೋಲು ಕಂಡರೆ, ಆ ಬಳಿಕ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಅನಹತ್ ವಿಶ್ವ ನಂ. 5 ಮಲೇಷ್ಯಾದ ಸಿವಸಂಗರಿ ಸುಬ್ರಹ್ಮಣ್ಯಂ ವಿರುದ್ಧ 3-0 ನೇರ ಗೇಮ್‌ ಅಂತರದಿಂದ ಸೋಲನ್ನಪಿದರು.

ನಗೋಯಾ ಕಿಂಜೊ ಫುಟೊ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಶಿವಸಂಗರಿ ಸುಬ್ರಮಣ್ಯಂ 18 ವರ್ಷದ ಅನಾಹತ್ ಅವರನ್ನು 11-4, 11-4, 11-7 ರಿಂದ ಸೋಲಿಸಿದರೆ, ವಿಶ್ವದ ನಂ. 17 ಎನ್​ಜಿ ಈನ್​ ಯೌ ಅವರು ವಿಶ್ವದ ನಂ. 26 ನೇ ಶ್ರೇಯಾಂಕದ ಅಭಯ್ ಅವರನ್ನು 11-5, 11-5, 11-5 ಅಂತರದಿಂದ ಸೋಲಿಸಿದರು.

ವಿಂಡೀಸ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ; ನಮನ್ ಧೀರ್ ಪದಾರ್ಪಣೆ

ಈ ಫಲಿತಾಂಶದಿಂದಾಗಿ, ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ಸ್ಪರ್ಧೆಯ ಮೂಲಕ ಲಭ್ಯವಿದ್ದ ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್‌ನ ನೇರ ಅರ್ಹತೆಯ ಅವಕಾಶವನ್ನು ಭಾರತವು ಕಳೆದುಕೊಂಡಂತಾಯಿತು. ಲಾಸ್ ಏಂಜಲೀಸ್ 2028ರಲ್ಲಿ ಸ್ಕ್ವಾಷ್ ಕ್ರೀಡೆಯು ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾಗಲಿದೆ.

ಅನಾಹತ್​ ಶನಿವಾರ ನಡೆದಿದ್ದ ಸೆಮಿಫೈನಲ್​ನಲ್ಲಿ ತನ್ನಗಿಂತ ಉನ್ನತ ಶ್ರೇಯಾಂಕಿತ ಜಪಾನ್​ನ ಸಟೊಮಿ ವತನಬೆ ವಿರುದ್ಧ ಮೊದಲ ಗೇಮ್​ ಸೋಲಿನ ಹಿನ್ನಡೆ ಎದುರಿಸಿದರೂ, ಅಂತಿಮವಾಗಿ 3-2ರಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾ ಫೈನಲ್‌ ಪ್ರವೇಶಿಸಿದ್ದರು. 2023ರ ಏಷ್ಯಾಡ್​ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್​ ಸಿಂಗ್‌ ಸೆಮೀಸ್​ನಲ್ಲಿ ಪಾಕಿಸ್ತಾನದ ಮುಹಮ್ಮದ್​ ಇರ್ಫಾನ್​ ಅವರನ್ನು 3-0 ಅಂತರದಿಂದ ಹಿಮ್ಮೆಟ್ಟಿಸಿದ್ದರು.