ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್ ಗೇಮ್ಸ್ ಪದಕ ಪಟ್ಟಿ; ಮೊದಲ ದಿನ 10ನೇ ಸ್ಥಾನದಲ್ಲಿ ಭಾರತ

Asian Games 2026: ಭಾರತ ಮಹಿಳಾ ತಂಡವು 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್ ಬೆಳ್ಳಿ ಗೆದ್ದರು.

ಏಷ್ಯನ್ ಗೇಮ್ಸ್ ಪದಕ ಪಟ್ಟಿ; ಮೊದಲ ದಿನ 10ನೇ ಸ್ಥಾನದಲ್ಲಿ ಭಾರತ

Asian Games shooting -

Abhilash BC
Abhilash BC Sep 20, 2026 7:37 PM

ನಗೋಯಾ, ಸೆ.20: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಮೊದಲ ದಿನವಾದ ಭಾನುವಾರ ಭಾರತ ಎರಡು ಬೆಳ್ಳಿ ಪದಕ ಗೆದ್ದು ಪದಕ ಪಟ್ಟಿಯಲ್ಲಿ ಖಾತೆ ತೆರೆದಿದೆ. ಮಹಿಳಾ ಶೂಟಿಂಗ್‌ನಲ್ಲಿ 2 ಬೆಳ್ಳಿ ಜಯಿಸಿತು. ಸದ್ಯ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಚೀನಾ 11 ಚಿನ್ನ ಸಹಿತ ಒಟ್ಟು 20 ಪದಕ ಜಯಿಸಿ ಅಗ್ರಸ್ಥಾನದಲ್ಲಿದೆ.

ಭಾರತ ಮಹಿಳಾ ತಂಡವು 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. ಇದಾದ ಬಳಿಕ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್ ಬೆಳ್ಳಿ ಗೆದ್ದರು.

ಎಲವೆನಿಲ್ ವಲರಿವನ್, ಸೋನಮ್ ಉತ್ತಮ್ ಮಾಸ್ಕರ್ ಮತ್ತು ವಿದರ್ಶಾ ಕೆ. ವಿನೋದ್ ಅವರು ಒಟ್ಟಾಗಿ 1898.0 ಅಂಕಗಳನ್ನು ಗಳಿಸಿ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಮಿಶ್ರ ಸಮರ ಕಲೆಗಳ (mixed martial arts) ಮಹಿಳೆಯರ ಸಾಂಪ್ರದಾಯಿಕ 60 ಕೆಜಿ ತೂಕದ ವಿಭಾಗದಲ್ಲಿ ಸುಚಿಕಾ ತರಿಯಾಲ್ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ.

ಪದಕ ಪಟ್ಟಿ

ಚೀನಾ-20(11 ಚಿನ್ನ, 6 ಬೆಳ್ಳಿ, 3 ಕಂಚು)

ಜಪಾನ್‌-20(6 ಚಿನ್ನ, 7 ಬೆಳ್ಳಿ, 7 ಕಂಚು)

ದಕ್ಷಿಣ ಕೊರಿಯಾ-14 (4 ಚಿನ್ನ, 3 ಬೆಳ್ಳಿ, 7 ಕಂಚು)

ಕಜಾಕಿಸ್ತಾನ-5 (3 ಚಿನ್ನ, ಕಂಚು 2)

ಭಾರತ-2 ( ಬೆಳ್ಳಿ 2)

ಟೇಬಲ್ ಟೆನ್ನಿಸ್‌ನಲ್ಲಿ ಮಹಿಳೆಯರಿಗೆ ಅಚ್ಚರಿಯ ಗೆಲುವು

'ಗ್ರೂಪ್ ಎಫ್' ಪಂದ್ಯದಲ್ಲಿ, ಭಾರತೀಯ ಮಹಿಳಾ ಟೇಬಲ್ ಟೆನ್ನಿಸ್ ತಂಡವು ಅತ್ಯುತ್ತಮವಾಗಿ ಪುಟಿದೆದ್ದು ಸಿಂಗಾಪುರ ತಂಡವನ್ನು 3-2 ಅಂತರದಿಂದ ಅಚ್ಚರಿಗೊಳಿಸುವಂತೆ ಸೋಲಿಸಿತು. ಆದರೆ, ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪುರುಷರ ತಂಡವು ಇರಾನ್ ವಿರುದ್ಧ 0-3 ಅಂತರದ ಸೋಲನ್ನು ಅನುಭವಿಸಿತು.

ಏಷ್ಯನ್‌ ಗೇಮ್ಸ್‌ ಮಿಶ್ರ ಮಾರ್ಷಲ್ ಆರ್ಟ್ಸ್‌; ಪದಕ ಖಾತ್ರಿಪಡಿಸಿದ ಸುಚಿಕಾ ತರಿಯಾಲ್

1-2 ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತ ಸೋಲಿನ ಭೀತಿಯನ್ನು ಎದುರಿಸುತ್ತಿತ್ತು, ಆದರೆ ಶ್ರೀಜಾ ಅಕುಲಾ ಮತ್ತು ಯಶಸ್ವಿನಿ ಘೋರ್ಪಡೆ ತಮ್ಮ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಘೋರ್ಪಡೆ ಅವರು ಜಿಯಾನ್ ಝೆಂಗ್ ಅವರನ್ನು 11-7, 11-3, 8-11, 11-9 ಅಂತರದಲ್ಲಿ ಸೋಲಿಸುವ ಮೂಲಕ ಭಾರತಕ್ಕೆ ಗೆಲುವಿನ ಆರಂಭ ಒದಗಿಸಿಕೊಟ್ಟರು. ಆದರೆ, ಎರಡನೇ ಪಂದ್ಯದಲ್ಲಿ ಶ್ರೀಜಾ ಅವರು ಲೋಯ್ ಮಿಂಗ್ ವಿರುದ್ಧ 8-11, 11-4, 9-11, 11-4, 6-11 ಅಂತರದಲ್ಲಿ ಸೋಲನ್ನಪ್ಪಿದರು. ನಂತರ ದಿಯಾ ಚಿಟಲೆ ಅವರು ಟಾನ್ ಝಾವೊ ವಿರುದ್ಧ 7-11, 4-11, 11-7, 5-11 ಅಂತರದಲ್ಲಿ ಸೋಲನುಭವಿಸಿದರು, ಇದರಿಂದಾಗಿ ಸಿಂಗಾಪುರ 2-1 ಮುನ್ನಡೆ ಸಾಧಿಸಿತು.

ಏಷ್ಯನ್ ಗೇಮ್ಸ್: ಹಾಕಿ ಸ್ಪರ್ಧೆಯಲ್ಲಿ ಭಾರತದ ಭರ್ಜರಿ ಗೆಲುವಿನ ಶುಭಾರಂಭ

ಭಾರತಕ್ಕೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದ್ದಾಗ, ಶ್ರೀಜಾ ಪುಟಿದೆದ್ದು ಜಿಯಾನ್ ಝೆಂಗ್ ಅವರನ್ನು 6-11, 11-3, 11-7, 11-4 ಅಂತರದಲ್ಲಿ ಸೋಲಿಸುವ ಮೂಲಕ ಪಂದ್ಯದ ಸರಣಿಯನ್ನು 2-2 ಸಮಬಲಗೊಳಿಸಿದರು. ನಂತರ ನಿರ್ಣಾಯಕ ಪಂದ್ಯದಲ್ಲಿ ಸಂಯಮ ಕಾಯ್ದುಕೊಂಡ ಘೋರ್ಪಡೆ, ಲೋಯ್ ಮಿಂಗ್ ಅವರನ್ನು 5-11, 11-8, 12-10, 4-11, 11-9 ಅಂತರದಲ್ಲಿ ಸೋಲಿಸುವ ಮೂಲಕ ಭಾರತದ ಗೆಲುವಿನ ಹಾದಿಯನ್ನು ಪೂರ್ಣಗೊಳಿಸಿದರು.