ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುರುಷರ ಶಾಟ್‌ಪುಟ್‌ F46 ವಿಭಾಗದಲ್ಲಿ ಹ್ಯಾಟ್ರಿಕ್‌ ಪದಕ ಗೆದ್ದ ಭಾರತ

Asian Para Games Live: ಮಹಿಳೆಯರ ಶಾಟ್ ಪುಟ್ F34 ವಿಭಾಗದಲ್ಲಿ ಭಾರತದ ಭಾಗ್ಯಶ್ರೀ ಜಾಧವ್ ಬೆಳ್ಳಿ ಪದಕ ಗೆದ್ದುಕೊಂಡರು. ಭಾಗ್ಯಶ್ರೀ ತಮ್ಮ ಮೂರನೇ ಪ್ರಯತ್ನದಲ್ಲಿ 8.19 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿ, ಎರಡನೇ ಸ್ಥಾನ ಪಡೆದರು.

ಪುರುಷರ ಶಾಟ್‌ಪುಟ್‌ F46 ವಿಭಾಗದಲ್ಲಿ ಹ್ಯಾಟ್ರಿಕ್‌ ಪದಕ ಗೆದ್ದ ಭಾರತ

Sachin Khilari -

Abhilash BC
Abhilash BC Oct 21, 2026 9:59 AM

ನಗೋಯಾ, ಅ.21: ಏಷ್ಯನ್ ಪ್ಯಾರಾ ಗೇಮ್ಸ್‌ ಪುರುಷರ ಶಾಟ್ ಪುಟ್ F46 ವಿಭಾಗದಲ್ಲಿ ಭಾರತವು ಬುಧವಾರ ಮೂರೂ ಪದಕಗಳನ್ನು ಗೆದ್ದುಕೊಂಡಿತು. ಸಚಿನ್ ಸರ್ಜೆರಾವ್ ಖಿಲಾರಿ ಅವರು ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದರು. ಮೊಹಮ್ಮದ್ ಯಾಸರ್ ಬೆಳ್ಳಿ ಪದಕ ಗೆದ್ದರೆ, ಪರ್ವೀನ್ ಕಂಚಿನ ಪದಕ ಪಡೆದರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಖಿಲಾರಿ, ಚೀನಾದಲ್ಲಿ ನಡೆದ ಹಿಂದಿನ ಆವೃತ್ತಿಯ ಕ್ರೀಡಾಕೂಟದಲ್ಲಿ ತಾನು ಗೆದ್ದಿದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ತಮ್ಮ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ 15.87 ಮೀಟರ್ ದೂರಕ್ಕೆ ಎಸೆಯುವ ಮೂಲಕ ಹೊಸ ಕ್ರೀಡಾಕೂಟ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆಯು 15.67 ಮೀಟರ್ ಆಗಿತ್ತು. ಮೂರನೇ ಸುತ್ತಿನಲ್ಲಿ 15.06 ಮೀಟರ್ ದೂರಕ್ಕೆ ಎಸೆದ ಮೊಹಮ್ಮದ್ ಯಾಸರ್ ಬೆಳ್ಳಿ ಪದಕ ಗೆದ್ದರೆ, 14.94 ಮೀಟರ್ ದೂರಕ್ಕೆ ಎಸೆದ ಪರ್ವೀನ್ ಕಂಚಿನ ಪದಕ ಪಡೆದರು.

ಬೆಳ್ಳಿ ಗೆದ್ದ ಭಾಗ್ಯಶ್ರೀ ಜಾಧವ್

ಇದಕ್ಕೂ ಮುನ್ನ ನಡೆದ ಮಹಿಳೆಯರ ಶಾಟ್ ಪುಟ್ F34 ವಿಭಾಗದಲ್ಲಿ ಭಾರತದ ಭಾಗ್ಯಶ್ರೀ ಜಾಧವ್ ಬೆಳ್ಳಿ ಪದಕ ಗೆದ್ದುಕೊಂಡರು. ಭಾಗ್ಯಶ್ರೀ ತಮ್ಮ ಮೂರನೇ ಪ್ರಯತ್ನದಲ್ಲಿ 8.19 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿ, ಎರಡನೇ ಸ್ಥಾನ ಪಡೆದರು. ಇದಕ್ಕೂ ಮುನ್ನ, ತಮ್ಮ ಎರಡನೇ ಪ್ರಯತ್ನದಲ್ಲಿ ಅವರು 8.14 ಮೀಟರ್ ದೂರ ಎಸೆದಿದ್ದರು.

ಏಷ್ಯನ್ ಪ್ಯಾರಾ ಗೇಮ್ಸ್‌; ಶಾಟ್‌ಪುಟ್, ಹೈ ಜಂಪ್‌ನಲ್ಲಿ ಚಿನ್ನ ಗೆದ್ದ ಭಾರತ

ಚೀನಾದ ಲಿಜುವಾನ್ ಜೋ 9.07 ಮೀಟರ್ ದೂರ ಎಸೆಯುವ ಮೂಲಕ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅವರದೇ ದೇಶದ ಕೈಯುನ್ ಜುವೊ 7.56 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದರು.

ಪುರುಷರ ಶಾಟ್‌ಪುಟ್ F53 ವಿಭಾಗದಲ್ಲಿ ಭಾರತದ ಆಯುಷ್ ವರ್ಮಾ ಚಿನ್ನದ ಪದಕವನ್ನು ಗೆದ್ದುಕೊಂಡರು. ಆಯುಷ್ ತಮ್ಮ ಐದನೇ ಪ್ರಯತ್ನದಲ್ಲಿ 8.16 ಮೀಟರ್ ದೂರಕ್ಕೆ ಎಸೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಯಿತು ಮತ್ತು ಇದು ಅವರು ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲು ನೆರವಾಯಿತು. ಇರಾನ್‌ನ ಅಲಿರೆಜಾ ಹೆಮಾಮಿ 8.09 ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕವನ್ನು ಗೆದ್ದರು. ಕಝಾಕಿಸ್ತಾನದ ಮಖಾಂಬೆತ್ ಸೆರಿಕ್ಕಾಲಿಯೆವ್ 6.81 ಮೀಟರ್ ದೂರದೊಂದಿಗೆ ಕಂಚಿನ ಪದಕವನ್ನು ಪಡೆದರು.