'ಡ್ರಾ'ದಲ್ಲಿ ಅಂತ್ಯ ಕಂಡ ಕರ್ನಾಟಕ-ಸೌರಾಷ್ಟ್ರ ರಣಜಿ ಪಂದ್ಯ
Ranji Trophy 2026-27: ಕರ್ನಾಟಕ ಪರ ಅನೀಶ್ ಕೆ.ವಿ. ಅರ್ಧಶತಕ ಬಾರಿಸಿದರು. 159 ಎಸೆದ ಎದುರಿಸಿ ನಿಂತು 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. 19 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರುಣ್ ನಾಯರ್ 33 ರನ್ಗಳಿಸಿದರು. ಕೃಷ್ಣನ್ ಶ್ರೀಜಿತ್ ಕೂಡ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.
Karnataka vs Saurashtra -
ಬೆಂಗಳೂರು, ಅ.21: ಭಾರತ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ ನಿರೀಕ್ಷೆಯಂತೆ ಡ್ರಾ ಆಯಿತು. ಅಂತಿಮ ದಿನದಾಟದಲ್ಲಿ ಸೌರಾಷ್ಟ್ರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದ್ದಲ್ಲಿಂದ ಬುಧವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ, ಮಧ್ಯಾಹ್ನ ತನಕ ಬ್ಯಾಟಿಂಗ್ ನಡೆಸಿ 7 ವಿಕೆಟ್ಗೆ 243 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡ ಅಂತಿಮವಾಗಿ ಏಳು ಓವರ್ಗಳು ಬಾಕಿ ಉಳಿದಿರುವಾಗ ಹ್ಯಾಂಡ್ಶೇಕ್ ಮಾಡಿ ಡ್ರಾ ಮಾಡಿಕೊಂಡಿತು. ಸೌರಾಷ್ಟ್ರ 42 ಓವರ್ಗಳಲ್ಲಿ ಎರಡು ವಿಕೆಟ್ಗೆ 137 ರನ್ ಗಳಿಸಿತು.
ಕರ್ನಾಟಕ ಪರ ಅನೀಶ್ ಕೆ.ವಿ. ಅರ್ಧಶತಕ ಬಾರಿಸಿದರು. 159 ಎಸೆದ ಎದುರಿಸಿ ನಿಂತು 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. 19 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರುಣ್ ನಾಯರ್ 33 ರನ್ಗಳಿಸಿದರು. ಕೃಷ್ಣನ್ ಶ್ರೀಜಿತ್ ಕೂಡ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಅವರು 52 ರನ್ ಗಳಿಸಿದರು. ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದ ಮನ್ವಂತ್ ಕುಮಾರ್ 31 ರನ್ ಗಳಿಸಿದರು. ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡ ಡಿಕ್ಲೇರ್ ಘೋಷಿಸಿತು. ಸೌರಾಷ್ಟ ಪರ ಪಾರ್ಥ ಭುಟ್ 80 ಕ್ಕೆ 3, ಸಮ್ಮರ್ ಗಜ್ಜರ್ 53ಕ್ಕೆ 2 ವಿಕೆಟ್ ಕಿತ್ತರು.
ಏಷ್ಯನ್ ಪ್ಯಾರಾ ಗೇಮ್ಸ್; ಪದಕ ಪಟ್ಟಿಯಲ್ಲಿ ಅರ್ಧಶತಕ ಬಾರಿಸಿದ ಭಾರತ
ದ್ವಿತೀಯ ಇನಿಂಗ್ಸ್ನಲ್ಲಿ ಸೌರಾಷ್ಟ್ರ ಪರ ಚಿರಾಗ್ ಜಾನಿ(63*) ಅರ್ಧಶತಕ ಬಾರಿಸಿದರೆ, ಜಯ್ ಗೋಹಿಲ್(22) ಅಜೇಯ ರನ್ ಗಳಿಸಿದರು.
ಹಿಮಾಚಲ ಪ್ರದೇಶವು ಪಂದ್ಯವನ್ನು ಅಂತಿಮ ದಿನದ ಎರಡನೇ ಅಧಿವೇಶನದವರೆಗೂ ಎಳೆತರುವ ಮೂಲಕ ಸೋಲನ್ನು ಕೊಂಚ ವಿಳಂಬಗೊಳಿಸಿತಾದರೂ, ಅಂತಿಮವಾಗಿ ಮುಂಬೈ ತಂಡವು ಆತಿಥೇಯ ತಂಡವನ್ನು ಒಂದು ಇನ್ನಿಂಗ್ಸ್ ಮತ್ತು 97 ರನ್ಗಳಿಂದ ಸೋಲಿಸಿ, ಸತತ ಎರಡನೇ ಬಾರಿಗೆ ಬೋನಸ್ ಅಂಕ ಸಹಿತ ಜಯ ದಾಖಲಿಸಿತು.
388 ರನ್ಗಳ ಹಿನ್ನಡೆಯಲ್ಲಿದ್ದ ಹಿಮಾಚಲ ತಂಡಕ್ಕೆ, ಪಂದ್ಯದಲ್ಲಿ ಮರುಪೈಪೋಟಿ ನೀಡಲು ವಿಶೇಷ ಪ್ರದರ್ಶನದ ಅಗತ್ಯವಿತ್ತು. ನಾಯಕ ಪುಖರಾಜ್ ಮನ್ (50, 126 ಎಸೆತಗಳು, 6 ಬೌಂಡರಿಗಳು) ಮತ್ತು ವೈಭವ್ ಕಲ್ಟಾ (63, 169 ಎಸೆತಗಳು, 10 ಬೌಂಡರಿಗಳು) ಅರ್ಧಶತಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡಿದರು. ಆದರೆ, ಮುಂಬೈನ ಅನುಭವಿ ಬೌಲಿಂಗ್ ದಾಳಿಯು ಅಂತಿಮವಾಗಿ ಹಿಮಾಚಲದ ಹೋರಾಟಕ್ಕೆ ತೆರೆ ಎಳೆಯಿತು ಮತ್ತು ಆತಿಥೇಯ ತಂಡವನ್ನು 291 ರನ್ಗಳಿಗೆ ಆಲೌಟ್ ಮಾಡಿತು.