INDW vs AUSW 2nd Semi-Final: ಸೆಮಿ ಫೈನಲ್‌ನಲ್ಲಿ ಟಾಸ್ ಸೋತ ಭಾರತ
ಎಂಟು ವರ್ಷಗಳ ಹಿಂದೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು 115ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಇಂದಿನ ಪಂದ್ಯದಲ್ಲಿಯೂ ಅದೇ ಆತ್ಮವಿಶ್ವಾಸದೊಂದಿಗೆ ಬ್ಯಾಟ್ ಬೀಸಬೇಕಿದೆ. ಮೊದಲ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ ಅವರು ನಾಯಕೀಯ ಆಟವಾಡಿ ಬಲಿಷ್ಠ ಇಂಗ್ಲೆಂಡ್‌ಗೆ ಹೀನಾಯ ಸೋಲುಣಿಸಿದ್ದರು.
ಟಾಸ್ ಗೆದ್ದ ಆಸೀಸ್ ತಂಡದ ನಾಯಕಿ ಅಲಿಸ್ಸಾ ಹೀಲಿ -
Abhilash BC
Oct 30, 2025 2:49 PM
ನವಿ ಮುಂಬೈ: ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಗುರುವಾರದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟಾಸ್ ಗೆದು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ಮೊದಲು ಬೌಲಿಂಗ್ ನಡೆಸಲಿದೆ. ಪಂದ್ಯದಲ್ಲಿ ಗೆದ್ದವರು ನ.2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.
ಮಂದಾನ ಜೊತೆಗೆ ಉತ್ತಮ ಆರಂಭ ನೀಡುತ್ತಿದ್ದ ಪ್ರತೀಕಾ ರಾವಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಶಫಾಲಿ ವರ್ಮಾಗೆ ಈ ಪಂದ್ಯದಲ್ಲಿ ಅವಕಾಶ ಲಭಿಸಿತು. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರಿಚಾ ಮತ್ತು ಕ್ರಾಂತಿ ಗೌಡ್ ಮತ್ತೆ ತಂಡಕ್ಕೆ ಮರಳಿದರು. ಇವರಿಗಾಗಿ ಹರ್ಲಿನ್ ಮತ್ತು ಉಮಾ ಜಾಗಬಿಟ್ಟುಕೊಟ್ಟರು.
ಅಲೀಸಾ ಹೀಲಿ ಗಾಯದಿಂದ ಚೇತರಿಕೆ ಕಂಡು ಮತ್ತೆ ತಂಡದ ನಾಯಕಿಯಾಗಿ ಆಡಲಿಳಿದರು. ಉಳಿದಂತೆ ವೇರ್‌ಹ್ಯಾಮ್ ಬದಲಿಗೆ ಸೋಫಿ ಮೊಲಿನಿಯಕ್ಸ್ ಅವಕಾಶ ಪಡೆದರು.
ಎಂಟು ವರ್ಷಗಳ ಹಿಂದೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು 115ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಇಂದಿನ ಪಂದ್ಯದಲ್ಲಿಯೂ ಅದೇ ಆತ್ಮವಿಶ್ವಾಸದೊಂದಿಗೆ ಬ್ಯಾಟ್ ಬೀಸಬೇಕಿದೆ. ಮೊದಲ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ ಅವರು ನಾಯಕೀಯ ಆಟವಾಡಿ ಬಲಿಷ್ಠ ಇಂಗ್ಲೆಂಡ್‌ಗೆ ಹೀನಾಯ ಸೋಲುಣಿಸಿದ್ದರು. ಅದೇ ರೀತಿ ಕೌರ್ ಕೂಡ ಮಿಂಚಬೇಕಿದೆ.
🚨 Toss 🚨#TeamIndia have been asked to bowl first.
— BCCI Women (@BCCIWomen) October 30, 2025
Updates ▶️ https://t.co/ou9H5gNDPT#WomenInBlue | #CWC25 | #INDvAUS pic.twitter.com/nl7pyuDBce
ಉಭಯ ಆಡುವ ಬಳಗ
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಅಮನ್‌ಜೋತ್ ಕೌರ್, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್(ವಿ.ಕೀ.), ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.
ಆಸ್ಟ್ರೇಲಿಯಾ: ಫೋಬೆ ಲಿಚ್‌ಫೀಲ್ಡ್, ಅಲಿಸಾ ಹೀಲಿ (ನಾಯಕಿ), ಎಲಿಸ್ ಪೆರ್ರಿ, ಬೆತ್ ಮೂನಿ, ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್, ಸೋಫಿ ಮೊಲಿನಿಯಕ್ಸ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್.