ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವಕ್ಕೆ ಹೊಸ ಮೂಲ ಬೆಲೆ ನಿಗದಿಪಡಿಸಿದ ಬಿಸಿಸಿಐ

ಮುಂದಿನ ಮೂರು ವರ್ಷಗಳ ಕಾಲ ಬಿಸಿಸಿಐ ಪ್ರಾಯೋಜಕತ್ವವನ್ನು ಬಯಸುತ್ತಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಸುಮಾರು 130 ಪಂದ್ಯಗಳು ನಿಗದಿಯಾಗಿವೆ. ಇದರಲ್ಲಿ 2026 ರಲ್ಲಿ ಟಿ 20 ವಿಶ್ವಕಪ್ ಮತ್ತು 2027 ರಲ್ಲಿ ಏಕದಿನ ವಿಶ್ವಕಪ್ ಸೇರಿವೆ. ಪರಿಷ್ಕೃತ ಮೂಲ ಬೆಲೆಯನ್ನು ಆಧರಿಸಿ, ಮಂಡಳಿಯು ಸಂಭಾವ್ಯವಾಗಿ 400 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಬಹುದು.

ಜೆರ್ಸಿ ಪ್ರಾಯೋಜಕತ್ವಕ್ಕೆ ಹೊಸ ಮೂಲ ಬೆಲೆ ನಿಗದಿಪಡಿಸಿದ ಬಿಸಿಸಿಐ

-

Abhilash BC Abhilash BC Sep 4, 2025 2:50 PM

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೈಟಲ್‌ ಪ್ರಾಯೋಜಕರಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈಗಾಗಲೇ ಬಿಡ್‌(Team india jersey sponsorship) ಆಹ್ವಾನಿಸಿದೆ. ಬಿಡ್ ದಾಖಲೆಗಳನ್ನು ಸೆ. 16ರೊಳಗೆ ಸಲ್ಲಿಸಬೇಕು. ಇದೀಗ ಬಿಸಿಸಿಐ(BCCI) ಪ್ರಾಯೋಜಕತ್ವದ ಮೌಲ್ಯವನ್ನು ಹೆಚ್ಚಿಸಿದೆ. ಈ ಹಿಂದೆ ಡ್ರೀಮ್11 ಪಾವತಿಸುತ್ತಿದ್ದ ಮೂಲ ಬೆಲೆಗಿಂತ ಹೆಚ್ಚಿನ ಹೊಸ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ, ಹೊಸ ಮೀಸಲು ಬೆಲೆ, ದ್ವಿಪಕ್ಷೀಯ ಪಂದ್ಯಗಳಿಗೆ 3.5 ಕೋಟಿ ರೂ. ಮತ್ತು ಬಹುಪಕ್ಷೀಯ ಪಂದ್ಯಗಳಿಗೆ, ವಿಶೇಷವಾಗಿ ಐಸಿಸಿ ಮತ್ತು ಎಸಿಸಿ ಸ್ಪರ್ಧೆಗಳಲ್ಲಿ ಸುಮಾರು 1.5 ಕೋಟಿ ರೂ. ಆಗಿದೆ.

ಮುಂದಿನ ಮೂರು ವರ್ಷಗಳ ಕಾಲ ಬಿಸಿಸಿಐ ಪ್ರಾಯೋಜಕತ್ವವನ್ನು ಬಯಸುತ್ತಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಸುಮಾರು 130 ಪಂದ್ಯಗಳು ನಿಗದಿಯಾಗಿವೆ. ಇದರಲ್ಲಿ 2026 ರಲ್ಲಿ ಟಿ 20 ವಿಶ್ವಕಪ್ ಮತ್ತು 2027 ರಲ್ಲಿ ಏಕದಿನ ವಿಶ್ವಕಪ್ ಸೇರಿವೆ. ಪರಿಷ್ಕೃತ ಮೂಲ ಬೆಲೆಯನ್ನು ಆಧರಿಸಿ, ಮಂಡಳಿಯು ಸಂಭಾವ್ಯವಾಗಿ 400 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಬಹುದು.

ಸೆಪ್ಟೆಂಬರ್ 16 ರಂದು ಬಿಡ್ಡಿಂಗ್ ನಡೆಯಲಿದ್ದು, ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ಗೆ ಮುನ್ನ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಡ್ರೀಮ್‌ ಇಲೆವನ್ ಮತ್ತು ಮೈ ಇಲೆವನ್ ಸರ್ಕಲ್ ಗೇಮಿಂಗ್‌ ಆ್ಯಪ್‌ಗಳ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಸುಮಾರು ಒಂದು ಕೋಟಿ ರೂಪಾಯಿ ಆದಾಯವಿತ್ತು.

ಇದನ್ನೂ ಓದಿ Rahul Dravid: ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ರಾಹುಲ್‌ ದ್ರಾವಿಡ್‌ ಮುಖ್ಯಸ್ಥ?